Home namma chikmagalur chikamagalur ಅರಣ್ಯ ಇಲಾಖೆ ಬೋನ್‌ಗೆ ಬಿದ್ದ ಚಿರತೆ ಸೆರೆ
chikamagalurHomeLatest Newsnamma chikmagalur

ಅರಣ್ಯ ಇಲಾಖೆ ಬೋನ್‌ಗೆ ಬಿದ್ದ ಚಿರತೆ ಸೆರೆ

Share
Share

ಕಡೂರು:ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನ್‌ಗೆ ಚಿರತೆಯೊಂದು ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸೆರೆಹಿಡಿದಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ದೇವರಕಾರೇಹಳ್ಳಿ, ಚಿಕ್ಕದೇವನೂರು ಹಾಗೂ ಕುರುಬರಹಳ್ಳಿ ಸುತ್ತಮುತ್ತ ನಿರಂತರವಾಗಿ ಓಡಾಡುತ್ತಾ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಸಿಕ್ಕಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಇದಾಗಿದ್ದು, ಈ ಭಾಗದ ದಾಳಿಂಬೆ ಹಾಗೂ ಶುಂಠಿ ತೋಟಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ತೋಟಗಳಲ್ಲಿ ಚಿರತೆಯ ಓಡಾಟದಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದರು. ಜಮೀನುಗಳಿಗೆ ತೆರಳಲು ಭಯಪಡುವಂತಾಗಿದ್ದು, ಚಿರತೆಯನ್ನು ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ, ಚಿರತೆಯ ಸಂಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂರು ಕಡೆಗಳಲ್ಲಿ ಬೋನ್‌ಗಳನ್ನು ಇರಿಸಿತ್ತು. ಬುಧವಾರ ತಡರಾತ್ರಿ ಕುರುಬರಹಳ್ಳಿ ಗ್ರಾಮದ ಬಳಿ ಇರಿಸಿದ್ದ ಬೋನ್‌ನಲ್ಲಿದ್ದ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನ್‌ನೊಳಗೆ ಸಿಲುಕಿಕೊಂಡಿದೆ.

ಚಿರತೆ ಸೆರೆಯಾಗಿರುವುದು ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಖರಾಯಪಟ್ಟಣ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿರಂತರವಾಗಿ ಚಿರತೆಯ ಭೀತಿಯಲ್ಲಿದ್ದ ಗ್ರಾಮಸ್ಥರು ಇದೀಗ ನಿರಾಳರಾಗಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಚಿರತೆಯ ಓಡಾಟದ ಬಗ್ಗೆ ಆತಂಕ ವ್ಯಕ್ತವಾಗುತ್ತಿತ್ತು. ಇದೀಗ ಚಿರತೆ ಸೆರೆ ಸಿಕ್ಕಿರುವುದರಿಂದ ರೈತರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Leopard trapped in a cage by the Forest Department

Share

Leave a comment

Leave a Reply

Your email address will not be published. Required fields are marked *

Don't Miss

ದೇಶದ ಶಾಂತಿ, ಭದ್ರತೆಗಾಗಿ ಪೊಲೀಸರ ತ್ಯಾಗ ಸ್ಮರಣೀಯ

ಚಿಕ್ಕಮಗಳೂರು: ಖಾಕಿ ಸಮವಸ್ತ್ರವು ಜನರ ವಿಶ್ವಾಸದ ಸಂಕೇತವಾಗಿದ್ದು, ದೇಶದ ಗಡಿ ರಕ್ಷಣೆ, ಆಂತರಿಕ ಭದ್ರತೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಪೊಲೀಸ್ ಪಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಯಶ್ ಪಾಲ್...

ಅಜ್ಜಂಪುರದಲ್ಲಿ ಬೈಕ್‌ನಿಂದ ಬಿದ್ದು ಮಹಿಳೆ ಸಾವು 

ಅಜ್ಜಂಪುರ: ಪತಿಯ ಬೈಕ್‌ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಾಪುರ–ಕಾಟಿಗನೆರೆ ನಡುವಿನ ರಸ್ತೆಯಲ್ಲಿ ಅ.20ರಂದು ನಡೆದಿದೆ. ಮೃತರನ್ನು ಅಮೃತಾಪುರ...

Related Articles

ಯಳ್ಳಂಬಳಸೆಯಲ್ಲಿ 5 ವಾಲ್ಮೀಕಿ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಆರೋಪ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಐದು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ...

ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ ರಾಜ್ಯ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕಿನ ಬರಗಾಲ ಪೀಡಿತ ಸಿದ್ದಲಿಪುರ, ಕೆಂಚಾಪುರ, ಅತ್ತಿಗಟ್ಟೆ, ಮಾಕನಹಳ್ಳಿ ಹಾಗೂ ಜಲದಿಹಳ್ಳಿ ಗ್ರಾಮಗಳಿಗೆ...

ಶಾಂತವೇರಿ ಘಾಟಿಯಲ್ಲಿ ಕ್ಯಾಂಟರ್‌ಗೆ ಬೆಂಕಿ

ತರೀಕೆರೆ: ತಾಲೂಕಿನ ಶಾಂತವೇರಿ ಘಾಟಿ ಪ್ರದೇಶದಲ್ಲಿ ಚಲಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು...

ಎನ್‌ಡಿಎಗೆ ಜಯ-ಕಾಂಗ್ರೆಸ್‌ಗೆ ಮತದಾರರ ಮರ್ಮಾಘಾತ

ಚಿಕ್ಕಮಗಳೂರು: ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಒಳಗೊಂಡ ಎನ್‌ಡಿಎ ಅಭ್ಯರ್ಥಿಗಳು ಗೆಲುವು...