Home namma chikmagalur chikamagalur ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ
chikamagalurHomeLatest Newsnamma chikmagalur

ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

Share
Share

ಚಿಕ್ಕಮಗಳೂರು: ಕಮಲದ ಚಿಹ್ನೆಯಡಿ ಉದಯಿಸಿದ ಭಾಜಪ, ಜಗತ್ತಿನ ಎದುರು ದೇ ಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅನೇಕ ಸವಾಲು ಹಾಗೂ ಏಳುಬೀಳಿನ ನಡುವೆಯೂ ಎದೆ ಗುಂದದೇ ರಾಷ್ಟದ ಏಕೀಕರಣಕ್ಕೆ ದುಡಿಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ೪೭ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಟಲ್‌ಜೀ ಹಾಗೂ ಅಡ್ವಾಣಿಜೀಯವರ ಸಾರಥ್ಯದಲ್ಲಿ ಮುನ್ನೆಲೆಗೆ ಬಂದ ಪಕ್ಷವು ಆರಂಭದಲ್ಲಿ ಬಹ ಳಷ್ಟು ಸಂಕಷ್ಟ ಎದುರಿಸಿತ್ತು. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನ ಬಿಜೆಪಿ ಪಡೆದುಕೊ ಂಡಿತು. ಕಾಲಕ್ರಮೇಣ ನಾಲ್ಕೆöÊದು ವರ್ಷಗಳಲ್ಲೇ ೧೯೮೯ರಲ್ಲಿ ಚುನಾವಣೆಯಲ್ಲಿ ೮೩ ಸ್ಥಾನ ವಿಜಯ ಸಾಧಿಸಿ, ನೂರರ ಗಡಿ ದಾಟುವ ಸಾಮರ್ಥ್ಯ ಬೆಳೆಸಿಕೊಂಡಿತು ಎಂದರು.

ಆಟಲ್‌ಜೀ ನೇತೃತ್ವದ ಬಿಜೆಪಿ ೧೯೯೩ರ ಇಸವಿಯಲ್ಲಿ ೧೩ ದಿನಗಳ ಕಾಲ ದೇಶದ ಅಧಿಕಾರ ನಡೆಸಿತು. ನಂತರ ರಾಜಕೀಯ ಅಸೃಶ್ಯತೆ ಹಿನ್ನೆಲೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಆಟಲ್‌ಜೀ ರಾಜಕೀಯ ಅಸೃ ಶ್ಯತೆ ಬಗ್ಗೆ ಅದ್ಬುತ ಭಾಷಣ ನೀಡಿ ನಿರ್ಗಮಿಸಿದರು. ೧೯೯೮ರಲ್ಲೂ ಒಂದು ಮತದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ದೃತಿಗೆಡಲಿಲ್ಲ ಎಂದು ಹೇಳಿದರು.

ಹಿಂದೆ ಬಿಜೆಪಿ ಅನೇಕ ಸವಾಲುಗಳನ್ನು ನಡುವೆ ಆಟಲ್‌ಜೀ ನೇತೃತ್ವದಲ್ಲಿ ೧೯೯೯ರಲ್ಲಿ ಆರು ವರ್ಷಗಳ ಕಾಲ ಅಧಿಕಾರ ನಡೆಸಿತು. ಈ ಆಡಳಿತ ವೈಖರಿಯಲ್ಲಿ ಕಳಂಕ ರಹಿತ, ಉತ್ತಮ ಸರ್ಕಾರ ಎಂಬುದನ್ನು ದೇಶ ಹಾಗೂ ಜಗತ್ತಿಗೆ ತಿಳಿಸಿಕೊಟ್ಟರು. ಸುವರ್ಣ ಚತುಶ್ಥತ ಹೆದ್ದಾರಿ ನಿರ್ಮಿಸುವ ಮೂಲಕ ಅಭಿವೃದ್ದಿ ಮೈಲಿಗಲ್ಲನ್ನು ಕೊಡುಗೆ ನೀಡಿದವರು ಎಂದರು.

ರಾಷ್ಟç ನಿರ್ಮಾಣ ದೃಷ್ಟಿಯಿಂದ ಭಾಜಪ ಸರ್ವ ಶಿಕ್ಷಣ ಅಭಿಯಾನದಡಿ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ, ಕಾಂಪೌAಡ್ ನಿರ್ಮಾಣ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಅಂದೇ ಕಲ್ಪಿಸಿಕೊಟ್ಟಿತು. ಪಿಎಂ ಗ್ರಾಮಸಡಕ್ ಯೋಜನೆ ಸೇರಿದಂತೆ ಅಭಿವೃಧ್ದಿಯಲ್ಲಿ ಬದಲಾವಣೆಗೆ ಆಟಲ್‌ಜೀ ಅವರು ತಮ್ಮದೇ ಸಾಮರ್ಥ್ಯ ತೋರಿಸಿದರು ಎಂದು ಹೇಳಿದರು.

ಬಿಜೆಪಿ ರಾಜಕೀಯ ಪಕ್ಷವಲ್ಲ, ರಾಷ್ಟಿçÃಯ ಚಳುವಳಿ. ಬಿಜೆಪಿ ದೇಶದಲ್ಲಿ ಉಗಮಿಸದಿದ್ದಲ್ಲಿ ರಾಷ್ಟç ಚಿಂ ತನೆಗಳು ಮರೆಯಾಗುತ್ತಿದ್ದವು. ಸ್ವಾತಂತ್ರö್ಯ ಪೂರ್ವದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದರೂ, ರಾಷ್ಟಿçÃಯ ಚಿಂ ತನೆಗೆ ಕೊಡಲಿಪೆಟ್ಟು ಹಾಕಿತು. ಕುಟುಂಬದ ಹಿತಾಸಕ್ತಿಗಾಗಿ ರಾಷ್ಟಿçÃಯ ಹಿತಾಸಕ್ತಿ ಕಡೆಗಣಿಸಿದ ಪಕ್ಷವಾಗಿ ಕಾಂಗ್ರೆಸ್ ಬೆಳೆದುಕೊಂಡು ಬಂದಿತು ಎಂದರು

ಬಿಜೆಪಿ ರಾಜಕೀಯ ತಂತ್ರಗಾರಿಕೆ, ಹೊಂದಾಣಿಕೆ ಮಾಡಿಕೊಂಡಿವೆ, ಹೊರತು ರಾಷ್ಟಿçÃಯ ಹಿತಾಸಕ್ತಿ ಎಂದಿಗೂ ಕಡೆಗಣಿಸಿಲ್ಲ. ಭಾಜಪ ಎಂದಿಗೂ ರಾಜಕೀಯ ಅಸೃಶ್ಯತೆ ಎಂದು ಪರಿಗಣಿಸಿಲ್ಲ. ಸಾಮಾಜಿಕ ಹಾ ಗೂ ರಾಜಕೀಯ ಅಸೃಶ್ಯತೆ ಬಗ್ಗೆ ನಂಬಿಕೆಯಿಲ್ಲ. ರಾಷ್ಟಿçÃಯ ಹಿತದ ಉದ್ದೇಶ ಸಾಧನೆಗೆ ಎಲ್ಲರೊಂದಿಗೆ ಕೈ ಜೋಡಿಸಿಕೊಂಡು ದೇಶದ ಹಿತಕ್ಕಾಗಿ ಜನಿಸಿದÀ ರಾಷ್ಟಿçÃಯ ಚಳುವಳಿ ಬಿಜೆಪಿ ಪಕ್ಷ ಎಂದರು.

ಒAದು ವೇಳೆ ದೇಶದಲ್ಲಿ ಬಿಜೆಪಿ ಉದಯಿಸದಿದ್ದಲ್ಲಿ, ಅಂದಿನ ದೇಶದ ಆಡಳಿತವು ಸ್ವಂತ ಹಿತ ಸಾಧನೆ ಗೆ ಪ್ರದೇಶ ಮತ್ತು ಭಾಷೆಯನ್ನು ದುರ್ಬಳಕೆ ಮಾಡಿಕೊಂಡು ರಾಷ್ಟçದ ವಿಂಗಡನೆಗೆ ದಾರಿ  ಮಾಡುತ್ತಿದ್ದವು. ಇಂದು ಭಾಜಪ ರಾಷ್ಟçದ ಏಕತೆ, ಸಂವಿಧಾನದ ಆಶಯ, ಸಂವಿಧಾನ ವಿಚಾರಧಾರೆಗೆ ಬಲತುಂಬಿದೆ. ಅಲ್ಲ ದೇ ಸಂವಿಧಾನ ವಿರೋಧಿ ಕಾಯ್ದೆ ತೆಗೆದು ಹಾಕುವ ಕಾರ್ಯ ಮಾಡಿದೆ ಎಂಧರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ದೇಶದ ಅಭಿವೃದ್ದಿ, ಏಕತೆಗಾಗಿ ದುಡಿದಿರುವ ಪಕ್ಷ ಬಿಜೆಪಿ. ಆ ನಿಟ್ಟಿನಲ್ಲಿ ಭಾಜಪ ಉಗಮದ ಕಾರಣಕರ್ತರಾದ ಪ್ರತಿ ನಾಯಕರು ಇಂದಿನ ರಾಜಕೀಯ ಮುಖಂಡರುಗಳಿಗೆ ಸ್ಪೂರ್ತಿಯಾಗಿದ್ದಾರೆ. ಆ ನಿಟ್ಟಿನಲ್ಲಿ ದೇಶದ ಹಿತ ಕಾ ಯುವ ಪಕ್ಷದಲ್ಲಿ ನಾವೆಲ್ಲರೂ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೋಟೆ ರಂಗನಾಥ್, ಪ್ರೇಮ್‌ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ರವೀಂದ್ರ ಬೆಳವಾಡಿ, ನಗರಾಧ್ಯಕ್ಷ ಪುಷ್ಪರಾಜ್, ಗ್ರಾಮಾಂ ತರ ಮಂಡಲ ಅಧ್ಯಕ್ಷ ವಿಜಯ್‌ಕುಮಾರ್, ಮುಖಂಡರುಗಳಾದ ವೀಣಾಶೆಟ್ಟಿ, ಕವೀಶ್ ಉಪಸ್ಥಿತರಿದ್ದರು.

BJP Foundation Day celebration at BJP office

Share

Leave a comment

Leave a Reply

Your email address will not be published. Required fields are marked *

Don't Miss

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ. ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ...

Related Articles

ಮೆಡಿಕಲ್ ಅಂಗಡಿಗೆ ಕನ್ನ : ₹2.66 ಲಕ್ಷ ನಗದು ದೋಚಿ ಪರಾರಿ

ಚಿಕ್ಕಮಗಳೂರು;  ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ...

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು...