ಚಿಕ್ಕಮಗಳೂರು: – ತಳಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಎಲ್ಲಾ ಬೂತ್‌ಗಳಲ್ಲಿ ಜನತೆಯ ಸಮಸ್ಯೆಗಳನ್ನು ಆಲಿಸಬೇಕು. ಗ್ರಾಮೀಣ ಯುವಕರಿಗೆ ಪಕ್ಷದ ಸಿದ್ಧಾಂತವನ್ನು ಪರಿಚಯಿಸಿ ಸದಸ್ಯ ರನ್ನಾಗಿಸಿದರೆ ಭವಿಷ್ಯದಲ್ಲಿ ಕಾರ್ಯಕರ್ತರು ಉತ್ತಮ ನಾಯಕರಾಗಲು ಸಾಧ್ಯ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಯುವಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಪಕ್ಷ ಹಾಗೂ ವೈಯಕ್ತಿಕ ಕುಟುಂಬ ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬ ವನ್ನು ಸುರಕ್ಷಿತವಾಗಿ ಕಾಪಾಡುವಂತೆ, ಮಾತೃಸಮಾನ ಪಕ್ಷವನ್ನು ನಿಷ್ಟೆ, ಪ್ರಾಮಾಣಿಕತೆ ಹಾಗೂ ಚುರುಕಿನಿಂ ದ ಸಂಘಟಿಸುವ ಜೊತೆಗೆ ರಾಹುಲ್‌ಗಾಂಧಿಯವರ ಆಲೋಚನೆಗಳಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಒತ್ತು ನೀಡಬೇಕು ಎಂದರು.
ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೂತನ ತಂಡವು ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆ ಗಳನ್ನು ಪರಿಹರಿಸುವ ಗುಣ ಬೆಳೆಸಿಕೊಳ್ಳಬೇಕು. ಧ್ವನಿಯಿಲ್ಲದವರಿಗೆ ಧ್ವನಿ, ಸಾಮಾಜಿಕ ಜ್ಞಾನದ ಕೊರತೆ ಇ ರುವವರಿಗೆ ಆತ್ಮಸ್ಥೈರ್ಯ ತುಂಬುವ ಮನೋಭಾವ ರೂಢಿಸಿಕೊಂಡಲ್ಲಿ ಜನತೆಯಲ್ಲಿ ವಿಶ್ವಾಸತೆ ಮೂಡ ಲಿದೆ ಎಂದು ಹೇಳಿದರು.
ಭವಿಷ್ಯದ ಪ್ರಜೆಗಳು ದುರಾಡಳಿತ ಸರ್ಕಾರದಿಂದ ದಾರಿ ತಪ್ಪದಿರಲಿ ಎಂದು ರಾಹುಲ್‌ಗಾಂಧಿಯವ ರು ಯುವಕಾಂಗ್ರೆಸ್ ಸ್ಥಾಪಿಸಿ ಯುವಕ-ಯುವತಿಯರಲ್ಲಿ ಅರಿವು ಮೂಡಿಸಿದ್ದಾರೆ. ಆಯಾ ಗ್ರಾಮಗಳ ಯು ವಪೀಳಿಗೆಗೆಯನ್ನು ಪಕ್ಷದ ಸದಸ್ಯರನ್ನಾಗಿಸಿ ಮುಂದಿನ ಚುನಾವಣಾ ಅಖಾಡಕ್ಕೆ ಮೊದಲ ಹೆಜ್ಜೆ ಇರಿಸುವ ಜೊತೆ ರಾಜ್ಯದ ಪಂಚ ಗ್ಯಾರಂಟಿಗಳ ಯೋಜನೆಗಳ ಮಾಹಿತಿಗಳನ್ನು ತಲುಪಿಸಬೇಕು ಎಂದರು.
ಪ್ರಸ್ತುತ ರಾಹುಲ್‌ಗಾಂಧಿಯವರು ಸದಸ್ಯತ್ವ, ಚುನಾವಣೆ, ತರಬೇತಿ ಹಾಗೂ ಕಾರ್ಯಕ್ರಮ ಎಂಬ ನಾ ಲ್ಕು ಅಂಶಗಳ ಅಡಿಪಾಯ ಮಾಡಿಕೊಂಡಿದ್ದಾರೆ. ಮುಂದಿನ ಜಿ.ಪಂ., ತಾ.ಪಂ ಹಾಗೂ ಗ್ರಾ.ಪಂ.ಗಳಲ್ಲಿ ಚು ನಾವಣೆಗೆ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸಿ ಟಿಕೇಟ್ ನೀಡುವ ಮೂಲಕ ಕಾಂಗ್ರೆಸ್ ಎಲ್ಲೆಡೆ ರಾರಾಜಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ ಸಮಾಜದಲ್ಲಿ ನಾಯಕರಾಗಲು ಮೊ ದಲು ಸಾಮಾನ್ಯರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಬೇಕು. ಚುನಾವಣೆಗಳಲ್ಲಿ ಸೋಲು, ಗೆಲುವು ಸಾ ಮಾನ್ಯ. ಆದರೆ ಜನರ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದೇ ಮನಸ್ಸಿನಲ್ಲಿ ಶಾಶ್ವತವಾಗಿ ನಂಬಿಕೆ ಉಳಿಸಿಕೊ ಳ್ಳುವ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪಕ್ಷ ಸಂಘಟನೆ ಎಂದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡರೆ ಸಾ ಲದು, ಜನರನ್ನು ಭೇಟಿ ಮಾಡಿ ಕಾಂಗ್ರೆಸ್ ಸಿದ್ದಾಂತ, ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಚರ್ಚಿಸಿ ಮನವರಿಕೆ ಮಾಡಿದ್ದಲ್ಲಿ ಎಲ್ಲೆಡೆ ಕಾಂಗ್ರೆಸ್ ಸಂಘಟಿತವಾಗಿ ಬೆಳೆಯಬಹುದು. ವಿಶೇಷವಾಗಿ ಮಹಿಳೆಯರಿಗೆ ಶೇ.೫೦ ರಷ್ಟು ಮೀಸಲಾತಿ ನೀಡಿರುವ ಹೆಚ್ಚಿನ ಶ್ರಮ ವಹಿಸಬೇಕು ಎಂದು ಕಿವಿಮಾತು ಹೇಳಿದರು
ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವ ರ ಕ್ಷೇತ್ರವಾದ ಚಿಕ್ಕಮಗಳೂರು ವಿಶೇಷತನವನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ಮಲೆನಾಡಿನ ಪರಿಸರದ ಂತೆ ಶುದ್ಧಮನಸ್ಸಿನ ನಿವಾಸಿಗಳಾದ ಕಾರಣ ರಾವಣನಂತ ಹಿಂದಿನ ಶಾಸಕರನ್ನು ಸೋಲಿಸಿ ಮನೆಗೆ ಕಳುಹಿ ಸಲು ಯುವಕಾಂಗ್ರೆಸ್, ಎನ್‌ಎಸ್‌ಯುಐ ಹಾಗೂ ಮಹಿಳೆಯರ ಶಕ್ತಿಯೇ ಕಾರಣ ಎಂದರು.
ಭಾಜಪ ಮುಖಂಡರು ಧರ್ಮ, ಜಾತಿ ಹೆಸರಿನಲ್ಲಿ ಜನತೆಯಲ್ಲಿ ಮಂಕುಬೂದಿ ಎರಚುತ್ತಿದೆ. ಹಣ, ಆಸ್ತಿ ಕಳೆದರೂ ತಿರುಗಿ ಪಡೆಯಬಹುದು. ಆದರೆ ದೇಶದ ಯುವಪೀಳಿಗೆ ದಾರಿತಪ್ಪಿದರೆ ರಾಷ್ಟ್ರದ ಭವಿಷ್ಯ ದಲ್ಲಿ ಭಯಾನಕ ಸ್ಥಿತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ, ಯುವಕರನ್ನು ಧರ್ಮದ ಹೆಸರಿನಲ್ಲಿ ಪಾತಾಳ ಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|| ಅಂಶುಮಂತ್ ಮಾತನಾಡಿ ಯುವಕಾಂಗ್ರೆಸ್ ಸಾರಥ್ಯ ವಹಿಸಿರುವ ಅಧ್ಯಕ್ಷ ರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಸಾಗಲು ಇಚ್ಚಾಶಕ್ತಿಯ ಅವಶ್ಯಕತೆಯಿದೆ. ಜ ನರೊಂದಿಗೆ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಗಟ್ಟಿಯಾದ ವಿಚಾರವನ್ನು ಪ್ರಸ್ತಾಪಿಸಬೇಕು. ಪಕ್ಷ ಹಾ ಗೂ ರಾಜ್ಯಸರ್ಕಾರ ಅಭಿವೃದ್ದಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದಶಿ ಗಳಾದ ಸಿ.ಎನ್.ಆದಿಲ್, ಅಜಿತ್, ಶಿವಪ್ರಸಾದ್, ಬಾಹುಬಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ|| ಡಿ. ಎಲ್.ವಿಜಯ್‌ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಮೊಹ ಮ್ಮದ್ ನಯಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್, ಮುಖಂಡರುಗಳಾದ ತನೋಜ್‌ನಾ ಯ್ಡು, ಶಾದಬ್, ಸಿ.ಎನ್.ಅಕ್ಮಲ್, ಶಿವಕುಮಾರ್ ಮತ್ತಿತರರು ಉಪಸ್ಥಿ ತರಿದ್ದರು.
Listen to the people’s problems to organize the party from the grassroots level
Leave a comment