Home namma chikmagalur chikamagalur ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ ರಾಜ್ಯ ರೈತ ಸಂಘ ಆಗ್ರಹ
chikamagalurHomeLatest Newsnamma chikmagalur

ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ ರಾಜ್ಯ ರೈತ ಸಂಘ ಆಗ್ರಹ

Share
Share

ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕಿನ ಬರಗಾಲ ಪೀಡಿತ ಸಿದ್ದಲಿಪುರ, ಕೆಂಚಾಪುರ, ಅತ್ತಿಗಟ್ಟೆ, ಮಾಕನಹಳ್ಳಿ ಹಾಗೂ ಜಲದಿಹಳ್ಳಿ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಭದ್ರಾ ಮೇಲ್ದಂಡೆ ಹಾಗೂ ಉಬ್ರಾಣಿ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಸರ್ಕಾರ ತುರ್ತಾಗಿ ಯೋಜನೆ ರೂಪಿಸಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಗುರುಶಾಂತಪ್ಪ ಒತ್ತಾಯಿಸಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐದು ಗ್ರಾಮಗಳಲ್ಲಿ ಸುಮಾರು 9ರಿಂದ 10 ಸಾವಿರ ಜನರು ಹಾಗೂ 3ರಿಂದ 4 ಸಾವಿರ ಜಾನುವಾರುಗಳಿದ್ದು, ಅಂತರ್ಜಲ ಮಟ್ಟ ಕುಸಿತ ಮತ್ತು ಕೆರೆಕಟ್ಟೆಗಳು ಬತ್ತಿರುವುದರಿಂದ ಕುಡಿಯುವ ನೀರಿಗಾಗಿ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಜಾನುವಾರುಗಳಿಗೂ ನೀರು ಒದಗಿಸುವುದು ಕಷ್ಟವಾಗಿದೆ. ಇಂತಹ ಗಂಭೀರ ಸಮಸ್ಯೆಯಿದ್ದರೂ ಜನಪ್ರತಿನಿಧಿಗಳು ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯ ನೀರು ಜಾವೂರು ತಿಮ್ಮಾಪುರ ಗ್ರಾಮದ ಸಮೀಪದಲ್ಲೇ ಹರಿಯುತ್ತಿದ್ದು, ತಿಮ್ಮಾಪುರ ಪಂಪ್‌ಹೌಸ್‌ನಿಂದ ಸುಮಾರು ಐದು ಕಿ.ಮೀ. ಪೈಪ್‌ಲೈನ್ ಅಳವಡಿಸಿ ಜಲದಿಹಳ್ಳಿ ಮಾರ್ಗವಾಗಿ ಸಿದ್ದರಕೆರೆಗೆ ನೀರು ಹರಿಸಬಹುದು. ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ ಕೆಂಗಲಗಟ್ಟೆ ಹಾಗೂ ಇತರ ಕೆರೆಗಳಿಗೆ ನೀರು ಹರಿಸುವ ಸಾಧ್ಯತೆಯಿದೆ ಎಂದು ವಿವರಿಸಿದರು.

ಅದೇ ರೀತಿ ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ಮೆದೆಕೆರೆಯನ್ನು ತಲುಪುವ ನೀರನ್ನು ಪೈಪ್‌ಲೈನ್ ಮೂಲಕ ಕೆಂಗಲಕಟ್ಟೆಗೆ ಹರಿಸಿ, ಅಲ್ಲಿಂದ ಸಿದ್ದರಕೆರೆ, ಸುಬ್ಬಯ್ಯನಕಟ್ಟೆ, ಬಡಗಿಕಟ್ಟೆ ಹಾಗೂ ಕೆಂಚಣ್ಣನಕೆರೆಗಳನ್ನು ತುಂಬಿಸಬಹುದು. ಕಡಿಮೆ ದೂರದಲ್ಲಿ ನೀರು ಲಭ್ಯವಿದ್ದರೂ ಅದನ್ನು ಸ್ಥಳೀಯ ಗ್ರಾಮಗಳ ಕೆರೆಗಳಿಗೆ ಬಳಸಿಕೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಹೇಳಿದರು.

ಬೂದುಗುಪ್ಪೆ ಗ್ರಾಮದ ಸರ್ವೆ ನಂ.5ರಲ್ಲಿರುವ ಹುಣಸೇಕಟ್ಟೆಕೆರೆ ಹಾಗೂ ಸರ್ವೆ ನಂ.10ರಲ್ಲಿರುವ ಸುಬ್ಬಯ್ಯನಕಟ್ಟೆಯ ಏರಿ ಹಾನಿಗೊಳಗಾಗಿದ್ದು, ನೀರು ಸಂಗ್ರಹವಾಗುತ್ತಿಲ್ಲ. ಈ ಕೆರೆಗಳನ್ನು ದುರಸ್ತಿಪಡಿಸಿ, ಅಗತ್ಯವಿದ್ದಲ್ಲಿ ವಿಸ್ತರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು ಎಂದರು.

ಈ ಕುರಿತು ಈಗಾಗಲೇ ಅಜ್ಜಂಪುರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದಾರೆ. ಸಂಬಂಧಿತ ಜಮೀನಿನ ದಾಖಲೆಗಳಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಕೆರೆಗಳ ಪುನರ್‌ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಅಜ್ಜಂಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸದಾಗಿ 10 ಕೆರೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗಾಗಲೇ ಇರುವ ಕೆರೆಗಳನ್ನು ದುರಸ್ತಿಪಡಿಸಿ ನೀರು ತುಂಬಿಸುವಂತೆ ಸಲ್ಲಿಸಿರುವ ಮನವಿಯಲ್ಲಿನ ಕೆರೆಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.

ತರೀಕೆರೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆಯತ್ತ ಗಮನಹರಿಸಿ, ಭದ್ರಾ ಮೇಲ್ದಂಡೆ ಮತ್ತು ಉಬ್ರಾಣಿ ಏತ ನೀರಾವರಿ ಯೋಜನೆಗಳ ನೀರನ್ನು ಬಳಸಿಕೊಂಡು ಕೆರೆಗಳನ್ನು ತುಂಬಿಸುವ ಕಾರ್ಯಯೋಜನೆ ರೂಪಿಸಬೇಕು. ಈ ಮೂಲಕ ಜನರು ಮತ್ತು ಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಸಿ. ಬಸವರಾಜು, ಪ್ರಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಅಜ್ಜಂಪುರ ತಾಲ್ಲೂಕು ಗೌರವಾಧ್ಯಕ್ಷ ರಮೇಶ್, ರೈತ ಮುಖಂಡರಾದ ಕುಮಾರ್ ನಾಯ್ಕ, ಗೌತಮ್, ಕೆ. ಸುನೀಲ್ ಕುಮಾರ್, ಪರಮೇಶ್ವರಪ್ಪ ಇದ್ದರು

State Farmers’ Association demands permanent drinking water facility

Share

Leave a comment

Leave a Reply

Your email address will not be published. Required fields are marked *

Don't Miss

ದೇಶದ ಶಾಂತಿ, ಭದ್ರತೆಗಾಗಿ ಪೊಲೀಸರ ತ್ಯಾಗ ಸ್ಮರಣೀಯ

ಚಿಕ್ಕಮಗಳೂರು: ಖಾಕಿ ಸಮವಸ್ತ್ರವು ಜನರ ವಿಶ್ವಾಸದ ಸಂಕೇತವಾಗಿದ್ದು, ದೇಶದ ಗಡಿ ರಕ್ಷಣೆ, ಆಂತರಿಕ ಭದ್ರತೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಪೊಲೀಸ್ ಪಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಯಶ್ ಪಾಲ್...

ಅಜ್ಜಂಪುರದಲ್ಲಿ ಬೈಕ್‌ನಿಂದ ಬಿದ್ದು ಮಹಿಳೆ ಸಾವು 

ಅಜ್ಜಂಪುರ: ಪತಿಯ ಬೈಕ್‌ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಾಪುರ–ಕಾಟಿಗನೆರೆ ನಡುವಿನ ರಸ್ತೆಯಲ್ಲಿ ಅ.20ರಂದು ನಡೆದಿದೆ. ಮೃತರನ್ನು ಅಮೃತಾಪುರ...

Related Articles

ಯಳ್ಳಂಬಳಸೆಯಲ್ಲಿ 5 ವಾಲ್ಮೀಕಿ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಆರೋಪ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಐದು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ...

ಶಾಂತವೇರಿ ಘಾಟಿಯಲ್ಲಿ ಕ್ಯಾಂಟರ್‌ಗೆ ಬೆಂಕಿ

ತರೀಕೆರೆ: ತಾಲೂಕಿನ ಶಾಂತವೇರಿ ಘಾಟಿ ಪ್ರದೇಶದಲ್ಲಿ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು...

ಅರಣ್ಯ ಇಲಾಖೆ ಬೋನ್‌ಗೆ ಬಿದ್ದ ಚಿರತೆ ಸೆರೆ

ಕಡೂರು:ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನ್‌ಗೆ ಚಿರತೆಯೊಂದು ಬಿದ್ದಿದ್ದು,...

ಎನ್‌ಡಿಎಗೆ ಜಯ-ಕಾಂಗ್ರೆಸ್‌ಗೆ ಮತದಾರರ ಮರ್ಮಾಘಾತ

ಚಿಕ್ಕಮಗಳೂರು: ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಒಳಗೊಂಡ ಎನ್‌ಡಿಎ ಅಭ್ಯರ್ಥಿಗಳು ಗೆಲುವು...