ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯುವುದು ಬಹುತೇಕ ಖಚಿತ. ಈಗಾಗಲೇ ಮೀಸಲಾತಿ ಪ್ರಕಟಿಸಲಾಗಿದೆ.ಕಳೆದ ಆರೇಳು ವರ್ಷಗಳಿಂದ ಜಿ,ಪಂ.ಮತ್ತು ತಾ,ಪಂ ಗಳಿಗೆ ಆಡಳಿತಾಧಿಕಾರಿ ನೇಮಿಸಿ ಜನ ಅತ್ತ ಸುಳಿಯದಂತಹ ದುಸ್ಥಿತಿ ಬಂದಿತ್ತು.ಇನ್ನೂ ಜನಪ್ರತಿನಿಧಿಗಳೆಂಬ ಶನಿ ಸಂತಾನಗಳಿಗೆ ಚುನಾವಣೆ ಬೇಡವಾಗಿತ್ತು.ಬರುವುದೇಲ್ಲಾ ನಮಗೆ ಬರಲಿ ಜೇಬು ಮತ್ತಷ್ಟು ತುಂಬಿಕೊಳ್ಳುವ ತವಕದಲ್ಲಿ ಇದ್ದರು.
ಅಂತೂ, ಇಂತೂ ಚುನಾವಣೆ ಜನವರಿಯಲ್ಲಿ ನಡೆಯುವುದು ಬಹುತೇಕ ಖಚಿತ.ಚಿಕ್ಕಮಗಳೂರು ಜಿಲ್ಲೆಯಲ್ಲಿ 36 ಸ್ಥಾನಗಳಿವೆ.ಇದುವರೆವಿಗೂ ಬಯಲು ಸೀಮೆಯವರು ಹೆಚ್ಚು ಅಧಿಕಾರ ಹಿಡಿದಿದ್ದರು ಇನ್ನೂ ಮುಂದೆ ಬಹುತೇಕ ಮಲೆನಾಡಿನವರು ಹೆಚ್ಚು ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.ಬಯಲು ಸೀಮೆಯವರು ಹೆಚ್ಚೆಂದರೆ ಹದಿನೈದು ಸ್ಥಾನ ಪಡೆದರೆ ಹೆಚ್ಚು ಇನ್ನೂ ಉಳಿದ ಹದಿನೈದರಿಂದ ಇಪ್ಪತ್ತು ಸ್ಥಾನಗಳನ್ನು ಮಲೆನಾಡಿನವರು ಗೆಲ್ಲುವ ಸಾಧ್ಯತೆ ಇದೆ.ಜನಸಂಖ್ಯೆ ಆಧಾರದ ಮೇಲೆ ಈ ಪ್ರಕ್ರಿಯೆ ನಡೆದಿದೆ.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಖಾಂಡ್ಯ,ಸಖರಾಯ ಪಟ್ಟಣ ಜಾಗರ,ವಸ್ತಾರೆ,ಮತ್ತು ದೇವನೂರು ಕ್ಷೇತ್ರಗಳು ಸಾಮಾನ್ಯವಾಗಿರುವುದರಿಂದ ಸಿ.ಟಿ.ರವಿ/ ಶಾಸಕ ಹೆಚ್.ಡಿ.ತಮ್ಮಯ್ಯ ಮಧ್ಯೆ ಪೈಪೋಟಿ ನಡೆಯಲಿದೆ.ಇದೇ ರೀತಿ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಿಂಗಟಗೆರೆ ಸಾಮಾನ್ಯವಾದರೆ ದೇವನೂರು ಮತ್ತು ಸಖರಾಯ ಪಟ್ಟಣದ ಕೆಲ ಹಳ್ಳಿಗಳು ಕಡೂರು ತಾಲ್ಲೂಕುಗೆ ಸೇರುತ್ತವೆ ಇದರಿಂದ ಶಾಸಕ ಆನಂದ್ ಖುಷಿಯಾಗಿದ್ದರೆ ಇದಕ್ಕೆ ಬೆಳ್ಳಿ ಪ್ರಕಾಶ್ ಪೈಪೋಟಿ ನೀಡಲು ತಯಾರಿ ನಡೆಸಿದ್ದಾರೆ.
ಇನ್ನೂ ಶೃಂಗೇರಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಶಾಸಕ ರಾಜೇಗೌಡ ಮತ್ತು ಜೀವರಾಜ್ ಮಧ್ಯೆ ನಡೆಯಲಿದೆ.ಮೂಡಿಗೆರೆ ಕ್ಷೇತ್ರದಲ್ಲಿ ಮಾತ್ರ ಶಾಸಕಿ ಸೇಫ್ ಇದ್ದಂತೆ ಕಂಡರು ಮೊದಲಿನ ಶಕ್ತಿ ಕಳೆದು ಕೊಂಡಿದ್ದಾರೆ.ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಸಾಮಾನ್ಯ ಪ್ರಶ್ನೆ ಇಲ್ಲ .
ಐದು ಜಿ,ಪಂ ಕ್ಷೇತ್ರದಲ್ಲಿ ಶಿವನಿ ಕ್ಷೇತ್ರ ಮಾತ್ರ ಬಿಸಿಎಂ(ಎ) ಸಾಮಾನ್ಯವಾಗಿರುವುದು ಬಿಟ್ಟರೆ ಇನ್ನುಳಿದ ಲಕ್ಕವಳ್ಳಿ ಎಸ್ಸಿ,ಅಮೃತಾಪುರಜನರಲ್ ಮಹಿಳೆ ಹಾಗೂ ಲಿಂಗದಹಳ್ಳಿ ಬಿಸಿಎಂ ಎ ಮಹಿಳೆ ಹಾಗೂ ಬಗ್ಗವಳ್ಳಿ ಎಸ್ಸಿ ಮಹಿಳೆ ಮೀಸಲು ನಿಗದಿ ಆಗಿದ್ದು ಶಾಸಕರ ಕುಟುಂಬದವರು ಲಿಂಗದಹಳ್ಳಿಯಿಂದ ಸ್ಪರ್ಧೆ ಮಾಡುತ್ತಾರೆ ಹೀಗಾಗಿ ಚುನಾವಣೆ ರಂಗೇರುತ್ತದೆ.ಇನ್ನುಳಿದಂತೆ ವಿರೋಧ ಪಕ್ಷಗಳಿಗೆ ಛಾನ್ಸ್ ಹೆಚ್ಚಾಗಿದೆ .ಎಂಬ ಲೆಕ್ಕಾಚಾರ ನಡೆದಿದೆ.ಒಟ್ಟಾರೆ ಜಿ,ಪಂ ಚುನಾವಣೆ ಅಂತಹ ಪೈಪೋಟಿ ಕಷ್ಟ ,ಕಷ್ಟ.
Competition between G.P.M. and T.P.M. elections is difficult
Leave a comment