Home namma chikmagalur chikamagalur ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನಿಗಧಿಗೆ ಒತ್ತಾಯಿಸಿ ಪ್ರತಿಭಟನೆ
chikamagalurHomeLatest Newsnamma chikmagalur

ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನಿಗಧಿಗೆ ಒತ್ತಾಯಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ಕಬ್ಬು ಬೆಳೆಗಾರರಿಗೆ ನಿಗಧಿತ ಬೆಲೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದಿಂದ ಮಂಗಳವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ರೈತ ಮುಖಂಡರುಗಳು ಪ್ರತಿಭಟಿಸುವ ಮುಖೇನಾ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ರೈತ ಸಂಘದ ಸದಸ್ಯ ವೈ.ಸಿ.ಸುನೀಲ್‌ಕುಮಾರ್ ರಾಜ್ಯಸರ್ಕಾರ ರೈತರ ಸಮನ್ವಯ ಸಭೆ ನಡೆಸುವ ಮೂಲಕ ಎರಡು ದಿನದಲ್ಲಿ ಬೆಂಬಲ ಬೆಲೆ ನಿಗಧಿಗೊಳಿಸುತ್ತೇವೆಂದ ಮುಖ್ಯ ಮಂತ್ರಿಗಳು, ರೈತರ ಕಣ್ಣಿಗೆ ಮಣ್ಣು ಎರಚಿ, ಕಬ್ಬಿನ ಬೆಳೆ ಒಣಗುವಂತೆ ಮಾಡಿದ್ದಾರೆ ಎಂದು ದೂರಿದರು.

ಕಬ್ಬು, ರಾಗಿ, ಕೊಬ್ಬರಿ, ಜೋಳದ ಬೆಳೆಗೆ ರಾಜ್ಯಾದ್ಯಂತ ರೈತರು ಬೆಂಬಲ ಬೆಲೆಗೆ ಬೃಹತ್ ಹೋರಾ ಡುವ ಸ್ಥಿತಿ ಉದ್ಬವವಾಗಿದೆ. ಬೆಂಬಲ ಬೆಲೆಯ ಖರೀದಿ ಕೇಂದ್ರಗಳಿಲ್ಲ. ಕೇಂದ್ರ ಹಾಗೂ ರಾಜ್ಯಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ರಾಜ್ಯಸರ್ಕಾರ ಉದ್ದೇಶ ಪೂರಿತವಾಗಿ ಕಬ್ಬಿನ ಬೆಳೆಗಳಿಗೆ ವಂಚಿ ಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಹಾಲಿನ ೭ ರೂ.ಗಳ ನಿಗಧಿ ಮಾಡಿದರೆ, ಖರೀದಿಸುವ ಗ್ರಾಹಕರ ಮೇಲೆ ಭರಿಸುವಂತೆ ಮಾಡುತ್ತಿದ್ದಾ ರೆ. ರೈತರು ಸಂಕಷ್ಟ ವ್ಯಕ್ತಪಡಿಸಿದರೆ, ಸಾರ್ವಜನಿಕರ ಮೇಲೆ ಹೊರೆಹೊರಿಸಿ, ರೈತರ ಚಳುವಳಿಗೆ ಸಾರ್ವಜ ನಿಕರು ಅಸಹಕಾರ ತೋರಿಸಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹುದೊಡ್ಡ ಹುನ್ನಾರ ವಾಗಿದೆ ಎಂದು ಹೇಳಿದರು.

ರೈತರು ಬೆಂಬಲ ಬೆಲೆ ಕೇಳಿದರೆ ಸಕ್ಕರೆ ಬೆಲೆ ಜಾಸ್ತಿ, ಹಾಲಿನ ದರ ಜಾಸ್ತಿ ಈ ರೀತಿಯ ಹೊರೆ ಗ್ರಾಹ ಕರಿಗೆ ಹಾಕಲಾಗುತ್ತಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಕಲ್ಯಾಣನಿಧಿ, ಬೆಂಬಲಬೆಲೆ ನಿಧಿ, ಬೆಳೆನಷ್ಟ ಪರಿಹಾರ, ಬರಗಾಲದ ನಿಧಿ ಮೀಸಲಿಡಲು ಶಾಸಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ರಾಜ್ಯಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ ಎಂದು ಸಂಕಟಪಡುವ ಮುಖ್ಯಮಂತ್ರಿಗಳು, ಎಲ್ಲಾ ಹೊರೆ ಗ್ರಾಹಕರಿಗೆ ಮೇಲೆ ಹೊರಿಸುತ್ತಿದ್ದು ಆಡಳಿತ ನಿರ್ವಹಿಸಲಾಗದ ಡಿ.ಕೆ.ಶಿವಕುಮಾರ್ ಸ್ಥಾನಕ್ಕೆ ರಾಜೀ ನಾಮೆ ಸಲ್ಲಿಸಬೇಕು. ರೈತ ಪರ ನಾಯಕ ಮುಖ್ಯಮಂತ್ರಿಯಾಗಿ ರೈತರಿಗೆ ನೆರವಾಗುತ್ತಾರೆ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೀಯ ಮಂಡಳಿ ಸದಸ್ಯ ಡಿ.ರಾಮೇಗೌಡ ಮಾತನಾಡಿ ಕಟಾ ವಿಗೆ ಸಿದ್ಧವಾಗಿರುವ ಕಬ್ಬು ಒಣಗುವುದನ್ನು ನಿರೀಕ್ಷಿಸುತ್ತಾ ರೈತ ಚಳುವಳಿಯನ್ನು ಹತಾಶೆಗೆ ನೂಕುವ ವ್ಯವ ಸ್ಥಿತ ಹುನ್ನಾರವನ್ನು ಸರ್ಕಾರಗಳು ನಡೆಸುತ್ತಿವೆ. ಈ ರೈತ ವಿರೋಧಿ ನಿಲುವ ಕೈಬಿಟ್ಟು ತಕ್ಷಣವೇ ನೆರೆರಾಜ್ಯದ ಮಾದರಿಯಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಪರ್ವತೇಗೌಡ, ಕೆ.ಪೂವನೇಶ್, ಎಂ.ಚಂದ್ರ ಶೇಖರ್, ಹುಲಿಯಪ್ಪಗೌಡ, ಮಲ್ಲುಂಡಪ್ಪ, ಯೋಗಾನಂದ್, ಕೆ.ಹೆಚ್.ಪ್ರತೀಶ್ ಬೈರೇಗೌಡ ಮುಂತಾದವ ರಿದ್ದರು.

Protest demanding the fixation of a support price for sugarcane growers

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರಿನಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆಶ್ರಯದಲ್ಲಿ ಬುಧವಾರ ನಗರದಲ್ಲಿ ನಡೆದ ವಿಜಯದಶಮಿ ಪಥಸಂಚಲನವು ಸಾರ್ವಜನಿಕರ ಗಮನ ಸೆಳೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿಗಳು ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಎರಡೂ...

ಕಾಂಗ್ರೆಸ್‌ನ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ‘ಅರಾಜಕತೆ ಹಟಾವೋ’ ಅಭಿಯಾನ

ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಕುರಿತು ಕಾಂಗ್ರೆಸ್ ಜನರಲ್ಲಿ ಗೊಂದಲ ಮೂಡಿಸುವ ಹಾಗೂ ಸುಳ್ಳು ಸುದ್ದಿಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ...

Related Articles

ಕಾಂಗ್ರೆಸ್ ಸರ್ಕಾರದಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಸೌಲಭ್ಯಗಳನ್ನು ನೀಡುತ್ತಿರುವುದಾಗಿ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ...

ಗುಂಡು ಹಾರಿಸಿ ಹಲ್ಲೆ – ಚಿಕಿತ್ಸೆ ಫಲಿಸದೆ ಯುವಕ ಸಾವು

ಮೂಡಿಗೆರೆ: ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿ ಏರ್‌ಗನ್‌ನಿಂದ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ ಎಂದು ಆರೋಪಿಸಲಾಗಿರುವ ಯುವಕ...

ಕೊರಿಯರ್‌ನಲ್ಲಿ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ₹2.05 ಲಕ್ಷ ವಂಚನೆ

ಚಿಕ್ಕಮಗಳೂರು: ವಿದೇಶದಿಂದ ಕೊರಿಯರ್ ಮೂಲಕ ಗಿಫ್ಟ್ ಹಾಗೂ ಹಣ ಕಳುಹಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ನೆಪದಲ್ಲಿ...

ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ ನಿಧನ

ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎಸ್. ಅನಂತ್ (52 )ಅನಾರೋಗ್ಯದಿಂದ...