Home namma chikmagalur chikamagalur ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾರ್ಯನಿರ್ವಹಿಸಿ
chikamagalurHomeLatest Newsnamma chikmagalur

ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾರ್ಯನಿರ್ವಹಿಸಿ

Share
Oplus_16908288
Share

ಚಿಕ್ಕಮಗಳೂರು: ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಉಂಟಾಗದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಭಂವರ್ ಮೀನಾ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಕೇಸ್ವಾನ್‌ನಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅಗತ್ಯವಿದ್ದಲ್ಲಿ ಅವುಗಳ ಮಾಲೀಕರೊಂದಿಗೆ ಮಾತನಾಡಬೇಕು ಎಂದರು

ಈಗಾಗಲೇ ಜಿಲ್ಲೆಯಲ್ಲಿ ೩೧ ಗ್ರಾಮ ಪಂಚಾಯಿತಿಗಳ ೪೦ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ, ಟ್ಯಾಂಕರ್‌ಗಳ ಮೂಲಕ ೧೬ ಗ್ರಾಮಗಳಿಗೆ ಕುಡಿಯು ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ಮಾಡಿ ನೀಡುವಂತೆ ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಅಭಾವ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದರು.

ಪಶು ಸಂಗೋಪನ ಇಲಾಖೆ ಉಪ ನಿರ್ದೇಶಕ ಡಾ. ಗುರುಶಾಂತಪ್ಪ.ಬಿ ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ದನ, ಎಮ್ಮೆ, ಕುರಿ, ಮೇಕೆ ಸೇರಿದಂತೆ ಒಟ್ಟು ೪,೦೫,೩೪೦. ಜಾನುವಾರುಗಳಿದ್ದು ಜಿಲ್ಲೆಯ ಜಾನುವಾರುಗಳಿಗೆ ಒಂದು ವಾರಕ್ಕೆ ೧೧,೨೭೫ ಟನ್ಗಳಷ್ಟು ಮೇವಿನ ಅವಶ್ಯಕತೆ ಇದೆ ಎಂದು ಹೇಳೀದರು.

ಪ್ರಸ್ತುತ ಜಿಲ್ಲೆಯಲ್ಲಿ ೨,೧೦,೮೪೨. ಟನ್ಗಳಷ್ಟು ಮೇವು ಲಭ್ಯವಿದೆ ಗೋಮಾಳ ಅರಣ್ಯ ಪ್ರದೇಶ ಹಾಗೂ ಬೀಳು ಭೂಮಿಗಳಲ್ಲಿ ಬೆಳೆದಿರುವ ಹಸಿಮೆವನ್ನು ಒಂದು ವ್ಯಕ್ತಿಗೆ ವಾರ್ಷಿಕ ಒಂದು ಟನ್ ನಂತೆ ಪ್ರತಿ ತ್ರೈಮಾಸಿಕಕ್ಕೆ ದಾಸ್ತಾನಿಗೆ ತೆಗೆದುಕೊಳ್ಳಲಾಗುವುದು ಬಹುವಾರ್ಷಿಕ ಮೇವು ಬೆಳಗಳಿಂದ ಉತ್ಪಾದನೆಯಾದ ಮೇವನ್ನು ದಾಸ್ತಾನಿಗೆ ತೆಗೆದುಕೊಳ್ಳಲಾಗುವುದು.

ಈಗಾಗಲೇ ಮೇವು ಬೀಜದ ಕಿಟ್‌ಗಳನ್ನು ನೀರಾವರಿ ವ್ಯವಸ್ಥೆ ಹೊಂದಿರುವ ಜಾನುವಾರು ಮಾಲೀಕರುಗಳಿಗೆ ವಿತರಿಸಲಾಗಿದ್ದು ಡಿಸೆಂಬರ್ ಮಾಹೆಯ ಮಧ್ಯಭಾಗದಲ್ಲಿ ೧೧,೩೫೮  ಒಣಮೆವು ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ ಎಂದರು

ವಿ.ಬಿ.ಜಿ ರಾಮ್ ಜಿ ಯೋಜನೆಯಡಿ ಮೇವು ಬೆಳೆಯಲು ಅಗತ್ಯ ಕ್ರಮ ವಹಿಸಬೇಕು ಜಿಲ್ಲೆಯಲ್ಲಿ ಎಷ್ಟು ಗೋಕಟ್ಟೆಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಕಡೂರು ತಹಸೀಲ್ದಾರ್ ಪೂರ್ಣಿಮ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ದಿವಾಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲ್ ಜಾದವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು

Address the drinking water problem faced by the public.

Share

Leave a comment

Leave a Reply

Your email address will not be published. Required fields are marked *

Don't Miss

ಅಲ್ಪಸಂಖ್ಯಾತ ಯುವಕರಿಗೆ ಸೈನಿಕ ತರಬೇತಿಗೆ ಸಿ.ಟಿ. ರವಿ ವಿರೋಧ

ಚಿಕ್ಕಮಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 6,000ಕ್ಕೂ ಹೆಚ್ಚು ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ಸೈನಿಕ ತರಬೇತಿ ನೀಡಲು ಹೊರಡಿಸಿರುವ ಆದೇಶಕ್ಕೆ ಬಿಜೆಪಿ ನಾಯಕ ಹಾಗೂ ಶಾಸಕ ಸಿ.ಟಿ. ರವಿ ತೀವ್ರ...

ದೀಪಾವಳಿಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಯುವತಿ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ತಂದೆ-ಮಗಳು ಬೈಕ್ ಅಪಘಾತಕ್ಕೀಡಾಗಿ, ಮಗಳು ಮೃತಪಟ್ಟಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ತರೀಕೆರೆ ತಾಲೂಕಿನ ಭೈರಾಪುರ ಕ್ರಾಸ್ ಬಳಿ ನಡೆದಿದೆ....

Related Articles

ಕಾಂಗ್ರೆಸ್ ನ ಅಡುಗೂಲಜ್ಜಿ ಕತೆ ಬಿಜೆಪಿಯ ಹೋರಾಟವೋ ಹೊಂದಾಣಿಕೆಯೋ ಜೆಡಿ‌ಎಸ್ ವ್ಯಾಪಾರಸ್ಥರ ಕಾಟ ?

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಪಕ್ಷಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ,ಯಾವ ಪಕ್ಷಗಳ ಆಟಗಾರರು ಮತ್ತು ಆಟ...

ಮನೆ ಕಳ್ಳತನಕ್ಕೆ ಹೊಂಚು ಹಾಕಿದ ಖದೀಮ: ಕಾಂಪೌಂಡ್ ಹಾರಿ ಪರಾರಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ. ನಗರದ ಹೌಸಿಂಗ್...

ಬ್ಯಾಗ್‌ನಿಂದ ₹4.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಡೂರು: ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿಟ್ಟಿದ್ದ ಸುಮಾರು 42 ಗ್ರಾಂ ತೂಕದ...

ಎಸ್. ಬಿದರೆ ಗ್ರಾಮದಲ್ಲಿ ಪೋಕ್ಸೋ ಪ್ರಕರಣ ದಾಖಲು

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಗೆ ಬಾಲ್ಯವಿವಾಹ ಮಾಡಿಸಿ, ಆಕೆ ಐದು ತಿಂಗಳ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಕರಾಯಪಟ್ಟಣ...