Home namma chikmagalur chikamagalur ಯಳ್ಳಂಬಳಸೆಯಲ್ಲಿ 5 ವಾಲ್ಮೀಕಿ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಆರೋಪ
chikamagalurHomeLatest Newsnamma chikmagalur

ಯಳ್ಳಂಬಳಸೆಯಲ್ಲಿ 5 ವಾಲ್ಮೀಕಿ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಆರೋಪ

Share
Share

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಐದು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಹಿಷ್ಕಾರದಿಂದಾಗಿ ಸಾಮಾಜಿಕವಾಗಿ ಅವಮಾನ ಹಾಗೂ ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ್ತಿ ಗೀತಾದೇವಿ ಜಿ.ಎಚ್. ಆಗ್ರಹಿಸಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ವಾಲ್ಮೀಕಿ ಸಮುದಾಯದ 35 ಕುಟುಂಬಗಳು ಸೇರಿ ಐದು ಕುಟುಂಬಗಳನ್ನು ಸಾಮಾಜಿಕವಾಗಿ ಪ್ರತ್ಯೇಕಿಸಿವೆ ಎಂದು ಆರೋಪಿಸಿದರು.

ಗ್ರಾಮದೇವತೆ ಹಳದಮ್ಮ ದೇವಿಯ ಧಾರ್ಮಿಕ ಕಾರ್ಯಗಳನ್ನು ನಡೆಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ವಿವಾದಕ್ಕೆ ಕಾರಣವಾಗಿದೆ. ದೇವರ ಕಾರ್ಯದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಐದು ಕುಟುಂಬಗಳನ್ನು ಸಮಾಜದಿಂದ ದೂರವಿಡಲಾಗಿದ್ದು, ಶುಭ ಸಮಾರಂಭಗಳಿಗೆ ಆಹ್ವಾನಿಸದಿರುವುದು ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಡ್ಡಿಪಡಿಸುವಂತಹ ಘಟನೆಗಳು ನಡೆದಿವೆ ಎಂದು ತಿಳಿಸಿದರು.

ಸಮುದಾಯದ ವೃದ್ಧೆಯೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಐದು ಕುಟುಂಬಗಳ ಸದಸ್ಯರಿಗೆ, ಅವರು ಬಂದರೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದರಿಂದ ಹಿಂದಿರುಗಬೇಕಾಯಿತು ಎಂದು ಆರೋಪಿಸಿದರು. ಸೆಪ್ಟೆಂಬರ್ 10ರಂದು ನಡೆದ ಸಭೆಯ ಸಂದರ್ಭದಲ್ಲಿ ಐದು ಕುಟುಂಬಗಳ ಸದಸ್ಯರ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ದಾಖಲೆಗಳು ತಮ್ಮ ಬಳಿ ಇವೆ ಎಂದರು.

ಇದಲ್ಲದೆ, ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿದಾಗ ಸಮರ್ಪಕವಾಗಿ ಸ್ಪಂದಿಸಿಲ್ಲ ಹಾಗೂ ಯಗಟಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸೈಯದ್ ಅಫ್ರೀದ್ ಅವರು ಗೀತಾದೇವಿಯವರ ವೈಯಕ್ತಿಕ ಬದುಕಿನ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂಬ ಆರೋಪವನ್ನೂ ಮಾಡಿದರು. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

ಸಾಮಾಜಿಕ ಬಹಿಷ್ಕಾರದ ಆರೋಪ ಮತ್ತು ಪೊಲೀಸ್ ಅಧಿಕಾರಿಯ ವಿರುದ್ಧದ ದೂರುಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಗ್ರಾಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನ್ಯಾಯ ಸಿಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗೀತಾದೇವಿ ಜಿ.ಎಚ್. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗವಿರಂಗಪ್ಪ, ವಿನಯ್ ಹಾಗೂ ಲಕ್ಷ್ಮೀದೇವಿ ಉಪಸ್ಥಿತರಿದ್ದರು.

Allegations of social boycott against 5 Valmiki families in Yallambalase

Share

Leave a comment

Leave a Reply

Your email address will not be published. Required fields are marked *

Don't Miss

ನರ್ಸ್ ಮನೆಯ ಬೀರುವಿನಲ್ಲಿದ್ದ 47 ಗ್ರಾಂ ಚಿನ್ನಾಭರಣ ಕಳವು: ₹4.70 ಲಕ್ಷ ನಷ್ಟ

ನರಸಿಂಹರಾಜಪುರ: ಮನೆಯ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ 47 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಸುಮಾರು ₹4.70 ಲಕ್ಷ ನಷ್ಟ ಸಂಭವಿಸಿರುವ ಘಟನೆ ಪಟ್ಟಣದ ನೇತಾಜಿನಗರದ ಹೊಸ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ,...

ಕುಸುಮ್-ಬಿ, ಪಿಎಂ ಸೂರ್ಯ ಘರ್ ಯೋಜನೆ ತ್ವರಿತ ಅನುಷ್ಠಾನಕ್ಕೆ ಸೂಚನೆ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಯೋಜನೆಯಡಿ ಜಿಲ್ಲೆಯಲ್ಲಿ ಅನುಮೋದನೆಗೊಂಡಿರುವ 4,319 ರೈತರ ಅರ್ಜಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ವಿದ್ಯುತ್ ಸಂಪರ್ಕಗಳನ್ನು ಶೀಘ್ರ ಒದಗಿಸಬೇಕು ಎಂದು...

Related Articles

ಪೊಲೀಸ್ ರಿಂದ ಮಾಮುಲಿ ವಸೂಲಿ ಹಗಲು-ರಾತ್ರಿ ನಡೆಯುವ ಜೂಜು ?

ತರೀಕೆರೆ: ಇಸ್ಪೀಟು, ಮಟ್ಕಾ,ತೂರುವ ಬಿಲ್ಲೆ ಇನ್ನಿತರ ಜೂಜು ಹಗಲು,ರಾತ್ರಿ ನಡೆಯುತ್ತಿದ್ದು ಇವರುಗಳಿಂದ “ಮಾಮುಲಿ” ವಸೂಲಿ ಮಾಡುವಲ್ಲಿ...

ಮುತ್ತೋಡಿ-ಶಿರವಾಸೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಚಿಕ್ಕಮಗಳೂರು: ಕಾಫಿನಾಡಿನ ಮುತ್ತೋಡಿ-ಶಿರವಾಸೆ ರಸ್ತೆಯಲ್ಲಿ ದಿಢೀರನೆ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ...

ಚಿಕ್ಕಮಗಳೂರಿನಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆಶ್ರಯದಲ್ಲಿ ಬುಧವಾರ ನಗರದಲ್ಲಿ ನಡೆದ ವಿಜಯದಶಮಿ ಪಥಸಂಚಲನವು ಸಾರ್ವಜನಿಕರ...

ಕಾಂಗ್ರೆಸ್‌ನ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ‘ಅರಾಜಕತೆ ಹಟಾವೋ’ ಅಭಿಯಾನ

ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಕುರಿತು ಕಾಂಗ್ರೆಸ್ ಜನರಲ್ಲಿ ಗೊಂದಲ...