ಚಿಕ್ಕಮಗಳೂರು: ರಾಜ್ಯ ಸರ್ಕಾರ ವಿವಿಧ ನಿಗಮಗಳಿಗೆ ಆರು ಜನರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.ಅವುಗಳಲ್ಲಿ ಜಮಕ್ಕುಂಟು ಲೆಕ್ಕಕ್ಕೆ ಇಲ್ಲ ಎಂದು ಕಾಂಗ್ರೆಸ್ ನ ಹಲವರ ಅಭಿಪ್ರಾಯ.
ರಾಜ್ಯದ 448 ಜನರನ್ನು ನೇಮಕ ಮಾಡಿದ್ದು ಕೊಡಗಿನಂತಹ ಸಣ್ಣ ಜಿಲ್ಲೆಗೂ ಹತ್ತು ಜನರಿಗಿಂತ ಹೆಚ್ಚಿನವರನ್ನು ನಾಮನಿರ್ದೇಶನ ಮಾಡಿದ್ದು ಜಿಲ್ಲೆಯ ರೂಬಿನ್ ಮೆಸಸ್,ಚೇತನ್, ವಾರ್ತಾ ಇಲಾಖೆ ಮತ್ತು ಕಡೂರಿನ ರಾಜಪ್ಪ ಎ.ಪಿ.ಎಂ.ಸಿ.ನಿಗಮ ತರೀಕೆರೆ ಟಿ.ಎಸ್.ಪ್ರಕಾಶ್ ವರ್ಮ ಮತ್ತು ಎನ್.ಆರ್.ಪುರದ ಸದಾಶಿವ ಭದ್ರ ಕಾಡಕ್ಕೆ ನೇಮಕ ಮಾಡಿದರೆ ಮೂಡಿಗೆರೆ ಓರ್ವರನ್ನು ನಿಯಮಕ್ಕೆ ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಐದು ಜನ ಶಾಸಕರು ಆಡಳಿತ ಪಕ್ಷ ಕಾಂಗ್ರೆಸ್ ನವರಾದರೆ ಓರ್ವರು ಎಂ.ಎಲ್.ಸಿ ಇದ್ದು ಶಾಸಕ ರಾಜೇಗೌಡ ರಿಗೆ ವಿದ್ಯುತ್ ನಿಗಮ ಮತ್ತು ಎನ್.ಅರ್.ಪುರದ ಶ್ರೀನಿವಾಸ್ ಗೆ ಪ್ರವಾಸೋದ್ಯಮ ಮತ್ತು ಎನ್.ಮಹೇಶ್ ಗೆ ಪರಿಸರ ತಜ್ಞ ಸಮಿತಿಯ ಅಧ್ಯಕ್ಷರಾದರೆ ಅಂಶುಮತ್ ಭದ್ರಕಾಡ ಅಧ್ಯಕ್ಷರು ಬಿ.ಹೆಚ್.ಹರೀಶ್ ಮಾರುಕಟ್ಟೆ ನಿಗಮ ಅಧ್ಯಕ್ಷ ರಾಗಿದ್ದಾರೆ.ಈಗಿರುವ ಎರಡು ನಿಗಮಗಳ ಜೊತೆಗೆ ತರೀಕೆರೆ ಶಾಸಕ ಶ್ರೀನಿವಾಸ್ ಮತ್ತು ಮೂಡಿಗೆರೆಯ ಶಾಸಕಿ ನಯನಮೋಟಮ್ಮಗೆ ಯಾವುದಾದರೂ ಪವರ್ ಪುಲ್ ನಿಗಮಗಳು ದೊರೆಯುತ್ತವೆ ಎನ್ನಲಾಗಿದೆ.
ಇದರ ಜೊತೆಗೆ ರೇಖಾ ಹುಲಿಯಪ್ಪ ಗೌಡ ಮತ್ತು ಎಂ.ಎಲ್.ಮೂರ್ತಿಗೆ ನಿಗಮಕ್ಕೆ ನೇಮಕವಾಗ ಬಹುದು ಎಂಬ ಸುದ್ದಿಗಳುಇದರ ಜೊತೆಗೆ ಡಾ/ವಿಜಯ ಕುಮಾರ್ .ವಿಶ್ವನಾಥ್. ಮತ್ತಿತರರ ಹೆಸರು ಹರಿದಾಡುತ್ತಿವೆ.
ಕಳೆದ ಇಪ್ಪತೈದು ವರ್ಷಗಳಿಂದ ಪಕ್ಷದ ಉಪಾಧ್ಯಕ್ಷ ಮತ್ತು ಚಿತ್ರ ಕಲಾ ಪರಿಷತ್ತಿನ ಖಾಯಂ ಅಧ್ಯಕ್ಷ ಬಿ.ಎಲ್.ಶಂಕರ್ ಯಾರಿಗೆ ಕತ್ತರಿ ಹಾಕಬಹುದು ಎಂಬ ಚರ್ಚೆ ನಡೆದಿದೆ.
ಕೇವಲ ಒಂದು ವರ್ಷ ನಾಲ್ಕು ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯ ಬೇಕು.ನಿಯಮಗಳಲ್ಲಿ ಮುಚ್ಚುವ ಸ್ಥಿತಿಯಲ್ಲಿ ಇದ್ದರೆ ಡಕೋಟ ಕಾರು,ಕಛೇರಿಗೆ ಕಾರ್ಯಕರ್ತರು ಕಣ್ಣು ಮೀಟಿಕಿಸದೆ ಕಾಯುತ್ತಿದ್ದಾರೆ.ಬಹುತೇಕ ಶಾಸಕರು ಫಲವತ್ತಾದ ನಿಗಮಗಳನ್ನು ಪಡೆಯಬಹುದು .
ಕಾರ್ಯಕರ್ತರು ತಳ್ಲೋ ಗಾಡಿ ಐಸಾ ಎನ್ನಬೇಕಾಗಿದೆ.ಎಂ.ಎಲ್.ಎ.ಆಗಬೇಕು ನಂತರ ಮಂತ್ರಿ ಇಲ್ಲದಿದ್ದರೆ ಪೊಗರ್ ದಸ್ತು ನಿಗಮ ಬೇಕು ಪಕ್ಷಕ್ಕೆ ದುಡಿದವರು ಕಣ್,ಕಣ್ ಮಿಟುಕಿಸುತ್ತಾ ಮುಂದಿನ ಚುನಾವಣೆಗೆ ತೇವಳುವುದರೊಳಗೆ ಚುನಾವಣೆ ಮುಗಿದಿರುತ್ತದೆ.
Were six people from the district appointed merely as a formality?
Leave a comment