Home namma chikmagalur chikamagalur ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಲು ಮನವಿ
chikamagalurHomeLatest Newsnamma chikmagalur

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಲು ಮನವಿ

Share
Share

ಚಿಕ್ಕಮಗಳೂರು: ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆಯನ್ನು ಕ್ವಿಯರ್ ಹಕ್ಕುಗಳ ಸಂಸ್ಥೆ ಹಾಗೂ ಲೈಂಗಿಕ ಕಾರ್ಯಕರ್ತರ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟ ಬಲವಾಗಿ ವಿರೋಧಿಸಿವೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಮೇಘ ಮಲ್ನಾಡ್ ಅವರು, ಈ ಹೊಸ ತಿದ್ದುಪಡಿ ಮಸೂದೆಯು ವ್ಯಕ್ತಿಗಳ ಸ್ವಯಂ ಘೋಷಿತ ಲಿಂಗತ್ವ ಗುರುತಿನ ಹಕ್ಕನ್ನು ಕಸಿದುಕೊಳ್ಳುವಂತಿದೆ ಮತ್ತು ಇದು ನೇರವಾಗಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2014ರ ಸುಪ್ರೀಂ ಕೋರ್ಟ್‌ ಐತಿಹಾಸಿಕ ‘ನಲ್ಲಾ’ ತೀರ್ಪಿನ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮ ಲಿಂಗತ್ವವನ್ನು ಸ್ವಯಂ ಗುರುತಿಸಿಕೊಳ್ಳುವ ಹಕ್ಕಿದ್ದು, ಅದಕ್ಕೆ ಯಾವುದೇ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆದರೆ ಪ್ರಸ್ತುತ ತಿದ್ದುಪಡಿಯಲ್ಲಿ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿರುವುದು ವ್ಯಕ್ತಿಗಳ ಗೌಪ್ಯತೆ ಮತ್ತು ಘನತೆಗೆ ಧಕ್ಕೆ ತರುತ್ತದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಮಸೂದೆಯಲ್ಲಿ ‘ಟ್ರಾನ್ಸ್‌ಜೆಂಡ‌ರ್’ ಎಂಬ ಪದಕ್ಕೆ ನೀಡಲಾಗಿರುವ ಮಿತವಾದ ವ್ಯಾಖ್ಯಾನದಿಂದಾಗಿ ಹಿಜ್ರಾ, ಕಿನ್ನರ್, ಅರವಾನಿ ಸೇರಿದಂತೆ ಹಲವು ಸಮುದಾಯಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಇದರಿಂದ ಕೇವಲ ಕೆಲವೇ ಸಮುದಾಯಗಳಿಗೆ ಕಾನೂನು ರಕ್ಷಣೆ ಸೀಮಿತವಾಗಲಿದ್ದು, ಲಿಂಗತ್ವ ಅಲ್ಪಸಂಖ್ಯಾತ ಪುರುಷರು ಮತ್ತು ನಾನ್ ಬೈನರಿ ವ್ಯಕ್ತಿಗಳು ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Appeal to withdraw Transgender Persons Amendment Bill

Share

Leave a comment

Leave a Reply

Your email address will not be published. Required fields are marked *

Don't Miss

ಆಲಿಕಲ್ಲು ಮಳೆಯಿಂದ ರೈತರು ಕಂಗಾಲು

ಚಿಕ್ಕಮಗಳೂರು:  ಉಗಾದಿ ಹಬ್ಬದ ಹಿಂದೆ_ಮುಂದೆ ಮಳೆ ಬರುತ್ತದೆ. ಆದರೆ ಈ ವರ್ಷ ಆರಂಭವಾದ ಮಳೆಯಲ್ಲಿ ರಾಶಿ,ರಾಶಿ ಆಲಿಕಲ್ಲು ಮಳೆ ಬರುತ್ತಿರುವುದು ನೋಡಿ ರೈತರು ,ಬೆಳೆಗಾರರು ಕಂಗಲಾಗಿದ್ದಾರೆ ಮುಂದೆ ಏನು ಎಂಬ ಚಿಂತೆ...

ಸೈಬರ್ ವಂಚಕರ ಜಾಲದಲ್ಲಿಆಲ್ಲೂರಿನ ಪ್ರದೀಪ್‌ ಗೆ ವಂಚನೆ

ಚಿಕ್ಕಮಗಳೂರು : ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ತಾಂತ್ರಿಕತೆಯನ್ನು ಬಳಸಿಕೊಂಡು ಸಾರ್ವಜನಿಕರ ಹಣ ಲೂಟಿ ಮಾಡುವ ಸೈಬರ್ ವಂಚಕರ ಜಾಲಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ...

Related Articles

ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಎಲೆಕ್ನಿಕಲ್ ಸಾಮಗ್ರಿ ಕಳ್ಳತನ

ಅಜ್ಜಂಪುರ: ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಭಾರಿ ಪ್ರಮಾಣದ ಎಲೆಕ್ನಿಕಲ್ ಸಾಮಗ್ರಿಗಳನ್ನು ಕಳ್ಳತನವಾಗಿರುವ ಘಟನೆ ಬೆಳಕಿಗೆ...

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ

ಬೆಂಗಳೂರು: ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ...

ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಕಂಟಕದಿಂದ ಸದ್ಯಕ್ಕೆ ಬಚಾವ್

ಚಿಕ್ಕಮಗಳೂರು: ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮೀಸಲಾತಿ ತರಲು ಯತ್ನಿಸಿ ಪ್ರಸ್ತುತ...

ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಅಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೈಲಿಮನೆ...