Home namma chikmagalur ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಎಂಬ ರೌಂಡ್ ಅಫ್
namma chikmagalurchikamagalurHomeLatest News

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಎಂಬ ರೌಂಡ್ ಅಫ್

Share
Share

ಚಿಕ್ಕಮಗಳೂರು: ರೌಂಡ್ ಅಫ್ ಎಂಬ ಕಳೆ ನಾಶಕ ಔಷಧ ಹುಟ್ಟಿದ ರೋಚಕ ವಿಷಯ ಕೇಳಿ. ಅಮೆರಿಕಾ ಎಂಬ ಮೃಗ ದಂತ ದೇಶ ಚಿಕ್ಕ ಜಿಂಕೆಯಂತಹ ವಿಯಟ್ನಾಂ ದೇಶದ ಮೇಲೆ ಯುದ್ಧ ಸಾರಿದಾಗ ವಿಯಟ್ನಾಂ ದೇಶದೊಳಗೆ ಎಂಟ್ರಿ ಆಗಲು ದಟ್ಟ ಅರಣ್ಯದ ಗಿಡ ಮರಗಳು ಮತ್ತು ಹುಲ್ಲು ಮತ್ತು ಸಸ್ಯ ಭೇದಗಳು ತಡೆಯಾಗಿತ್ತು ಇವುಗಳನ್ನು ನಾಶಪಡಿಸಲು ಅಮೆರಿಕಾದವರು “ರೌಂಡ್ ಅಫ್ ” ಕಳೆ ನಾಶಕ ಕಂಡುಹಿಡಿದರು. ಈಗಾ ಇದು ಭೂಮಿಯನ್ನು ನುಂಗುತ್ತಿದೆ.ಇದರಿಂದ ರೌಂಡ್ ಅಫ್ ರಾಜಕಾರಣಿಗಳ ಸಂತತಿ ಹೆಚ್ಚಾಗುತ್ತಿದೆ.ಇವರುಗಳು ಕೂಡ ಜನರಿಗೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ರೌಂಡ್ ಅಫ್ ಆಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷವಾಯಿತು.ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಕೂಡ ಜಿಲ್ಲೆಯಲ್ಲಿ ರೌಂಡ್ ಅಫ್ ಔಷಧಿಯಂತೆ ಆಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಾರೆ. ಸಂಜೆ ಹೆಲಿಕಾಪ್ಟರ್ ನಲ್ಲಿ ಕಾಫಿ ತೋಟಕ್ಕೆ ಬಂದು ಇಳಿದು ಬೆಳಗ್ಗೆ ಜಿಲ್ಲಾ ಕೇಂದ್ರಕ್ಕೆ ಬಂದು ಕಾಟಚಾರದ ಮೀಟಿಂಗ್, ಸಭೆ, ಸಮಾರಂಭದಲ್ಲಿ ಭಾಗವಹಿಸಿ ಮಧ್ಯಾಹ್ನ ಬೆಂಗಳೂರಿನ ಮನೆಯ ಮೇಲೆ ಹೆಲಿಕಾಪ್ಟರ್ ನಲ್ಲಿ ಇಳಿಯುವ ಜಾರ್ಜ್‌ ಇಲ್ಲಿನ ಶಾಸಕರುಗಳಿಗೆ ಅಚ್ಚುಮೆಚ್ಚಿನವರು.ಶ್ರೀಮಂತ ಎಂಬ ಕಾರಣಕ್ಕೆ ಜೈ,ಜೈ ಎನ್ನುತ್ತಿದ್ದಾರೆ.

ಆಸ್ತಿ ಪಾಸ್ತಿ ನೋಡಲು ಸಮಯವಿಲ್ಲ ಇನ್ನೂ ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಕಷ್ಟ ಎಲ್ಲಿ ವಿಚಾರಿಸಲು ಸಾಧ್ಯವಿಲ್ಲ. ಒಳ್ಳೆಯ ಡೋನರ್ ಇದರ ಲಾಭ ಕೆಲ ಮುಖಂಡರು ಬಳಸಿಕೊಳ್ಳುತ್ತಿದ್ದಾರೆ. ಕೇರಳದಿಂದ ಕಿತ್ತಳೆ ಹಣ್ಣು ವ್ಯಾಪಾರಕ್ಕೆ ಕೊಡುಗು ಜಿಲ್ಲೆಗೆ ಬಂದು ಕಂಡಕ್ಟರ್ ಆಗಿದ್ದ ಗುಂಡೂರಾವ್ ಸ್ನೇಹ ಬೆಳೆಸಿ ಮರದ ವ್ಯಾಪಾರಕ್ಕೆ ಇಳಿಯುತ್ತಾರೆ.ಅಲ್ಲಿಂದ ಸಾಗಿದ ಪಯಣ ಈಗ ಎಷ್ಟು ಕೋಟಿ ಬಾಳುತ್ತಾರೆ ಎಂಬ ಯಕ್ಷ ಪ್ರಶ್ನೆ ಮಾತ್ರ ನಿಗೂಢ.

ಐದು ಸಾವಿರ ಹೆಕ್ಟೇರ್ ಗೂ ಹೆಚ್ಚಿನ ಕಾಫಿ ತೋಟದ ಮಾಲೀಕ.ನೂರಾರು ಸಾವಿರಾರು ಕೋಟಿಯ “ಎಂಬೆಸೆ ಬಿಲ್ಡಿಂಗ್ “ಗಳ ಮಾಲೀಕ, ನೂರಾರು ಕೋಟಿ ಬಾಡಿಗೆ ಬಾಚುವ ರೆಸಾರ್ಟ್,ಹೋಟೆಲ್ ಗಳ ಒಡೆಯ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಜಾರ್ಜ್ ಮನೆಯ ಮೇಲೆ ಹೆಲಿಪ್ಯಾಡ್ ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದರೆ ಜಬರ್ ದಸ್ತು ಖಾತೆಯ ಕ್ಯಾಬಿನೆಟ್ ಮಂತ್ರಿ ಜೊತೆಗೆ ಸೋನಿಯಾ ಶ್ರೀರಕ್ಷೆ ಕಾಂಗ್ರೆಸ್ ನ ಟ್ರಜರಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ಜೊತೆಗೆ ಜಿಲ್ಲೆಗೆ ” ರೌಂಡ್ ಅಫ್ ” ಔಷಧ ಸಿಂಪಡಿಸುತ್ತಿರುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಜನ.ಜಿಲ್ಲೆಯ ಉಸ್ತುವಾರಿ ನೆಪ ಮಾತ್ರ ಹೀಗಾಗಿ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದೆ

District in-charge Minister K.J. George’s round-up

Share

Leave a comment

Leave a Reply

Your email address will not be published. Required fields are marked *

Don't Miss

ದಬ್ಬಾಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಯತ್ನ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

Related Articles

ಬಯಲ ಬಂಗಾರದ”ಈರುಳ್ಳಿ” ಬಲು ದೂರ,ದೂರ

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು...

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...