Home namma chikmagalur chikamagalur ಸರಣಿ ಕಳ್ಳತನ ಪ್ರಕರಣದ ಆರೋಪಿಗಳ ಬಂಧನ-ಚಿನ್ನಾಭರಣ ವಶ
chikamagalurHomeLatest Newsnamma chikmagalur

ಸರಣಿ ಕಳ್ಳತನ ಪ್ರಕರಣದ ಆರೋಪಿಗಳ ಬಂಧನ-ಚಿನ್ನಾಭರಣ ವಶ

Share
Share

ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಮೂಲದ ಮಹಮದ್ ಹನೀಫ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ಸುಮಾರು 11,45,000 ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಜೊತೆಗೆ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂಪಾಯಿ ಬೆಲೆಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಾಮ್ಮಾ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಾಲಾಜಿ ಸಿಂಗ್ ಹಾಗೂ ಸಿಪಿಐ ಅಬ್ದುಲ್ ಖಾದರ್ ನೇತೃತ್ವದ ತಂಡವು ವೈಜ್ಞಾನಿಕ ತನಿಖೆ ನಡೆಸಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಕೊಪ್ಪ ಮತ್ತು ಹರಿಹರಪುರ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳು ಇತ್ಯರ್ಥಗೊಂಡಂತಾಗಿದ್ದು, ಕದ್ದ ಮಾಲನ್ನು ಬೆಂಗಳೂರಿನ ಗೋಲ್ಡ್ ಕಂಪನಿಗಳಲ್ಲಿ ಮಾರಾಟ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯ ಈ ಸಮಯೋಚಿತ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಅಧೀಕ್ಷಕರು ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.

ಸಾರ್ವಜನಿಕರು ಮನೆಯಲ್ಲಿ ಹೆಚ್ಚು ನಗದು ಇಡದೆ ಬ್ಯಾಂಕ್ ಲಾಕರ್‌ಗಳನ್ನು ಬಳಸುವಂತೆ ಹಾಗೂ ಮನೆಯ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಪೊಲೀಸ್‌ ಇಲಾಖೆ ಜಾಗೃತಿ ಮೂಡಿಸಿದೆ. ಊರಿಗೆ ತೆರಳುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕಳ್ಳತನ ತಡೆಗೆ ಸಹಕರಿಸಬೇಕೆಂದು ಇಲಾಖೆಯು ಮನವಿ ಮಾಡಿದೆ.

Accused in serial theft case arrested, jewellery seized

Share

Leave a comment

Leave a Reply

Your email address will not be published. Required fields are marked *

Don't Miss

ಏ.9 ರಿಂದ ಆದಿಚುಂಚನಗಿರಿ ಮಹಾ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

ಚಿಕ್ಕಮಗಳೂರು: ನಗರದ ಆದಿಚುಂಚನಗಿರಿ ಮಹಾ ವಿದ್ಯಾಲಯದಲ್ಲಿ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಎಮರ್ಜಿಂಗ್ ರಿಸರ್ಚ್ ಇನ್ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಅಂಡ್ ಮಷಿನ್ ಇನ್ಫಾರ್ಮ್ಯಾಟಿಕ್ಸ್ ಎಂಬ ಅಂತರಾಷ್ಟ್ರೀಯ ಸಮ್ಮೇಳನವನ್ನು ಏ.೯ ಮತ್ತು ೧೦...

ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಚಿಕ್ಕಮಗಳೂರು: ಕಮಲದ ಚಿಹ್ನೆಯಡಿ ಉದಯಿಸಿದ ಭಾಜಪ, ಜಗತ್ತಿನ ಎದುರು ದೇ ಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅನೇಕ ಸವಾಲು ಹಾಗೂ ಏಳುಬೀಳಿನ ನಡುವೆಯೂ ಎದೆ ಗುಂದದೇ ರಾಷ್ಟದ ಏಕೀಕರಣಕ್ಕೆ ದುಡಿಯುತ್ತಿದೆ ಎಂದು...

Related Articles

ಸಿಎಂ ಪತ್ನಿ ಜಿಲ್ಲೆಯ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರೆ,...

ಟಾಟಾಏಸ್-ಬೈಕ್ ನಡುವೆ ಅಪಘಾತ:ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ತರೀಕೆರೆ: ಟಾಟಾಏಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ...

ದೇಗುಲ ಮನಸ್ಸು, ಮೈಯನ್ನು ಶುದ್ಧಗೊಳಿಸುವ ಕೇಂದ್ರ

ಚಿಕ್ಕಮಗಳೂರು:  ದೇಗುಲ ಮನಸ್ಸು ಮತ್ತು ಮೈಯನ್ನು ಶುದ್ಧಗೊಳಿಸುವ ಪವಿತ್ರ ಕೇಂ ದ್ರ. ಗರ್ಭಗುಡಿಯಲ್ಲಿ ಭಗವಂತನು ನೆಲೆಸಿರುವಂತೆ,...

ಭದ್ರಾ ಹಿನ್ನೀರಿನ ಸಿದ್ದರಾಮಯ್ಯ ಸೇತುವೆ ಲೋಕಾರ್ಪಣೆ

ಚಿಕ್ಕಮಗಳೂರು:  ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದವರಿಗೆ ನಮ್ಮ ಸಾಧನೆಯೇ ಉತ್ತರವಾಗಿದ್ದು, ಕೇಂದ್ರ ಸರ್ಕಾರಕ್ಕಿಂತಲೂ...