Home namma chikmagalur ajjampura ಅಜ್ಜಂಪುರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಯುವಕ ಸಾವು, ಇಬ್ಬರಿಗೆ ಗಾಯ
ajjampurachikamagalurCrime NewsLatest Newsnamma chikmagalur

ಅಜ್ಜಂಪುರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಯುವಕ ಸಾವು, ಇಬ್ಬರಿಗೆ ಗಾಯ

Share
Share

ಅಜ್ಜಂಪುರ: ಎದುರಿನಿಂದ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಎಕ್ಸ್‌ಎಲ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಅಜ್ಜಂಪುರ–ಚನ್ನಗಿರಿ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಅ.12ರ ಮಧ್ಯರಾತ್ರಿ ಸಂಭವಿಸಿದೆ.

ಕಂಸಾಗರ ಗ್ರಾಮದ ಯಲ್ಲಪ್ಪ (ಮೃತ) ಅಪಘಾತದಲ್ಲಿ ಮೃತಪಟ್ಟ ಯುವಕ. ವಿಜಯ್ ಮತ್ತು ಶ್ರೇಯಸ್ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಂಸಾಗರ ಗ್ರಾಮದ ಯಲ್ಲಪ್ಪ ಅವರು ಅ.12ರಂದು ಸಂಜೆ ತಮ್ಮ ಮಾವ ರಾಮಪ್ಪ ಅವರಿಗೆ ಸೇರಿದ KA-14-EB-6154 ನೋಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್‌ಎಲ್ ಬೈಕ್‌ನಲ್ಲಿ ವಿಜಯ್ ಮತ್ತು ಶ್ರೇಯಸ್ ಅವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಕಲ್ಲತ್ತಿಗಿರಿಗೆ ತೆರಳುತ್ತಿದ್ದರು.

ಅವರು ಅಜ್ಜಂಪುರ–ಚನ್ನಗಿರಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ, ರಾತ್ರಿ ಸುಮಾರು 12 ಗಂಟೆಗೆ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಎದುರಿನಿಂದ ಲಾರಿಯೊಂದು ಬರುತ್ತಿತ್ತು. ಈ ಸಂದರ್ಭದಲ್ಲಿ ಲಾರಿಯನ್ನು ಹಿಂದಿಕ್ಕಲು ಮುಂದಾದ ಮತ್ತೊಂದು ಬೈಕ್‌ನ ಸವಾರ ರಸ್ತೆ ಬಲಭಾಗಕ್ಕೆ ವೇಗವಾಗಿ ಬಂದು ಯಲ್ಲಪ್ಪ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಮೂವರೂ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಯಲ್ಲಪ್ಪ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು. ಸಾರ್ವಜನಿಕರು ಗಾಯಾಳುಗಳನ್ನು ವಾಹನದಲ್ಲಿ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಯಲ್ಲಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿಜಯ್ ಮತ್ತು ಶ್ರೇಯಸ್ ಅವರಿಗೂ ತಲೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಯಲ್ಲಪ್ಪ ಅವರ ತಾಯಿ ಗಿರಿಜಮ್ಮ ಅವರು ಅ.13ರಂದು ಅಜ್ಜಂಪುರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಅಪಘಾತಕ್ಕೆ ಕಾರಣವಾದ KA-18-EN-9987 ನೋಂದಣಿ ಸಂಖ್ಯೆಯ ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ದೂರಿನ ಆಧಾರದ ಮೇಲೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ. 266/2026ರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Head-on collision between two bikes in Ajjampura: Youth dies two injured.

Share

Leave a comment

Leave a Reply

Your email address will not be published. Required fields are marked *

Don't Miss

ಚುನಾವಣಾ ಆಯೋಗದ ಕ್ರಮದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಇಂಡಿಯಾ ಒಕ್ಕೂಟದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಹನುಮಂತಪ್ಪ...

ಸಿ.ಟಿ.ರವಿಯಿಂದ ನೂತನ ಅರಣ್ಯ ಭವನದ ಕಾಮಗಾರಿ ಪರಿಶೀಲನೆ

ಚಿಕ್ಕಮಗಳೂರು: ನಗರದಲ್ಲಿ ೯.೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅರಣ್ಯ ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕಟ್ಟಡದ ಅಂತಿಮ ಹಂತದ ಸಣ್ಣಪುಟ್ಟ ತಿದ್ದುಪಡಿಗಳನ್ನು ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ...

Related Articles

ತರೀಕೆರೆ ಶಾಸಕ-ಕಡೂರು ಶಾಸಕ, ಬೀದಿಗೆ ಬಿದ್ದ ವಸೂಲಿ : ಆನಂದ್ ಆಕ್ರೋಶ.

ಕಡೂರು ಶಾಸಕ ಆನಂದ್ ತರೀಕೆರೆ ಶಾಸಕ ಶ್ರೀನಿವಾಸ್ ಕುಟುಂಬದ ಮೇಲೆ ತೀವ್ರ ಆಕ್ರೋಶಗೊಂಡು ವಸೂಲಿ ಬಗ್ಗೆ...

ಮಳಲೂರು ಏತ ನೀರಾವರಿ ಕಾಮಗಾರಿಗೆ ₹21.5 ಕೋಟಿ ಡಿಪಿಆರ್ ಸಿದ್ಧ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಮಳಲೂರು ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ₹21.5...

ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆಯ ಬಹುತೇಕ ಪ್ರದೇಶಗಳು ಬರ ಪರಿಸ್ಥಿತಿ...

ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಸಿಪಿಐ (ಎಂಎಲ್) ಪ್ರತಿಭಟನೆ

ಚಿಕ್ಕಮಗಳೂರು: ನಗರದ ಅಜಾದ್ ಪಾರ್ಕಿನಲ್ಲಿ ಬುಧವಾರ ಸಿಪಿಐ (ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಂಘಟನೆಯು, ಮುಖ್ಯ...