Home ಶಿಕ್ಷಣ ವಂಚಿತರು ಮುಂದೆ ಬರಲು ಸಂವಿಧಾನ ಅವಕಾಶ
HomeLatest Newsnamma chikmagalurTarikere

ಶಿಕ್ಷಣ ವಂಚಿತರು ಮುಂದೆ ಬರಲು ಸಂವಿಧಾನ ಅವಕಾಶ

Share
Share
ತರೀಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದುಳಿದವರು, ಶಿಕ್ಷಣ ವಂಚಿತರು ಮುಂದೆ ಬರಲು ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನ ಅವಕಾಶ ನೀಡಿದೆ ಎಂದು ಚಿತ್ರದುರ್ಗ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ರಂಗೇನಹಳ್ಳಿ ಗ್ರಾಮದ ಶ್ರೀ ಅಂಬಾ ಭವಾನಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ದೀಪಾವಳಿ ಮಿಲನ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜಗಳು ಮಕ್ಕಳಿಗೆ ಕನಿಷ್ಟ ಶಿಕ್ಷಣ ಕೊಡಿಸಬೇಕು. ಮೂಢ ನಂಬಿಕೆ, ಕಂದಾಚಾರ ಬಿಟ್ಟು ಶಿಕ್ಷಣದ ಜತೆ ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಬದಲಾವಣೆ ಹೊಂದಬೇಕು ಎಂದರು.
ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಪೀಠ ಸ್ಥಾಪಿಸುವ ಚಿಂತನೆ ಇದ್ದು,  ಪ್ರಮುಖರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಜಾತೀಯತೆ ಹೋಗಲಾಡಿಸಲು ಆರ್‌ಎಸ್‌ಎಸ್ ಸಂಘಟನೆ ಹುಟ್ಟಿದೆ.  ದಮನಿತರು ಯಾವುದೇ ರಾಜಕೀಯ ಪಕ್ಷದ ಗುಲಾಮರಾಗದೆ ಸಂಘಟಿತರಾಗಿ ತಮ್ಮ ಹಕ್ಕು ಪಡೆದುಕೊಳ್ಳಬೇಕು ಎಂದರು.
ಬಿಜೆಪಿ ಅಲೆಮಾರಿ ಸಮುದಾಯದ ನಿಗಮ ಸ್ಥಾಪನೆ ಮಾಡಿದೆಯಾದರೆ, ಕಾಂಗ್ರೆಸ್‌ನ ತಿರಸ್ಕೃತ ಮನೋಭಾವದಿಂದ ಅದು ಊರ್ಜಿತವಾಗಿಲ್ಲ. ಸಮುದಾಯದ ಮಂದಿ ಪ್ರಜ್ಞಾವಂತರಾಗಿ ಪರಿವರ್ತನೆ ಹೊಂದಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಆರ್‌ಎಸ್‌ಎಸ್ ದೇಶದಲ್ಲಿ ಸಮಾನತೆಗೆ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುಳಿದವರ ಕಲ್ಯಾಣಕ್ಕೆ ಯೋಜನೆ ರೂಪಿಸುತ್ತಿರುವುದೊಂದೇ ಅಲ್ಲ, ತಳ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಿದೆ. ಸಮುದಾಯವನ್ನು ಜಾಗೃತಗೊಳಿಸುವ ಸಲುವಾಗಿ ಆಯೋಜಿಸಿರುವ ಕಾರ್ಯಕ್ರಮದ ಮಹತ್ವ ಪ್ರತಿಯೊಬ್ಬರು ತಿಳಿದು ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.
ಆರ್‌ಎಸ್‌ಎಸ್ ಸಾಮರಸ್ಯ ವಿಭಾಗದ ಪ್ರಮುಖ ಜಿ.ವಾದಿರಾಜ್ ಮಾತನಾಡಿ, ಸ್ವಾತಂತ್ರ್ಯ ನಂತರ ಅಲೆಮಾರಿತನ ಕಡಿಮೆಯಾದರೂ, ಬುಡಕಟ್ಟು ಜನಾಂಗ ಸುಭದ್ರವಿಲ್ಲದ ಅತಂತ್ರ ಜೀವನ ಸಾಗಿಸುವಂತಾಗಿದೆ. ಧಾರ್ಮಿಕ ರಾಯಭಾರಿಯಾಗಿ ಕೆಲಸ ಮಾಡಿದ ಅಲೆಮಾರಿ ಬುಡಕಟ್ಟು ಸಮಾಜದಲ್ಲಿ ಮತಾಂತರ ನಡೆಯುತ್ತಿರುವುದು ಕಳವಳ ಸೃಷ್ಟಿಸಿದೆ ಎಂದು ಹೇಳಿದರು.
ಅಖಿಲ ಭಾರತ ವಿಮುಕ್ತ ಬುಡಕಟ್ಟು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಲೋಹಿತ್ ಮಾತನಾಡಿ, ಆರ್‌ಎಸ್‌ಎಸ್ ಅಲೆಮಾರಿಗಳ ಜೀವನ ಸುಧಾರಣೆಗೆ ಶ್ರಮಿಸುತ್ತಿದೆ. ಅಖಿಲ ಭಾರತ ವಿಮುಕ್ತ ಬುಡಕುಟ್ಟು ಮಹಾಸಭಾ ಸಹ ಖಾಸಗಿ ಸಂಘ ಸಂಸ್ಥೆಗಳ ಮೂಲಕ ಅಲ್ಲಲ್ಲಿ ಮನೆ ನಿರ್ಮಿಸಿಕೊಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪ್ರಾಂತ ಸಂಯೋಜಕ ಗುರು ಗಣೇಶ್, ಆರ್‌ಎಸ್‌ಎಸ್ ಅಲೆಮಾರಿ ವಿಭಾಗ ಪ್ರಚಾರಕ ಗಾ.ರಾ.ಸುರೇಶ್, ಪ್ರಮುಖರಾದ ಸುನೀಲ್ ಹೆಳವರ್, ವೀರೇಶ್, ರಾಘವೇಂದ್ರ ನಾಗೂರ್, ಲಕ್ಷ್ಮಣ್ ಕರೇ, ಆರ್.ರೇವಣ್ಣ, ಸಿದ್ದಪ್ಪಾಜಿ, ರಾಜೇಶ್ ಡೊಕ್ಕಣ್ಣನವರ್, ನಾಗಪ್ಪ, ಎಂ.ಪ್ರವೀಣ್, ಜಿ.ಪಂ ಮಾಜಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ಮಾಜಿ ತಾ.ಪಂ ಅಧ್ಯಕ್ಷ ಎಲ್.ಎಸ್.ಶಿವಯೋಗಿ ಮತ್ತಿತರರಿದ್ದರು.
೨೩ ಟಿಕೆಇ ೧: ತಾಲೂಕಿನ ರಂಗೇನಹಳ್ಳಿ ಗ್ರಾಮದ ಶ್ರೀ ಅಂಬಾ ಭವಾನಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ದೀಪಾವಳಿ ಮಿಲನ್ ಕಾರ್ಯಕ್ರಮವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಿದರು.
The Constitution provides an opportunity for the deprived of education to come forward.
Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾ ಪಂಚಾಯಿತಿ ಮೀಸಲು ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ಸುದ್ದಿ !

ಚಿಕ್ಕಮಗಳೂರು:, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಮೀಸಲಾತಿ ನಿಗದಿ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಶಾಸಕರುಗಳ ಮೂಗಿನ ನೇರಕ್ಕೆ ಮೀಸಲಾತಿ ಪ್ರಕಟಿಸಿರುವುದು ಹಗಲು ಹೊತ್ತು ಎಲ್ಲರೂ ನೋಡುತ್ತಿರುವಾಗ ಕದ್ದು ಹಾಲು ಕುಡಿದಂತೆ...

ಕಡೂರು ರೈಲ್ವೆ ನಿಲ್ದಾಣದಲ್ಲಿ ಕೈಕೊಟ್ಟ ಡಿಜಿಟಲ್ ಪಾವತಿ ವ್ಯವಸ್ಥೆ

ಚಿಕ್ಕಮಗಳೂರು: ಕಡೂರು ರೈಲ್ವೆ ನಿಲ್ದಾಣದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಶುಕ್ರವಾರ ಪ್ರಯಾಣಿಕರು ತೊಂದರೆ ಅನುಭವಿಸಿದರು. ಸರ್ವರ್ ಸಮಸ್ಯೆಯಿಂದ ಡಿಜಿಟಲ್ ಪಾವತಿ ಸ್ಥಗಿತಗೊಂಡು ಕೈಯಲ್ಲಿ ಹಣವಿಲ್ಲದ ಪ್ರಯಾಣಿಕರು...

Related Articles

ವಡ್ಡರಹಳ್ಳಿ-ಕೆ.ಬಿ. ಹಾಳ್ ಕೆರೆಗಳಿಗೆ ಗಂಗೆ ಪೂಜೆ

ಚಿಕ್ಕಮಗಳೂರು: ಬರಗಾಲದ ನಡುವೆಯೂ ಎತ್ತಿನಹೊಳೆ ಯೋಜನೆಯ ನೀರಿನಿಂದ ಕೆ.ಬಿ. ಹಾಳ್ (ಕುರುಬರ ಬೂದಿಹಾಳ್) ಸೇರಿದಂತೆ ಸುತ್ತಮುತ್ತಲಿನ...

ಅ.27ರಂದು ಅರಣ್ಯ ಭವನ ಸಂಕೀರ್ಣ ಲೋಕಾರ್ಪಣೆ

ಚಿಕ್ಕಮಗಳೂರು: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅರಣ್ಯ ಭವನ ಸಂಕೀರ್ಣ ಅ.೨೭ರಂದು ಲೋಕಾರ್ಪಣೆಗೊಳ್ಳಲಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ...

ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸಾವು

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಹಲವರು...

ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಹಲವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು, ಅಜ್ಜಂಪುರ, ಬೀರೂರು ಹಾಗೂ ಪಂಚನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತ...