ಚಿಕ್ಕಮಗಳೂರು: ಜಿಲ್ಲೆಯಿಂದ ಚಿತ್ರದುರ್ಗ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಕುಡಿಯುವ ನೀರಿಗಾಗಿ ಅಂತರ್ ಜಲ ಹೆಚ್ಚಳ ಮಾಡಲು ಕೆರೆಗಳನ್ನು ತುಂಬಿಸುವ ಯೋಜನೆ ಚಾಲ್ತಿಯಲ್ಲಿದೆ. ಈಗಾಗಲೇ ಕಾಲುವೆ ಮೂಲಕ ಕೆರೆ ತುಂಬಿಸಲಾಗುತ್ತಿದೆ.
ತರೀಕೆರೆ ತಾಲ್ಲೂಕಿನ ಭದ್ರ ಡ್ಯಾಮ್ ಮತ್ತು ತುಂಗ ಡ್ಯಾಮ್ ಮೂಲಕ ಹೆಚ್ಚುವರಿ ನೀರು ಹರಿಸುವ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆ ಪ್ರಾರಂಭವಾಗುವಾಗ ಕೇವಲ 4,000 ಕೋಟಿ ರೂ ಯೋಜನೆ ರೂಪಿಸಲಾಗಿತ್ತು ಆದರೆ ಇಂದು22,000 ಕೋಟಿ ವೆಚ್ಚ ಮಾಡಿದರೂ ಇನ್ನು ಹತ್ತಿಪ್ಪತ್ತು ಸಾವಿರ ಕೋಟಿಗಳ ಅವಶ್ಯಕತೆ ಇದೆ ಎನ್ನಲಾಗಿದೆ.
ಪ್ರಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ಕೆರೆ ನೀರು ತುಂಬಿಸುವುದರ ಜೊತೆಗೆ ಚಿಕ್ಕಮಗಳೂರು ಕೆಲವು ಕೆರೆ ತುಂಬಿಸುವ ಬಗ್ಗೆ ಇದರ ಫಲವೇ ಭದ್ರ ಉಪ ಕಣಿವೆ ಯೋಜನೆಯ ಹೆಸರಿನಲ್ಲಿ ತರೀಕೆರೆ ಮತ್ತು ಕಡೂರು ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.ಆದರೂ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಗೆ ನೀರು ಹರಿಸುವ ಯೋಜನೆಗೆ ಅಡಿಗಲ್ಲು ಹಾಕಲಾಗಿದೆ.ಆದರೆ ಇದಕ್ಕೆ ನೀರಿನ ಹಂಚಿಕೆ(Allocation) ಮಾಡದೆ ಇರುವುದು ಮುಂದೆ ಸಮಸ್ಯೆ ತಲೆ ಎತ್ತಬಹುದು ಆದ್ದರಿಂದ ನೀರಿನ ಹಂಚಿಕೆ ಮಾಡಿಸುವ ಜವಬ್ದಾರಿ ಜನಪ್ರತಿನಿಧಿಗಳದ್ದು.
4,000 ರೂ ಯೋಜನೆ ಗೆ 22,000 ರೂ ವೆಚ್ಚ ಮಾಡಿದರೂ ಇನ್ನೂ ಇಪ್ಪತ್ತು ಸಾವಿರ ಕೋಟಿ ಬೇಕು ಎಂದು ಖಾಸಗಿಯಾಗಿ ಮಾತನಾಡುತ್ತಾ ಅಧಿಕಾರಿ ತಿಳಿಸಿದ್ದಲ್ಲದೆ ಈ ಯೋಜನೆ ಹಣ ಅಯಾಯ ಕಾಲದ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ತಿಂದು,ತೇಗಿ ಸಿಕ್ಕಷ್ಟು ಆಸ್ತಿ ಮಾಡುವುದರ ಜೊತೆಗೆ ಮನೆ ಮಂದಿಯಲ್ಲಾ ತಿಂದರು ಸವೆಯಲಾರದು .
ಪ್ರಾರಂಭದಲ್ಲಿ ತರೀಕೆರೆ ತಾಲ್ಲೂಕಿನ ಜನ ಎಚ್ಚೆತ್ತು ಕೊಂಡು ಹೋರಾಟ ರೂಪಿಸಿ ಯೋಜನೆಗೆ ವಿರೋಧ ಮಾಡಿದರು ಕೊನೆಗೆ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡು ನಮ್ಮ ನೀರು,ನಮ್ಮ ಹಕ್ಕು ಎಂದು ತರೀಕೆರೆ ತಾಲ್ಲೂಕು ಕೆರೆಗಳಿಗೆ ನೀರು ತುಂಬಿಸಿ ಬೇರೆ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಿ ಅದಕ್ಕೆ ಒಪ್ಪಿದ ಸರ್ಕಾರ ಇಂದು ನೀರು ಕೊಡಲು ಸತಾಯಿಸುತ್ತಿದೆ. ಇದರಿಂದಾಗಿ ಪ್ರತಿ ವರ್ಷ ರೈತರು ಬಡಿದಾಡಿದರೂ ಕೆರೆಗಳಿಗೆ ನೀರು ತುಂಬಿಸುವಲ್ಲಿ ವಿಫಲವಾಗಿದೆ.
ಭದ್ರ ಮತ್ತು ತುಂಗಾ ನದಿಯ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳ ಬೇಕು. ಆದರೆ ಮಳೆ ಕೊರತೆ ಉಂಟಾದರೆ ಈ ವರ್ಷದ ಬರಗಾಲ ಬಂದರೆ ಇಡೀ ಯೋಜನೆಯಿಂದ ಹಣ ದೋಚಿದವರ ಪಾಲಗುತ್ತದೆ.ಜನರಿಗೆ ಹೋರಾಟದ ಮನಸ್ಥಿತಿ ಇಲ್ಲ ಜನಪ್ರತಿನಿಧಿಗಳಿಗೆ ಲೂಟಿ ಮಾಡುವ ಯೋಜನೆಯಾಗಿ ಮುಂದುವರೆಯುತ್ತಿದೆ.
The ‘Bhadra’ Mafia! Are MLAs and engineers ‘swallowing’ the pipes meant for water supply?
Leave a comment