ಚಿಕ್ಕಮಗಳೂರು: ನಗರಸಭೆ ಯ ಅಧ್ಯಕ್ಷ ಸ್ಥಾನಕ್ಕೆ ಜುಲೈ 5 ರಂದು ಚುನಾವಣೆ ನಡೆಯಲಿದ್ದು ಜನತಾದಳದ ಬಿ.ಶೀಲಾ ದಿನೇಶ್ ರವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.
ಅಧ್ಯಕ್ಷರಾಗಿದ್ದ ಬಿಜೆಪಿಯ ಸುಜಾತ ಶಿವಕುಮಾರ್ ರವರ ಹೈಡ್ರಾಮಾದಿಂದ ತಲೆ ನೋವಾಗಿತ್ತು ಸಂಧಾನ ನಡೆಸಿದ ಬಿಜೆಪಿ ಮತ್ತು ದಳದವರು ಸುಜಾತರವರ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.
ಬಿಜೆಪಿ ಮತ್ತು ದಳದ ಮೈತ್ರಿ ಯಿಂದಾಗಿ ಕೇವಲ ಮೂರು ಸದಸ್ಯರನ್ನು ಹೊಂದಿರುವ ಜನತಾದಳವರಿಗೆ ಭರ್ಜರಿ ಲಾಟರಿ ಹೊಡೆದಂತಾಗಿದೆ.
ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನಗರಸಭೆಯ ಅಧಿಕಾರ ಹಿಡಿದಿದ್ದ ಜನತಾದಳ ಕ್ಕೆ ಬಯಸದೇ ಬಂದ ಭಾಗ್ಯವಾದರೆ.ದಿನೇಶ್ ಕುಟುಂಬದವರು 15 ನೇ ವಾರ್ಡಿನಿಂದ ಸತತ ಇಪ್ಪತ್ತೈದು ವರ್ಷಗಳಿಂದ ನಗರಸಭೆಗೆ ಆಯ್ಕೆ ಆಗುತ್ತಿದ್ದಾರೆ ದಿನೇಶ್ ಮೂರು ಬಾರಿ ನಗರಸಭೆಗೆ ಆಯ್ಕೆಯಾಗದ್ದರು ಇವರ ಸಹೋದರಿ ದ್ರಾಕ್ಷಾಯಿಣಿ ಮತ್ತು ಪ್ರಸ್ತುತ ಬಿ.ಶೀಲಾ ದಿನೇಶ್ ಆಯ್ಕೆಯಾಗಿರುವುದು ವಿಶೇಷ.
ವಾರ್ಡ್ ನ ಸದಸ್ಯರಾಗಿ ಸದಾಕಾಲವೂ ಸೇವೆ ಮಾಡುತ್ತಿರುವುದರಿಂದ ನಗರಸಭೆ ಚುಕ್ಕಾಣಿ ಹಿಡಿಯುವ ಅದೃಷ್ಟ ಒದಗಿ ಬಂದಿದೆ.
B. Sheila Dinesh confirmed as Municipal Council President
Leave a comment