ಚಿಕ್ಕಮಗಳೂರು : ಪೊಲೀಸ್ ಇಲಾಖೆಯಲ್ಲಿ ಖಾಕಿ ಧರಿಸಿದ ಮಾನವರಿಗೆ ಎಷ್ಟು ಗೌರವವಿದೆಯೋ ಅದೇ ರೀತಿ ಇಲಾಖೆಯ ಶ್ವಾನಗಳಿಗೂ ಅಷ್ಟೇ ಗೌರವವಿದೆ. ಅದರಲ್ಲೂ ನಿವೃತ್ತಿಯ ಬಗ್ಗೆಯೂ ಸಮಾನ ರೀತಿಯಲ್ಲಿ ಇಲಾಖೆ ನಡೆದುಕೊಳ್ಳುವುದು ವಿಶೇಷ ಇದಕ್ಕೆ ಸಾಕ್ಷಿ ಇತ್ತೀಚೆಗೆ ಚಿಕ್ಕಮಗಳೂರು ಡಾಗ್ ಸ್ಕ್ವಾಡ್ ನಲ್ಲಿ ಹತ್ತೂವರೆ ವರ್ಷ ಸೇವೆ ಸಲ್ಲಿಸಿದ ಪೃಥ್ವಿ ಎಂಬ ಶ್ವಾನಕ್ಕೆ ಇಲಾಖೆ ನೀಡಿದ ಹೃದಯ ಸ್ಪರ್ಶಿ ಬೀಳ್ಕೊಡುಗೆ
ಪೃಥ್ವಿ ಹುಟ್ಟಿದ್ದು ದಿ:02/01/2014 ರಂದು ಇಲಾಖೆಗೆ ಸೇರಿದ್ದು ದಿ:04/03/2014 ರಲ್ಲಿ ಪೊಲೀಸ್ ಶ್ವಾನದಳಕ್ಕೆ “ಸ್ಪೋಟಕ ಪತ್ತೆ” ಶ್ವಾನವಾಗಿ ಸೇರ್ಪಡೆಯಾಗಿದ್ದು, ಶ್ವಾನದ ಹ್ಯಾಂಡ್ಲರ್‌ಗಳಾಗಿದ್ದವರು ದಿನೇಶ.ವಿ. ಮತ್ತು ಲೋಕೇಶಪ್ಪ. ಇದರ ಟ್ರೈನಿಂಗ್ ಸಿ.ಎ.ಆರ್. ದಕ್ಷಿಣ, ಆಡುಗೋಡಿ, ಬೆಂಗಳೂರಿನಲ್ಲಿರುವ ಶ್ವಾನದಳ ತರಬೇತಿ ಕೇಂದ್ರದಲ್ಲಿ ನಡೆದಿತ್ತು, ಪೃಥ್ವಿ ಒಟ್ಟು ತನ್ನ 10 ವರ್ಷ 07 ತಿಂಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧ ಬಂದೋಬಸ್ತ್ ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿ ಉನ್ನತ ಬಂದೋಬಸ್ತ್ ಗಳಲ್ಲಿ ವಿ.ಐ.ಪಿ. ಮತ್ತು ವಿ.ವಿ.ಐ.ಪಿ. ಭದ್ರತೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆಗೆ ಸಹಕರಿಸಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಾಗೂ ಪ್ರವಾಸಿ ತಾಣವಾಗಿದ್ದು, ಅದರಂತೆ ನಕ್ಸಲ್ ಕರ್ತವ್ಯಗಳಲ್ಲಿ ಕೂಡಾ ಭಾಗವಹಿಸಿರುತ್ತದೆ. ಪೊಲೀಸ್ ಇಲಾಖೆ ವಾರ್ಷಿಕ ನಡೆಸಲಾಗುವ ಪೊಲೀಸ್ ಡ್ಯೂಟಿ ಮೀಟ್‌ನ 2019 ನೇ ಸಾಲಿನಲ್ಲಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಂಚಿನ ಪದಕ ಪಡೆದು, ಜಿಲ್ಲೆಯ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕ್ಯಾಂಪ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಶ್ವಾನಗಳ ಕರ್ತವ್ಯದ ಬಗ್ಗೆ ವಿವರಣೆ ಹಾಗೂ ಡಾಗ್ ಶೋ ಗಳನ್ನು ನೀಡುವಲ್ಲಿ ಪಾತ್ರ ವಹಿಸಿತ್ತು,
ಇದೀಗ ಪೃಥ್ವಿ ವಯೋನಿವೃತ್ತಿ ಹೊಂದಿದ್ದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಕ್ರಮ್ ಅಮಟೆ ಹಾಗೂ ಡಿಎಆರ್ ಸಿಬ್ಬಂದಿ ಬೀಳ್ಕೊಡುಗೆ ಕೊಟ್ಟರು.
Leave a comment