ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಅದರ ಪರಿಣಾಮಗಳು ಮಾತ್ರ ಕಡಿಮೆ ಆಗಿಲ್ಲ, ಮಕ್ಕಳಂತೆ ಸಾಕಿದ ಹಸುಗಳು ರೈತನ ಕಣ್ಣೆದುರೆ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿರುವ ಘಟನೆ ಹೃದಯ ಕಲಕುವಂತಿದೆ.
ಉಕ್ಕಿ ಹರಿಯುತ್ತಿರೋ ಹಳ್ಳದಲ್ಲಿ 2 ಹಸುಗಳು ಕೊಚ್ಚಿ ಹೋಗುತ್ತಿವೆ. ಎನ್ ಆರ್ ಪುರ ತಾಲೂಕಿನ ಸಾತ್ಕೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಹಸುಗಳ ರಕ್ಷಣೆಗೆ ಮುಂದಾದರು ಪ್ರಯೋಜನ ಆಗಲಿಲ್ಲ. ಭಾರಿ ಮಳೆಯಿಂದಾಗಿ ಸಾತ್ಕೊಳಿ ಹಳ್ಳ ಉಕ್ಕಿ ಹರಿಯುತ್ತಿತ್ತು ಮೇಯಲು ಬಂದು ಸಿಲುಕಿಿಿಿಿಿಿ ಇವೆ ಹಸುಗಳು ಇದೇ ಗ್ರಾಮದ ನಾಗೇಶ್ ಹಾಗೂ ನಾಗರತ್ನ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಕಳೆದ ವರ್ಷ ಕೂಡಾ ಇದೇ ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದರು.ಈ ಸಾತ್ಕೊಳಿ ಹಳ್ಳಕ್ಕೆ ಸೇತುವೆಯು ಇಲ್ಲದಿರುವುದೇ ಇಂತಹ ಅವಘಡಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಕೂಡಲೇ ಸೇತುವೆ ನಿರ್ಮಿಸಿಕೊಡುವಂತೆ ಜನರ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಜೊತೆಗೆ ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ ಸಹ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ಕೊಪ್ಪ ಶೃಂಗೇರಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಮಳೆ ನಿನ್ನೆಯಿಂದ ಕೊಂಚ ಬಿಡುವು ನೀಡಿದೆ.
Leave a comment