Home namma chikmagalur chikamagalur ಕುಂಬಾರ ನೂತನ ಸಮುದಾಯ ಭವನ ಲೋಕಾರ್ಪಣೆ
chikamagalurHomeLatest Newsnamma chikmagalur

ಕುಂಬಾರ ನೂತನ ಸಮುದಾಯ ಭವನ ಲೋಕಾರ್ಪಣೆ

Share
Share

ಚಿಕ್ಕಮಗಳೂರು:  ಹಿಂದಿನ ಕಾಲದಲ್ಲಿ ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆ, ದೀಪದ ಹಣತೆ ಸೇರಿದಂತೆ ಪ್ರತಿಯೊಂದು ವಸ್ತುಗಳು ದೇಶದ ಎಲ್ಲಾ ಮನೆಗಳಲ್ಲಿ ಆವರಿಸಿತ್ತು. ಇದೀಗ ಆಧುನಿಕ ಬೆಳೆದಂತೆ ಮಣ್ಣಿನ ವಸ್ತುಗಳ ಬಳಕೆಯ ಸಂಖ್ಯೆ ಕ್ಷೀಣಿಸಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಉಂಡೇದಾಸರಹಳ್ಳಿ ಸಮೀಪ ಜಿಲ್ಲಾ ಕುಂಬಾರ ಕ್ಷೇಮಾಭೀವೃದ್ದಿ ಸಂಘದಿಂದ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿ
ಕುಂಬಾರರು ವೃತ್ತಿಯನ್ನು ಪ್ರವೃತ್ತಿಯಾಗಿ ಮಾಡಿಕೊಂಡವರು. ಮೃದು ಮಣ್ಣಿನಲ್ಲಿ ತಯಾರಿಸಿದ ಮಣ್ಣಿ ನ ಮಡಿಕೆ ಬೆಂದು ಗಟ್ಟಿಯಾಗುತ್ತದೆ. ಅದೇ ರೀತಿ ಮನುಷ್ಯನ ವ್ಯಕ್ತಿತ್ವವು ಮೃದು ಮಣ್ಣಿನಿಂದ ಗಟ್ಟಿಯಾಗುವ ತತ್ವವನ್ನು ಕುಂಬಾರರು ವೃತ್ತಿಯಲ್ಲಿ ಸಂದೇಶವನ್ನು ನೀಡಿದ್ದಾರೆ ಎಂದರು.

ಸಮಾಜದ ಯಾವುದೇ ಮದುವೆಗಳಲ್ಲಿ ಕುಂಬಾರರು ತಯಾರಿಸಿದ ಬಾಸಿಂಗದ ಬಳಕೆ ಸನಾತನ ಕಾಲ ದಿಂದಲೂ ಇದೆ. ನಾಡಿನಲ್ಲಿ ಸಣ್ಣ ಜನಾಂಗವಾದರೂ, ಎಲ್ಲರೂ ಸಂಘಟನಾತ್ಮಕವಾಗಿ ಕೈಜೋಡಿಸಿದರೆ ಎಂ ತದ್ದನ್ನು ಅಲುಗಾಡಿಸುವ ಶಕ್ತಿ ಕುಂಬಾರರಲ್ಲಿದ್ದು, ಎಲ್ಲರೂ ಒಮ್ಮತದಿಂದ ಜೊತೆಯಾಗಬೇಕು ಎಂದರು. ಕಳೆದ ೨೦೦೬ರ ಇಸವಿಯಲ್ಲಿ ಭವನದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಎರಡು ದಶಕದ ಬಳಿಕ ಪೂರ್ಣಗೊಂಡಿರುವುದು ಸಂತಸದ ವಿಷಯ. ಸಂಘದ ಪದಾಧಿಕಾರಿಗಳ ಒತ್ತಾಯದ ಮೇರೆಗೆ ಭವನದ ಕೆಲಸಗಳು ಬಾಕಿಯಿದ್ದು ಇನ್ನೂ ಕೆಲವು ತಿಂಗಳಲ್ಲಿ ೧೫ ಲಕ್ಷ ರೂ.ಗಳ ಅನುದಾನ ಒದಗಿಸಲಾಗುವುದು ಎಂ ದು ಹೇಳಿದರು.

ಜನಾಂಗದ ಸಂಘ-ಸಂಸ್ಥೆಗಳ ಅಭಿವೃದ್ದಿ ತಮ್ಮ ಅಧಿಕಾರಾವಧಿಯಲ್ಲಿ ೧೦ ಲಕ್ಷ ರೂ.ಗಳ ಕಾಮಗಾರಿ ಮಾಡಿಸಿದ್ದೇವೆ. ಅಧಿಕಾರ ಜನರು ಕೊಟ್ಟಿರುವ ಭಿಕ್ಷೆ. ಇರುವ ಅವಧಿಯಲ್ಲಿ ಜನಪರ ಅಭಿವೃದ್ದಿಗಳೇ ಕೊನೆಗೆ ಕೈಹಿಡಿಯುವ ಸಾಧನ. ತಮ್ಮ ಅಧಿಕಾರದ ಕಾಲದಲ್ಲಿ ಸಮುದಾಯಕ್ಕೆ ಮುಂದೆಯು ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ದಕ್ಷಿಣ ಕನ್ನಡ ಶ್ರೀ ಕ್ಷೇತ್ರದ ಮಾಣಿಲಾದ ಶ್ರೀ ಮೋಹನ ದಾಸ ಪರಮಪಹಂಸ ಸ್ವಾಮೀಜಿ ದಿವ್ಯ ಸಾನಿ ಧ್ಯ ವಹಿಸಿ ಮಾತನಾಡಿ ಸರ್ವಜ್ಞ, ಭಕ್ತಕುಂಬಾರ, ಶಾಲಿವಾಹನ ಜನಿಸಿದ ಅಪರೂಪದ ಕುಂಬಾರ ಸಮಾಜ. ಈ ಜನಾಂಗದವರು ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲರೂ ಒಂದಾಗಬೇಕಿದ್ದು, ತಾವು ಕೂಡಾ ಸದಾ ಜೊತೆಗಿರುತ್ತೇ ವೆಂದು ತಿಳಿಸಿದರು.

ಇದೀಗ ಸಭಾಭವನ ಲೋಕಾರ್ಪಣೆಗೊಂಡಿದೆ. ಜನಾಂಗದವರು ಮನೆ ಕಟ್ಟಲು, ನಿವೇಶನ ಖರೀದಿ, ಮದುವೆ, ಸಂತಾನ ಪ್ರಾಪ್ತಿಯ ಪ್ರಯತ್ನಕ್ಕೆ ಈ ತಿಂಗಳ ಹುಣ್ಣಿಯು ಸತ್ಕಾರ್ಮ ಆಗಲಿದೆ. ಪ್ರತಿಯೊಬ್ಬರು ಪ್ರತಿ ಜ್ಞೆ ಮಾಡುವ ಮೂಲಕ ಪರಸ್ಪರ ಅಸಮಾಧಾನ, ಕೋಪ, ಬೇಸರ, ವಿರೋಧಗಳು ಬದಿಗಿರಿಸಿ ವಿಶ್ವಾಸದಿಂದ ಬಾಳಬೇಕು ಎಂದು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಮಾತನಾಡಿ ಜಗತ್ತಿನಲ್ಲಿ ವೃತ್ತಿ ನೋಡಿ ಜಾತಿ ಗುರುತು ಮಾ ಡಲಾಗಿದೆ. ಮಡಿಕೆ ಮಾಡುವವ ಕುಂಬಾರರಾದರೆ, ಕುರಿಗಾಹಿ ಕುರುಬ, ಹಸು ಕಾಯುವ ಗೊಲ್ಲನಾದರು. ಆದರೆ ಸನಾತನ ಧರ್ಮದಲ್ಲಿ ಎಲ್ಲರು ಹಿಂದುತ್ವದ ಭಾಗವೇ ಆಗಿದೆ. ನೀತಿ ಪ್ರಧಾನ ವ್ಯವಸ್ಥೆಗೆ, ಬಂಧುತ್ವದ ಭಾವನೆ ಬೆಳೆಸಲು ಶಕ್ತಿ ತುಂಬಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕುಂಬಾರರು ಸಣ್ಣ ಸಮುದಾಯವಾದರೂ ಆರ್ಥಿಕ, ರಾಜಕೀಯ ಮುನ್ನೆಲೆಗೆ ಬರಲು ಹೋರಾಡುವ ಸ್ಥಿತಿಯಿದೆ. ನಾವೆಲ್ಲಾ ಒಂದು, ನಾವೆಲ್ಲರೂ ಹಿಂದು ಎಂಬ ತತ್ವದಡಿ ಪ್ರತಿಯೊಂದು ಸಣ್ಣ ಜನಾಂಗವು ಸಾಗಬೇಕು. ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಸಹಾಯಹಸ್ತ ಚಾಚಲಾಗುವುದು ಎಂದು ಭರವಸೆ ನೀಡಿದರು.

ಚಿತ್ರದುರ್ಗದ ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ ಮಾತನಾಡಿ ಜನಾಂಗ ಮಕ್ಕಳ ಅಭೀವೃಧ್ದಿ ಹಾ ಗೂ ಸಮಾಜದ ಕೆಲವು ಉದ್ದೇಶಗಳಿಗೆ ಸದಾಕಾಲ ನಾವುಗಳು ದುಡಿಯುತ್ತಿದ್ದೇವೆ. ರಾಜ್ಯಾದ್ಯಂತ ಸಮಾಜ ದ ಬಂಧುಗಳು ಒಗ್ಗಟ್ಟಾಗಿ ಸಮಾಜಕ್ಕಾಗಿ ದುಡಿದು ಉತ್ತಮ ರೀತಿಯಲ್ಲಿ ಕೊಂಡೊಯ್ಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ.ಗಂಗಾಧ ರ್ ವಹಿಸಿದ್ದರು. ಈ ಸಂದರ್ಭದಲ್ಲಿ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎ.ಎನ್.ಮಹೇ ಶ್, ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ನಗರಸಭೆ ಸದಸ್ಯೆ ರೂಪಕುಮಾರ್, ಸಮು ದಾಯದ ದಾನಿ ನಾರಾಯಣಸ್ವಾಮಿ, ಜಿಲ್ಲಾ ಕುಂಬಾರ ಸಂಘದ ಗೌರವಾಧ್ಯಕ್ಷ ಕೆ.ಆರ್.ಪರಮೇಶ್, ಮುಖ ಂಡರುಗಳಾದ ವರದಪ್ಪಶೆಟ್ಟಿ, ನಟರಾಜ್, ಕೆ.ಟಿ.ಹರೀಶ್, ಚಂದ್ರಶೇಖರ್, ಸೋಮಶೇಖರ್ ಹಾಗೂ ಪದಾ ಧಿಕಾರಿಗಳು, ಸಮಾಜಬಾಂಧವರು ಉಪಸ್ಥಿತರಿದ್ದರು.

Inauguration of Kumbara’s new community building

Share

Leave a comment

Leave a Reply

Your email address will not be published. Required fields are marked *

Don't Miss

ಅಲ್ಪಸಂಖ್ಯಾತ ಯುವಕರಿಗೆ ಸೈನಿಕ ತರಬೇತಿಗೆ ಸಿ.ಟಿ. ರವಿ ವಿರೋಧ

ಚಿಕ್ಕಮಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 6,000ಕ್ಕೂ ಹೆಚ್ಚು ಅಲ್ಪಸಂಖ್ಯಾತ ಯುವಕ-ಯುವತಿಯರಿಗೆ ಸೈನಿಕ ತರಬೇತಿ ನೀಡಲು ಹೊರಡಿಸಿರುವ ಆದೇಶಕ್ಕೆ ಬಿಜೆಪಿ ನಾಯಕ ಹಾಗೂ ಶಾಸಕ ಸಿ.ಟಿ. ರವಿ ತೀವ್ರ...

ದೀಪಾವಳಿಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಯುವತಿ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ತಂದೆ-ಮಗಳು ಬೈಕ್ ಅಪಘಾತಕ್ಕೀಡಾಗಿ, ಮಗಳು ಮೃತಪಟ್ಟಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ತರೀಕೆರೆ ತಾಲೂಕಿನ ಭೈರಾಪುರ ಕ್ರಾಸ್ ಬಳಿ ನಡೆದಿದೆ....

Related Articles

ಕಾಂಗ್ರೆಸ್ ನ ಅಡುಗೂಲಜ್ಜಿ ಕತೆ ಬಿಜೆಪಿಯ ಹೋರಾಟವೋ ಹೊಂದಾಣಿಕೆಯೋ ಜೆಡಿ‌ಎಸ್ ವ್ಯಾಪಾರಸ್ಥರ ಕಾಟ ?

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಪಕ್ಷಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ,ಯಾವ ಪಕ್ಷಗಳ ಆಟಗಾರರು ಮತ್ತು ಆಟ...

ಮನೆ ಕಳ್ಳತನಕ್ಕೆ ಹೊಂಚು ಹಾಕಿದ ಖದೀಮ: ಕಾಂಪೌಂಡ್ ಹಾರಿ ಪರಾರಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ. ನಗರದ ಹೌಸಿಂಗ್...

ಬ್ಯಾಗ್‌ನಿಂದ ₹4.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಡೂರು: ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿಟ್ಟಿದ್ದ ಸುಮಾರು 42 ಗ್ರಾಂ ತೂಕದ...

ಎಸ್. ಬಿದರೆ ಗ್ರಾಮದಲ್ಲಿ ಪೋಕ್ಸೋ ಪ್ರಕರಣ ದಾಖಲು

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಗೆ ಬಾಲ್ಯವಿವಾಹ ಮಾಡಿಸಿ, ಆಕೆ ಐದು ತಿಂಗಳ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಕರಾಯಪಟ್ಟಣ...