Home namma chikmagalur chikamagalur ಡಾ.ಪ್ರದೀಪ್ ಕೆಂಜಿಗೆ ಕೃತಿಗೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ
chikamagalurHomeLatest Newsnamma chikmagalur

ಡಾ.ಪ್ರದೀಪ್ ಕೆಂಜಿಗೆ ಕೃತಿಗೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ

Share
Share

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಸೃಜನಶೀಲ ಲೇಖಕ ಹಾಗೂ ಸೂಕ್ಷ್ಮಮತಿಯ ಮಾತುಗಾರ ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ 2024ನೇ ಸಾಲಿನ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಭಾಜನವಾಗಿದೆ.

ಈ ಪುರಸ್ಕಾರಕ್ಕೆ ರಾಜ್ಯದಂತಒಟ್ಟು 17 ಪುಸ್ತಕ ಗಳು ಆಯ್ಕೆಯಾಗಿದ್ದು ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಡಾ. ಪ್ರದೀಪ್ ಕೆಂಜಿಗೆ ಮತ್ತು ಶಶಿ ತರೀಕೆರೆ ಈ ಎರಡು ಜನ ಕೃತಿಕಾರ ಎರಡು ಪುಸ್ತಕಗಳಿಗೆ ಈ ಮನ್ನಣೆ ಲಭಿಸಿರುವುದು ಜಿಲ್ಲೆಯ ವಿಷೇಶತೆಯಾಗಿದೆ.

2024ನೇ ಇಸವಿಯಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಆಯ್ಕೆ ಮಾಡಲಾಗಿದ್ದು ಸಂಕೀರ್ಣ ಪ್ರಕಾರದಲ್ಲಿ ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ ಕೃತಿಗೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿ 25 ಸಾವಿರ ನಗದು ಬಹುಮಾನ,ಶಾಲು. ಹಾರ ಫಲಕ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ನರವಾನರ ಕೃತಿ ಚಿಂಪಾoಜಿಗಳ ನಡವಳಿಕೆ, ಜೀವನವಿಧಾನ ಮುಂತಾದವುಗಳನ್ನು ವಿಶ್ಲೇಷಿಸುವ ವೈಜ್ಞಾನಿಕ ಕೃತಿಯಾಗಿದ್ದು ಜೀವ ವಿಜ್ಞಾನದ ಸಂಶೋಧನೆಗಳನ್ನು, ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಮನಮುಟ್ಟುವಂತೇ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಡಾ.ಪ್ರದೀಪ್ ಕೆಂಜಿಗೆ ಅವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರೊಡನೆ ಪ್ಯಾಪಿಲಾನ್ 1. 2, ವಿಸ್ಮಯ 1 2 3 ಕೃತಿಗಳನ್ನು ರಚಿಸಿದ್ದು ಪ್ಯಾಪಿಯೋನ್ 3, ಬರ್ಮುಡಾ ಟ್ರಯಾ0ಗಲ್ ಒಂದು ಅದ್ಭುತಯಾನವಾಗಿದೆ.

ಹೆಬ್ಬಾವಿನೊಡನೆ ಹೋರಾಟ ಕೃತಿಯನ್ನು ಸಹ ಪ್ರಕಟಿಸಿದ್ದಾರೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಡಾ. ಪ್ರದೀಪ್ ಕೆಂಜಿಗೆ ಅವರು ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದಿದ್ದಾರೆ.

ಕೆಫೆ ಕಾಫಿ ಡೇಯಲ್ಲಿ ಸಂಶೋಧನಾ ಮತ್ತು ಅಭಿವೃದ್ದಿ ವಿಭಾಗದ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೊಟ್ಟಿಗೆಹಾರದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

Dr. Pradeep Kenji wins best book award for his work

Share

Leave a comment

Leave a Reply

Your email address will not be published. Required fields are marked *

Don't Miss

ಡ್ರೋನ್ ಕ್ಯಾಮರಾದಲ್ಲಿ ಮರಿಗಳ ಜೊತೆ ಆನೆಗಳ ಸಂಚಾರದ ಅಪರೂಪದ ದೃಶ್ಯ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಲ ದಿನಗಳಿಂದ ಕಾಡಾನೆಗಳ ಹಾವಳಿ ಜೋರಾಗಿದ್ದು, ಜನ ಮನೆಯಿಂದ ಹೊರಬಂದು ರಸ್ತೆ ನಡೆಯುವುದಕ್ಕೆ ಭಯ ಪಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿರು ಘಟನೆಗಳು ವರದಿಯಾಗಿವೆ. ಇದರ...

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಚಿಕ್ಕಮಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ವಿಡಿಯೋ ಅಸಲಿಯತ್ತು ಏನೆಂದು ತನಿಖೆಯಿಂದ ಬಯಲಾಗಿದೆ. ಕೆಲವು ದಿನಗಳ ಹಿಂದೆ ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ...

Related Articles

ಭದ್ರಕಾಳಿ ವೀರಭದ್ರೇಶ್ವರರ ಸಿಡಿ ಮಹೋತ್ಸವ

ಕಳಾಸಪುರ: ಇಲ್ಲಿನ ಭದ್ರಕಾಳಿ ವೀರಭದ್ರೇಶ್ವರರ 24ನೇ ವರ್ಷದ ರಥೋತ್ಸವ ಮತ್ತು ಸಿಡಿ ಮಹೋತ್ಸವವನ್ನು ಜನ ಭಕ್ತಿ...

ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಎಲೆಕ್ನಿಕಲ್ ಸಾಮಗ್ರಿ ಕಳ್ಳತನ

ಅಜ್ಜಂಪುರ: ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಭಾರಿ ಪ್ರಮಾಣದ ಎಲೆಕ್ನಿಕಲ್ ಸಾಮಗ್ರಿಗಳನ್ನು ಕಳ್ಳತನವಾಗಿರುವ ಘಟನೆ ಬೆಳಕಿಗೆ...

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ

ಬೆಂಗಳೂರು: ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ...

ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಕಂಟಕದಿಂದ ಸದ್ಯಕ್ಕೆ ಬಚಾವ್

ಚಿಕ್ಕಮಗಳೂರು: ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮೀಸಲಾತಿ ತರಲು ಯತ್ನಿಸಿ ಪ್ರಸ್ತುತ...