Home namma chikmagalur chikamagalur ಕೆ.ಎಸ್.ಆರ್.ಟಿ.ಸಿಯ ದುಸ್ಥಿತಿ ಕೆಟ್ಟು-ಕೆಟ್ಟು ನಿಲ್ಲುತ್ತಿರುವ ಬಸ್ಸುಗಳು
chikamagalurHomeLatest Newsnamma chikmagalur

ಕೆ.ಎಸ್.ಆರ್.ಟಿ.ಸಿಯ ದುಸ್ಥಿತಿ ಕೆಟ್ಟು-ಕೆಟ್ಟು ನಿಲ್ಲುತ್ತಿರುವ ಬಸ್ಸುಗಳು

Share
Share

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಅತ್ಯಂತ ದುಸ್ಥಿತಿಯಲ್ಲಿ ಇದೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ರಸ್ತೆ ಮಧ್ಯೆ, ಮಧ್ಯೆ ಕೆಟ್ಟು ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಫೆಬ್ರವರಿ 15 ಜಿಲ್ಲೆಯಲ್ಲಿ ಐದಾರು ಬಸ್ಸುಗಳು ಕೆಟ್ಟು ನಿಂತಿವೆ ಎಂಬ ಮಾಹಿತಿ ನೋಡಿದರೆ ಸಾರಿಗೆ ಯಾವ ಸ್ಥಿತಿಯಲ್ಲಿ ಇದೆ ಎಂದು ಹೇಳಬೇಕಾಗಿದೆ. ಲಕ್ಯಾ ಕ್ರಾಸ್ ಬಳಿ ಬಸ್ಸು ಕೆಟ್ಟು ನಿಂತರೆ ಇಲ್ಲಿಂದ ಹತ್ತು ಕಿಲೋಮೀಟರ್ ದೂರದ ಹಿರೇಗೌಜ ಸಮೀಪದಲ್ಲಿ ಮತ್ತೊಂದು ಬಸ್ಸು ಕೆಟ್ಟು ನಿಂತಿದೆ ಇದೇ ರೀತಿ ಮೂಡಿಗೆರೆ ಸಮೀಪ ಇನ್ನೊಂದು ಬಸ್ಸು ಕೆಟ್ಟು ನಿಂತಿದೆ ಇದರ ಜೊತೆಗೆ ಮತ್ತೆ ಎಲ್ಲಿ,ಎಲ್ಲಿ ಬಸ್ಸುಗಳು ಕೆಟ್ಟು ನಿಂತಿರುತ್ತವೋ ಬಲ್ಲವರ್ಯಾರು ?

ಸಣ್ಣಪುಟ್ಟ ಲೋಪದೋಷಗಳು ಸಹಜ ಬಿಡಿ ಕೆಟ್ಟು ನಿಂತಾಗ ಪ್ರಯಾಣಿಕರು, ಪರದಾಡ ಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದ ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿಯ ಬೇಕಾದವರು ಜನಪ್ರತಿನಿಧಿಗಳು ನಿತ್ಯ ಪೋಜ್ ಕೊಡುತ್ತಾ ತಿರುಗಾಡುತ್ತಿದ್ದಾರೆ ಎಂದು ಸಾರ್ವಜನಿಕರು ಉಗಿಯುತ್ತಿದ್ದಾರೆ.

ಬಸ್ಸುಗಳಲ್ಲಿ ನಿತ್ಯ ಸಂಚಾರ ಮಾಡುವುದು ಸಾಮಾನ್ಯ ಜನರು ಅದರಲ್ಲೂ ಹಿರಿಯ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ತಲುಪದಿದ್ದರೆ ಅನುಭವಿಸುವ ಯಾತನೆಗೆ ಹೊಣೆ ಯಾರು ? ಜೊತೆಗೆ ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಕೆಟ್ಟು ನಿಂತ ತಕ್ಷಣ ಪ್ರಯಾಣಿಕರ ಸಿಟ್ಟು ಸಹಜವಾಗಿ ಡ್ರೈವ್ ರಗಳು ಮತ್ತು ಕಂಡಕ್ಟರ್ ಮೇಲೆ ತಾನೇ ಪಾಪದ ಸಿಬ್ಬಂದಿ ಕ್ಯಾಕರಿಸಿ ಉಳಿಸಿಕೊಳ್ಳತ್ತಾರೆ.ಇದರಿಂದ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಸಂಗಗಳು ನಡೆದಿವೆ.

ಚಿಕ್ಕಮಗಳೂರು ಡಿಪೋದ ಎರಡು ಬಸ್ಸುಗಳು ಅಪಘಾತದಲ್ಲಿ ಪರಿಹಾರ ನೀಡದಿರುವುದರಿಂದ ನ್ಯಾಯಾಲಯದ ಆದೇಶ ಮೇರೆಗೆ ಜಪ್ತಿ ಮಾಡಲಾಗಿದೆ. ಇದು ದಿನನಿತ್ಯದ ಗೋಳು ಬಸ್ಸುಗಳು ಇಷ್ಟೊಂದು ಹೀನ ಸ್ಥಿತಿಯಲ್ಲಿರುವಾಗ ನಿರ್ವಹಣೆ ಮಾಡುವ ಅಧಿಕಾರಿಗಳು ಗೆಣಸು ತಿನ್ನುತ್ತಾ ಶಕ್ತಿ ಯೋಜನೆ ಎಂದು ಜಪಮಾಡುತ್ತಿದ್ದಾರ ಇನ್ನೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಸ್ಸುಗಳು ಕೆಟ್ಟು ನಿಲ್ಲುವುದು ಸರ್ಕಾರದ ಮತ್ತೊಂದು “ಗ್ಯಾರಂಟಿ” ಯೋಜನೆ ಎನ್ನುತ್ತಲೇ ಜಾಹೀರಾತು ನೀಡುತ್ತಿರುವಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

KSRTC’s poor condition, buses parked in poor condition

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...