Home ಧರ್ಮಸ್ಥಳ ಕ್ಷೇತ್ರ ಅವಹೇಳನ ವಿರುದ್ಧ ಭಕ್ತರ ಪ್ರತಿಭಟನೆ
HomechikamagalurLatest Newsnamma chikmagalur

ಧರ್ಮಸ್ಥಳ ಕ್ಷೇತ್ರ ಅವಹೇಳನ ವಿರುದ್ಧ ಭಕ್ತರ ಪ್ರತಿಭಟನೆ

Share
Share

ಚಿಕ್ಕಮಗಳೂರು: ಸಾಕ್ಷಿ ದೂರುದಾರನನ್ನು ಮುಂದಿಟ್ಟು ಕೊಂಡು ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲಾಗುತ್ತಿದೆ ಎಂದು ಆರೋಪಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದ ತನಕ ಮೆರವಣಿಗೆ ನಡೆಸಿದರು. ವಿವಿಧೆಡೆಯಿಂದ ಭಿತ್ತಿಪತ್ರ ಹಿಡಿದು ಬಂದಿದ್ದ ಸಾವಿರಾರು ಭಕ್ತರು, ಮೆರವಣಿಗೆಯುದ್ದಕ್ಕೂ ಮಂಜುನಾಥನ ಭಜನೆ ಮಾಡಿದರು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಕ್ತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ. ಸತ್ಯ ಮತ್ತು ಧರ್ಮದ ಪರ ನ್ಯಾಯ ನೀಡುವ ಧರ್ಮಸ್ಥಳದ ಬಗ್ಗೆ ಅವಹೇಳನ ನಿಲ್ಲಿಸಬೇಕು. ಅಪಪ್ರಚಾರ ಮಾಡುವವರಿಗೆ ಮಂಜುನಾಥ ಸ್ವಾಮಿ- ಅಣ್ಣಪ್ಪ ಸ್ವಾಮಿಯಿಂದ ಶಿಕ್ಷೆಯಾಗಲಿದೆ ಎಂದರು.

ಭಕ್ತರ ಭಾವನೆ ಜತೆ ಚಲ್ಲಾಟ ನಿಲ್ಲಿಸಬೇಕು. ಭಕ್ತಿ-ನಂಬಿಕೆ-ಆರಾಧನೆಯ ಶಕ್ತಿಪೀಠ ಧರ್ಮಸ್ಥಳ, ಅಪಪ್ರಚಾರ ನಡೆಸುತ್ತಿರುವ ಗುಂಪನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.

ಶ್ರೀಕ್ಷೇತ್ರದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವ ಮಹೇಶ್ ಶೆಟ್ಟಿ ತಿಮರೋಡಿ, ಎಂ.ಡಿ. ಸಮೀರ್, ಕುಡ್ಲ ರ್‍ಯಾಂಪೇಜ್, ಅಜೇಯ ಅಂಚನ್, ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಸುಳ್ಳು ಸುದ್ದಿ ಹಬ್ಬಿಸಿ ಸಮಾಜ ಒಡೆಯುವ ಕೆಲಸವನ್ನು ತಿಮರೋಡಿ ಮತ್ತವರ ಗುಂಪು ಮಾಡುತ್ತಿದೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದೆ ಎಂದು ದೂರಿದರು.

ಸಾಕ್ಷಿ ದೂರುದಾರ ನೀಡಿದ ದೂರು ಆಧರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ತನಿಖೆ ಧರ್ಮಪರವಾಗಿ ಕೊನೆಯಾಗಬೇಕೆಂದರೆ ಸಾಕ್ಷಿ ದೂರುದಾರನ ಹಿಂದೆ ಇರುವವರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಗುಂಪಿಗೆ ಸಹಾಯ ಮಾಡುತ್ತಿರುವರು ಯಾರು, ಪ್ರಚೋದನೆ ನೀಡುತ್ತಿರುವವರು ಯಾರು, ಇದರ ಹಿಂದಿರುವ ಉದ್ದೇಶ ಏನು ಎಂಬುದರ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ವಂದೇ ಮಾತರಂ ಟ್ರಸ್ಟ್‌ ಚಿಪ್ರಗುತ್ತಿ ಪ್ರಶಾಂತ್, ಬಿಜೆಪಿ ಮುಖಂಡರಾದ ಸೀತಾರಾಮ ಭರಣ್ಯ, ಸಿ.ಎಚ್. ಲೋಕೇಶ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರಿಕಾಂತ್ ಪೈ ಭಾಗವಹಿಸಿದ್ದರು.

Devotees protest against desecration of Dharmasthala Kshetra

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆದರೆ, ನಮ್ಮ ರಾಜ್ಯ ಸರ್ಕಾರ ಈಗಾಗಲೇ ತನ್ನ ಪಾಲಿನ ೧೨,೦೦೦...

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಜೆಪಿ ರಾಜಕೀಯ

ಕಡೂರು: ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ಅವರು ರಾಜಕೀಯ ವಲಯದ ಪ್ರಮುಖ ವಿದ್ಯಮಾನಗಳು, ರಾಜ್ಯದ ಜಲವಿವಾದ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತಾಗಿ ಮಾಧ್ಯಮಗಳ ಎದುರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ....

Related Articles

ವಾಹನ ಡಿಕ್ಕಿಗೆ ಬೈಕ್ ಸವಾರ ಸಾವು

ಬೀರೂರು: ಕಡೂರು ತಾಲ್ಲೂಕಿನ ಹೇಮಗಿರಿ ಗೇಟ್ ಬಳಿಯ ಜಮೀನಿನಲ್ಲಿ ಕೆಲಸ ಮುಗಿಸಿ, ಅಜ್ಜಂಪುರ ಕಡೆಗೆ ಬೀರೂರು...

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ...

ದನ ಅಕ್ರಮ ಸಾಗಾಟ: ಪ್ರಕರಣ ದಾಖಲು

ಅಲ್ಲೂರು: ಇಲ್ಲಿಗೆ ಸಮೀಪದ ಹಾಂದಿಯ ಅಂಬೇಡ್ಕರ್ ವೃತ್ತದ ಬಳಿಯ ರಜಾ ಕ್ಯಾಂಟೀನ್ ಎದುರು 5 ವರ್ಷ...

ಅಕ್ರಮ ನುಸುಳುಕೋರರ ಮತಪಟ್ಟಿಗೆ ದಾಖಲಿಸದಂತೆ ಕ್ರಮವಹಿಸಿ

ಚಿಕ್ಕಮಗಳೂರು: ಎಸ್‌ಐಆರ್ ಸಂಬಂಧ ಬಿಎಲ್‌ಒ೨ಗಳು ಪಕ್ಷದ ಮತದಾರರನ್ನು ಪಟ್ಟಿ ಯಿಂದ ಕೈಜಾರದಂತೆ ಗಮನಹರಿಸುವ ಜೊತೆಗೆ ಅಕ್ರಮ...