ಚಿಕ್ಕಮಗಳೂರು: ಉಗಾದಿ ಹಬ್ಬದ ಹಿಂದೆ_ಮುಂದೆ ಮಳೆ ಬರುತ್ತದೆ. ಆದರೆ ಈ ವರ್ಷ ಆರಂಭವಾದ ಮಳೆಯಲ್ಲಿ ರಾಶಿ,ರಾಶಿ ಆಲಿಕಲ್ಲು ಮಳೆ ಬರುತ್ತಿರುವುದು ನೋಡಿ ರೈತರು ,ಬೆಳೆಗಾರರು ಕಂಗಲಾಗಿದ್ದಾರೆ ಮುಂದೆ ಏನು ಎಂಬ ಚಿಂತೆ ಉಂಟಾಗಿದೆ.
ಹವಮಾನ ವೈಪರೀತ್ಯಗಳಿಂದ ದಪ್ಪ, ದಪ್ಪ ಆಲಿಕಲ್ಲು ಬೀಳುತ್ತಿವೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಎರಡು ಬಾರಿ ಆಲಿಕಲ್ಲು ಮಳೆ ಬಂದಿದೆ ಆದರೆ ನಿನ್ನೆ ಸುರಿದ ಮಳೆಯಲ್ಲಿ ರಾಶಿ,ರಾಶಿ ಮತ್ತು ನಿರೀಕ್ಷೆ ಮೀರಿದ ಚಪ್ಪಡಿ ಸೈಜಿನ ಆಲಿಕಲ್ಲು ಬಿದ್ದಿವೆ.
ಖಾಂಡ್ಯ ಹೋಬಳಿ,ಕೊಪ್ಪ , ಬಾಳೆಹೊನ್ನುರು ,ಶೃಂಗೇರಿ ಕೆಲ ಭಾಗಗಳಲ್ಲಿ ಮೂಡಿಗೆರೆ ತಾಲೂಕಿನ ಕೆಲವು ಭಾಗಗಳಲ್ಲಿ ಮತ್ತು ತರೀಕೆರೆಯ ಸುತ್ತ ಮುತ್ತ ಆಲಿಕಲ್ಲು ಮಳೆ ಅರ್ಧ ಗಂಟೆ ಸುರಿದಿರುವುದು ಜಿಲ್ಲೆಯ ಜನರಿಗೆ ಆತಂಕ ಸೃಷ್ಟಿಯಾಗಿದೆ.
ಆಲಿಕಲ್ಲು ಮಳೆಯಿಂದ ಮಲೆನಾಡಿನ ಕಾಫಿ ಮತ್ತು ಅಡಕೆ ಬೆಳೆಗಾರರು ಬಯಲು ಸೀಮೆಯ ಅಡಿಕೆ ಬೆಳೆಗಾರರ ಜೊತೆಗೆ ತರಕಾರಿ ಬೆಳೆದ ರೈತರಿಗೆ ಆತಂಕ ಉಂಟಾಗಿದೆ ಎನ್ನಲಾಗುತ್ತಿದೆ.
ಮಲೆನಾಡಿನ ಕಾಫಿ,ಕಾಳು ಮೆಣಸು,ಅಡಿಕೆ ಮತ್ತು ಕೆಲವು ತರಕಾರಿ ಬೆಳೆಗಳಾಳು ಮತ್ತು ಬಯಲುಸೀಮೆಯ ಅಡಿಕೆ ಹಾಗು ಮಾವು, ಮೆಣಸು ಮತ್ತು ತರಕಾರಿ ಬೆಳೆಗಳಾದ ಟಮೋಟ, ಮುಳುಗಾಯಿ,ಕ್ಯಾರೆಟ್, ಬೀಟ್ ರೊಟ್ ,ಸೊಪ್ಪುಗಳು ಮತ್ತಿತರ ತರಕಾರಿಗಳು ನಾಶವಾಗುತ್ತವೆ.
ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಮಾವು ಬೆಳೆಯುತ್ತಾರೆ ಮುಖ್ಯವಾಗಿ ತರೀಕೆರೆ ತಾಲ್ಲೂಕು ಅಜ್ಜಂಪುರ ತಾಲ್ಲೂಕು ಕಡೂರು ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ,ಕಸಬಾ ಹೋಬಳಿಗಳಲ್ಲಿ ಮಾವು ಹೆಚ್ಚಾಗಿ ಬೆಳೆಯುತ್ತಾರೆ ಆಲಿಕಲ್ಲು ಮಳೆಯಿಂದ ಫಸಲಿಗೆ ಭಾರಿ ಹೊಡೆತ ಬೀಳುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆಲಿಕಲ್ಲು ಮಳೆ ಬಂದರೆ ನಮ್ಮ ಕತೆ ಮುಗಿಯುತ್ತದೆ ಸಂಕಷ್ಟ ಕಟ್ಟಿಟ್ಟಾ ಬುಟ್ಟಿ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.
Farmers in distress due to hailstorm
Leave a comment