Home Crime News ಕಡೂರು ಮಗು ಅಪಹರಣ ಪ್ರಕರಣದ ಅಸಲಿಯತ್ತೇನು ಗೊತ್ತಾ?
Crime News

ಕಡೂರು ಮಗು ಅಪಹರಣ ಪ್ರಕರಣದ ಅಸಲಿಯತ್ತೇನು ಗೊತ್ತಾ?

Share
Share

ಚಿಕ್ಕಮಗಳೂರು :
ಕಡೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದ ಮಗುವಿನ ಅಸಲಿಯತ್ತು ಏನು ಎಂಬುದೇ ಇದೀಗ ಬೆಳಕಿಗೆ ಬಂದಿದೆ. ಕೊನೆಗೂ ಪೋಷಕರ ಬೇಜವಾಬ್ದಾರಿಗೆ ಪೊಲೀಸರು ಪಾಠ ಹೇಳಿ ಕಳುಹಿಸಿದ್ದಾರೆ.

ರಸ್ತೆಯಲ್ಲಿ ನಿಂತು ಅಳುತ್ತಿದ್ದ ಮಗುವನ್ನು ಸಂತೈಸಿ, ರಕ್ಷಣೆ ಮಾಡಿ ಮನೆಗೆ ಕರೆದೊಯ್ದಿದ್ದ ಮಹಿಳೆಯ ಕೆಲಸಕ್ಕೆ ಸಾರ್ವಜನಿಕರು ಹಾಗೂ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ ಕಡೂರು ಪಟ್ಟಣದ ಪುರಸಭೆ ಬಳಿ ಮಗು ಮಲಗಿದೆ ಎಂದು ತಂದೆ ಮಗುವನ್ನ ಟಾಟಾ ಏಸ್ ಲಗೇಜ್ ಆಟೋದಲ್ಲಿಯೇ ಬಿಟ್ಟು ಎಲ್ಲೋ ಹೋಗಿದ್ದರು.‌ ಆದರೆ, ನಿದ್ದೆಯಿಂದ ಎದ್ದ ಮಗು ಗಾಡಿಯಿಂದ ಕೆಳಗಿಳಿದು ಅಪ್ಪ ಕಾಣದನ್ನ ನೋಡಿ ಗಾಡಿಯಿಂದ ಕೆಳಗೆ ಇಳಿದು ರಸ್ತೆಯಲ್ಲಿ ನಿಂತು ಅಳುತಿತ್ತು. ಮಗು ರಸ್ತೆಯಲ್ಲಿ ನಿಂತು ಅಳುವುದನ್ನು ಗಮನಿಸಿದ ಮಹಿಳೆ ಮಗುವನ್ನ ಎತ್ತಿಕೊಂಡು ಸಂತೈಸಿದ್ದಳು.

ರಸ್ತೆ ಬದಿಯ ಅಕ್ಕ ಪಕ್ಕದ ಅಂಗಡಿಗಳ ಬಳಿಯು ಮಗು ಯಾರದ್ದು ಎಂದು ವಿಚಾರಿಸಿದ್ದಳು. ಆದರೆ, ಎಲ್ಲರೂ ಗೊತ್ತಿಲ್ಲ ಎಂದ ಕಾರಣ ಅಳುತ್ತಿದ್ದ ಮಗುವನ್ನ ತಾನೇ ಮನೆಗೆ ಕರೆದೊಯ್ದಿದ್ದಳು. ಮಗು ಅಪಹರಣವಾಗಿದೆ‌ ಎಂದು ಪೊಲೀಸರು, ಸ್ಥಳಿಯರು ಹಾಗೂ ಮಗುವಿನ ಪೋಷಕರು ಮಗುವಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ, ಇಂದು ಮಗು ಅಪಹರಣದ ಸುದ್ದಿ ತಿಳಿದು ಮಗುವನ್ನ ರಕ್ಷಿಸಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಟ್ಟತಾವರೆಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ದಂಪತಿಗಳು ಇಂದು ಮಗುವನ್ನ ತರೀಕೆರೆ ಠಾಣೆಗೆ ತಂದು ಒಪ್ಪಿಸಿದ್ದಾರೆ. ಮಗು ರಸ್ತೆಯಲ್ಲಿ ಅಳುತ್ತಿತ್ತು. ಯಾರನ್ನ ಕೇಳಿದರೂ ನಮದ್ದಲ್ಲ ಎಂದರು. ಅದಕ್ಕೆ ಗೊತ್ತಾದ ಮೇಲೆ ತಂದು ಕೊಡಲು ನಾನೇ ಕರೆದುಕೊಂಡು ಬಂದಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಮಗುವನ್ನ ರಕ್ಷಿಸಿದ ಮಹಿಳೆಗೆ ತರೀಕೆರೆ ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಮಗುವಿನ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಮಗುವಿನ ಬಗ್ಗೆ ಪೋಷಕರಿಗಿದ್ದ ಬೇಜವಾಬ್ದಾರಿಗೆ ಪೊಲೀಸರು ಪೋಷಕರಿಗೆ ಬುದ್ಧಿವಾದ ಹೇಳಿ ಮಗುವನ್ನ ಪೋಷಕರ ಮಡಿಲಿಗೆ ಹಾಕಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

ಮುಂಜಾಗ್ರತಾ ಕ್ರಮವಾಗಿ ಪೋಲಿಯೊ ಲಸಿಕೆ ಹಾಕಿಸಿ

ಚಿಕ್ಕಮಗಳೂರು:ಯಾವುದೇ ರೋಗ ಬಂದ ಮೇಲೆ ಪರದಾಡುವುದಕ್ಕಿಂತ, ಅದು ಬರುವ ಮುನ್ನವೇ ತಡೆಯುವುದು ಬುದ್ಧಿವಂತಿಕೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆ ನೀಡಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ  ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ನಮ್ಮ ದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಅವರ...

Related Articles

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ...