Home namma chikmagalur chikamagalur ಸ್ಟಿಂಗ್ ಆಪರೇಷನ್ ಮುಂದೆ ಬರಗಾಲ ಮರೆತ ಜನಪ್ರತಿನಿಧಿಗಳು
chikamagalurHomeLatest Newsnamma chikmagalurPolitical News

ಸ್ಟಿಂಗ್ ಆಪರೇಷನ್ ಮುಂದೆ ಬರಗಾಲ ಮರೆತ ಜನಪ್ರತಿನಿಧಿಗಳು

Share
Share

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ದಿನವೂ ರಣ,ರಣ ಸುದ್ದಿ ಮಾಡುತ್ತಿದೆ. ಸಿದ್ದರಾಮಯ್ಯ ನಂತಹ ಮಾಸ್ ಲೀಡರ್ ಸಿಡಿ ಗುಂಡಿಗೆ ಬಿದ್ದು ಅಧಿಕಾರ ತ್ಯಾಗ ಮಾಡ ಬೇಕಾಯಿತು.

ಸಿದ್ದರಾಮಯ್ಯ ಈ ಬಗ್ಗೆ ಸ್ಟೇ ತೆಗೆದುಕೊಂಡು ಈ ವಿಷಯದ ಬಗ್ಗೆ ಮೌನವಾಗಿರುವುದು ನೋಡಿದರೆ ಡಿ.ಕೆ.ಸಿಡಿ ಮುಖ್ಯಮಂತ್ರಿ ಎನ್ನಲೇ ಬೇಕು.ಎಂಟು ವರ್ಷ ಸಿ,ಎಂ ಎಂದು ಅಬ್ಬರಿಸಿ,ಬೊಬ್ಬಿರಿದ ಸಿದ್ದರಾಮಯ್ಯ ಇದುವರೆವಿಗೂ ಯಾವುದಕ್ಕೂ ಅಂಜದೆ ಆಳಕದೆ ಎಲ್ಲವನ್ನೂ ಎದುರಿಸಿದ್ದವರು ಈಗ ” ಮೌನ” ವಹಿಸಿರುವುದು ನೋಡಿದರೆ ಸಿದ್ದರಾಮಯ್ಯ ಎಲ್ಲೋ ದಾರಿ ತಪ್ಪಿದ್ದಾರೆ ಎಂಬ ಚರ್ಚೆ ನಡೆಯುತ್ತಿವೆ.

ಜಾ,ದಳ ತೀವ್ರ. ಹೋರಾಟ, ಪತ್ರಿಕಾಗೋಷ್ಠಿ ನಡೆಸುತ್ತದೆ. ಅದರೆ ಬಿಜೆಪಿಯವರು ಕಾಟಚಾರದ ಹೇಳಿಕೆ ನೀಡುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡಂತೆ ಡಿ.ಕೆ.ಬೆಂಬಲಿಗರು ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿದ್ದಾರೆ.ಅದರೆ ಸಿದ್ದರಾಮಯ್ಯ ನವರ ಕಡೆಯವರ ಹೇಳಿಕೆ ಬೇಕಾಬಿಟ್ಟಿ ಆಗಿದೆ.

ಇದರ ಫಲಿತಾಂಶ ಕಾಂಗ್ರೆಸ್ ಮೇಲೆ ಆಗುತ್ತದೆ, ಆದರೆ ಅದಕ್ಕಿಂತ ಹೆಚ್ಚು ಡಿ.ಕೆ.ಮತ್ತು ಅವರ ಬೆಂಬಲಿಗರು ಅನುಭವಿ ಸಲೇ ಬೇಕು.ಅಹಿಂದದ ಹಿರಿಯಣ್ಣ ಕುರುಬ ಜನಾಂಗ ಕೊತ,ಕೊತ ಕುದಿಯುತ್ತಿದೆ.ಇದರ ಪರಿಣಾಮ ಕಾಂಗ್ರೆಸ್ ಮೇಲೆ ಆಗಲಿದೆ ಎಂಬ ಚರ್ಚೆಗಳುನಡೆಯುತ್ತಿವೆ.

ರಾಕೇಶ್ ಶೆಟ್ಟಿ ಸ್ಟಿಂಗ್ ಆಪರೇಷನ್ ಮಾಡಿದ್ದು ನಾನು ಎಂದು ಹೇಳಿದರು ದಳ,ಬಿಜೆಪಿ ಯವರು ಇರಲಿ ಅಡಳಿತರೂಢ ಕಾಂಗ್ರೆಸ್ ನವರು ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬ ವರ್ತನೆ ಕಳೆದ ನಲವತ್ತು ವರ್ಷಗಳ ಆಡಳಿತಕ್ಕೆ ಕಪ್ಪು ಚುಕ್ಕೆ.ಸಿಡಿಗೂ ಡಿ.ಕೆ.ಗೂ ಅವಿನಾಭಾವ ಸಂಬಂಧ ಎತ್ತ ಬೆಟ್ಟು ಮಾಡಿದರು

ಡಿ.ಕೆ.ಕಡೆ ಹೋಗುತ್ತದೆ. ಎಲ್ಲದಕ್ಕೂ ತೊಡೆ ತಟ್ಟುತ್ತಿದ್ದ ಸಿದ್ದರಾಮಯ್ಯ ಮುಖ ಇಳಿ ಬಿಟ್ಟಿದ್ದಾರೆ.ಅವರ ಹಿಂಬಾಲಕರು ನಾಪತ್ತೆಯಾಗಿದ್ದಾರೆ..ಈ ಪ್ರಕರಣ ಯಾವ ಕಡೆ ತಿರುಗುತ್ತದೆ ಎಂಬುದು ಮುಂದಿನ ದಿನಗಳು ತಿಳಿಯಲಿದೆ.
ಭೀಕರ ಬರ ಮತ್ತು ರಾಜ್ಯದ ದಿಕ್ಕೆಟ್ಟ ಆಡಳತ ರಾಜ್ಯದ ಹದಿನೈದು ತಾಲ್ಲೂಕು ಹೊರತು ಪಡಿಸಿದರೆ ಭೀಕರ ಬರಗಾಲದಿ‌ಂದ ರೈತರು ಮತ್ತು ಜನತೆ ತಲ್ಲಣಿಸಿ ಹೋಗಿದ್ದಾರೆ. ಅಕ್ಟೋಬರ್ ತಿಂಗಳು ಈಗಲೇ ಇಂತಹ ದುಸ್ಥಿತಿ ಉಂಟಾಗಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಗುಳೇ ಹೋಗುವುದು ಕಷ್ಟ. ಏಕೆಂದರೆ ಮಲೆನಾಡಿನಲ್ಲಿ ನೀರಿನ ಸಮಸ್ಯೆ ಇನ್ನೂ ದನ ಕರಗಳು ಮೇಯುವುದು ಹೇಗೆ? ಮತ್ತು ಜನರಿಗೆ ತಿನ್ನಲು ಆಹಾರದ ಕೊರತೆ.

ರಾಜ್ಯದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ರೈತರು ಮತ್ತು ಜನತೆ ಹಾಗೂ ಜಾನುವಾರಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ.ಬರ,ಕಾವೇರಿ. ಕಬ್ಬು ಬೆಳೆಗಾರರ ಹೋರಾಟ ಹಾಗೂ ಬಿಡದಿ ರೈತರ ಗಲಾಟೆ ಹೆಚ್ಚುತ್ತಿರುವಾಗ ಸ್ಟಿಂಗ್ ಆಪರೇಷನ್ ಬಗ್ಗೆ ರಾಜ್ಯದಲ್ಲಿ ಸದ್ದು ಹೆಚ್ಚಾಗುತ್ತಿದೆ. ಡಿ.ಕೆ.ಶಿವಕುಮಾರ್ ಡಿಕ್ಕಿ ಹೊಡೆದು ಕೊಂಡು ದರ್ಬಾರ್ ನಡೆಸುತ್ತಿದ್ದಾರೆ.

Public representatives forget the drought in the face of a sting operation

Share

Leave a comment

Leave a Reply

Your email address will not be published. Required fields are marked *

Don't Miss

ನಿಖಿಲ್ ಕುಮಾರಸ್ವಾಮಿ ರಾಜಕಾರಣದಲ್ಲಿ ಕಣ್ಣು ಬಿಡುತ್ತಿರುವ ವ್ಯಕ್ತಿ

 ಕಡೂರು:  ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರೈತ ಸ್ವಾಭಿಮಾನ ಸಮಾವೇಶದಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಆಗಲಿ, ಬರಗಾಲದಿಂದ ಉಂಟಾಗಿರುವ...

ಹರಿಹರಪುರದಲ್ಲಿ ಮನೆ ಕಳ್ಳತನ: ₹2 ಲಕ್ಷ ಮೌಲ್ಯದ ಚಿನ್ನದ ಸರ ಅಪಹರಣ

ಕೊಪ್ಪ: ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಸುಮಾರು ₹2 ಲಕ್ಷ ಮೌಲ್ಯದ 24 ಗ್ರಾಂ ತೂಕದ ಚಿನ್ನದ ಸರ ಹಾಗೂ ₹600 ನಗದು ಕಳವು ಮಾಡಿರುವ...

Related Articles

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಷೇಧಿತ ಪಟಾಕಿಗಳ ಮಾರಾಟ ನಿಷೇಧ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 2026ನೇ ಸಾಲಿನ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಹಾಗೂ ಮಾನ್ಯ ಸರ್ವೋಚ್ಚ...

ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಅಂಧ ಕಲಾವಿದ ಡಿ.ರಾಮಪ್ಪ ಆಯ್ಕೆ

ಕಡೂರು: ಕರ್ನಾಟಕ ಜಾನಪದ ಅಕಾಡೆಮಿಯ 2026-27ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕಡೂರು ತಾಲ್ಲೂಕು ಬೀರೂರು...

ಶೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದ ಯವಕ ಆತ್ಮಹತ್ಯೆ

ಚಿಕ್ಕಮಗಳೂರು: ಶೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದ ಯುವಕನೊಬ್ಬ ತನ್ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ...

ಅಜ್ಜಂಪುರದಲ್ಲಿ ಭದ್ರಾ ನಾಲೆಗೆ ಹಾರಿದ ರೈತ ಆತ್ಮಹತ್ಯೆ

ಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ...