Home namma chikmagalur ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ರಾಜೇಗೌಡರ ಹಾದಿ ರಂಪಾ – ಮಾಜಿ ಮಂತ್ರಿ ಜೀವರಾಜ್ ಬೀದಿ ರಂಪಾ ?
namma chikmagalurchikamagalurHomeLatest News

ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ರಾಜೇಗೌಡರ ಹಾದಿ ರಂಪಾ – ಮಾಜಿ ಮಂತ್ರಿ ಜೀವರಾಜ್ ಬೀದಿ ರಂಪಾ ?

Share
Share

ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಬಿಜೆಪಿ‌ V/S ಕಾಂಗ್ರೆಸ್ ಕಿತ್ತಾಟ ನಿರಂತರವಾಗಿ ನಡೆಯುತ್ತಿದೆ. ಇವರುಗಳ ಹಾದಿ ರಂಪಾ,ಬೀದಿ ರಂಪಾಟ ನೋಡಿ ಜನ ಮುಸಿ,ಮುಸಿ ನಗಡುತ್ತಲೇ ಇದು ಎಂತಹ ಮಹಾರಾಯರೆ ಎಂದು ಕೇಳುತ್ತಿದ್ದಾರೆ.
ಇತ್ತೀಚೆಗೆ ಇದು ತಾರಕಕ್ಕೆ ಏರಿದೆ. ಬೀದಿ ನಾಟಕದಂತೆ ಅವರನ್ನು ,ಇವರು,ಇವರನ್ನು, ಅವರು ಅಸಹ್ಯ ಪದಗಳಿಂದ ನಿಂದಿಸುತ್ತಿದ್ದಾರೆ.

ಬಿಜೆಪಿಯವರು ಪ್ರತಿಯೊಂದು ವಿಚಾರಕ್ಕೂ ಪ್ರತಿಭಟನೆ ಮಾಡುವುದು,ಪತ್ರಿಕಾ ಹೇಳಿಕೆ ನೀಡುವುದು.ಕೋರ್ಟ್ ಕಛೇರಿ ಎನ್ನುವುದನ್ನು ನೋಡಿ ಕಾಂಗ್ರೆಸ್ ನವರು “ಸತ್ಯ ಮೇವ ಜಯತೆ” ಬಿಜೆಪಿ ಮತ್ತು ಜೀವರಾಜ್ ರ ವಿರುದ್ಧ ಹರಿ ಹಾಯ್ದು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ಮತ್ತು ರಾಜೇಗೌಡರ ಗೊಂಡ ಗಿರಿ ಬಿಡಿ ಎಂದು ಉಗಿದಿದ್ದಾರೆ.ಇದನ್ನು ನೋಡಿದ ಜನ ಅಂಕೆ ಮೀರಿ ಹೋಗುತ್ತಿದೆ ನೀಚ ರಾಜಕಾರಣ ಎನ್ನಿಸುತ್ತಿದೆ ಎಂದು ಜನರಾಡಿ ಕೊಳ್ಳುತ್ತಿದ್ದಾರೆ.

ಶೃಂಗೇರಿ ತೀರ್ಥಹಳ್ಳಿ ಸೇರಿ ವಿಧಾನ ಸಭಾ ಕ್ಷೇತ್ರದಿಂದ ಮೊದಲಿಗೆ ಕಡಿದಾಳ್ ಮಂಜಪ್ಪ ಮುಖ್ಯ ಮಂತ್ರಿಯಾದ ಕ್ಷೇತ್ರದಿಂದ ವೀರಣ್ಣ ಗೌಡರಂತಹ ಮತ್ಸದಿ ,ಮಲೆನಾಡು ಗಾಂಧಿ ಎಂದು ಕರೆಸಿಕೊಂಡ ಹೆಚ್.ಜಿ.ಗೋವಿಂದೇಗೌಡರು ಬೇಗಾನೆ ರಾಮಯ್ಯ ಪ್ರತಿನಿಧಿಸಿದ ಕ್ಷೇತ್ರಕ್ಕೆ ಬಿಜೆಪಿ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟಾಚಾರ, ಸೆಕ್ಸ್ ವಾಸನೆ,ಕಿತ್ತಾಟ ಹೆಚ್ಚಾಗಿ ಕಾಂಗ್ರೆಸ್ ಇನ್ನೂ ಎತ್ತರಿಸಿದೆ ಎಂದು ಜನ ಹೇಳುತ್ತಿದ್ದಾರೆ.

ಜೀವರಾಜ್ ಎರಡು ಬಾರಿ ಸೋಲಿನಿಂದ ಹತಾಶರಾಗಿ ಈ ರೀತಿ ಗಾಯ ಮಾಡಿ ಕೊಂಡು ಓಡಾಡುತ್ತಿದ್ದಾರೆ.ಇದಕ್ಕೆ ಪ್ರತಿಯಾಗಿ ಶಾಸಕ ರಾಜೇಗೌಡರು ಇರುವೆ ಬಿಟ್ಟು ಕೊಂಡು ಕಿತ್ತಾಟ ಮಾಡಿ ಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಕೂಡಾ ಇದೆ. ದ್ವೇಷ, ಅಸೂಯೆ, ಅಶ್ಲೀಲ ಪದಗಳು ದಿನೆ,ದಿನೇ ಹೆಚ್ಚಾಗುತ್ತಿದ್ದು ಬಹಿರಂಗ ವಾಕ್ಸ್ ಸಮರದ ಜೊತೆಗೆ ಅವರು,ಇವರ ಮೇಲೆ ಇವರು,ಅವರ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.ಎರಡು ಪಕ್ಷದ ವರು ಕಿಡಿ ಕಾರಿ ಕೊಳ್ಳುತ್ತಿದ್ದಾರೆ. ಒಬ್ಬರಿಗೆ ಅಧಿಕಾರ ಕಳೆದುಕೊಂಡ ಹತಾಶೆ, ಇನ್ನೊಬ್ಬರಿಗೆ ಅಧಿಕಾರದ ಆಮಲು ಎಂದು ಜನ ಶಪಿಸುತ್ತಿದ್ದಾರೆ.

ಎಣಿಸಲಾಗದ ತಪ್ಪು ಕ್ಷಣ,ಕ್ಷಣಕ್ಕೂ ನಿನ್ನಿಂದ ಕುಣಿಯುತ್ತಿವೆ.ಮೈ ಮರೆತು ದಣಿಯದಲೆ ದಿನ,ದಿನದಿ ಎಂದು. ಮಂಕು ತಿಮ್ಮನ ಕಗ್ಗ ಇಬ್ಬರು ಓದಿ ಕೊಂಡರೆ ಉತ್ತಮ.

Is MLA Rajegowda’s path in Sringeri constituency a path for former minister Jeevaraj?

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...