ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಸೃಷ್ಠಿಯಾಗಿರುವ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.
ಬೀರೂರು ಅಮೃತ್ ಮಹಲ್ ಕೇಂದ್ರ ಹಾಗೂ ಅಜ್ಜಂಪುರದ ಅಮೃತ್ ಮಹಲ್ ತಳಿ ಸಂವರ್ದನ ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮೇವು ಬೆಳೆದಿರುವ ಪ್ರದೇಶವನ್ನು ವೀಕ್ಷಣೆ ಮಾಡಿ ಇದೇ ಫಾರಂ ನಲ್ಲಿ ನೂರು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಯಲು ವಿಬಿಜಿ ರಾಂಜಿ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಪಡೆದು ಮೇವನ್ನು ಬೆಳೆಯಬೇಕು ಬೆಳೆದ ಮೇವನ್ನು ತುರ್ತು ಸಂದರ್ಭದಲ್ಲಿ ವಿತರಣೆಗಾಗಿ ಶೇಖರಿಸಿಡಲು ಕಡೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
ಅಮೃತ್ಮಹಲ್ ತಳಿ ಸಂವರ್ದನ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ಖಾಲಿ ಇರುವ ಜಗದಲ್ಲಿ ಮೇವನ್ನು ಬೆಳೆಯುವಂತೆ ತಿಳಿಸಿದರು. ಅಮೃತ್ಮಹಲ್ ತಳಿ ಸಂವರ್ದನ ಕೇಂದ್ರದ ಉಪನಿರ್ದೇಶಕರು ಜಿಲ್ಲಾಧಿಕರಿಗಳಿಗೆ ಮಾಹಿತಿ ನೀಡಿ ಈ ಜಾಗವು ನಮ್ಮ ಕೇಂದ್ರದ ರಾಸುಗಳಿಗೆ ಮೇಯಲು ಬಿಡುವಂತ ಜಾಗವಾಗಿದ್ದು ಆ ಜಗವನ್ನು ಬಿಟ್ಟು ಉಳಿದ ಜಾಗದಲ್ಲಿ ಮೇವನ್ನು ಬೆಳೆಯಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಎಳ್ಳಂಬಳಸೆ ಗ್ರಾಮಕ್ಕೆ ಭೆಟಿ ನೀಡಿ ಮೇವು ಕಿಟ್ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಪ್ರಸ್ತುತ ಮಾಳೆಯಾಗುತಿದ್ದು ಶೀಘ್ರವಾಗಿ ಮೇವು ಕಿಟ್ ವಿತರಸಿ ಮೇವು ಬೆಳೆಯಲು ಕ್ರಮವಹಿಸಬೇಕು ಎಂದ ಅವರು ಜಿ. ಮಾದಾಪುರ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿ ತೆರೆಯಲು ಉದ್ದೇಶಿಸಿರುವ ಗೋಶಾಲೆಯ ಜಾಗವನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರಲ್ಲದೇ, ಯಗಟಿ ಗ್ರಾಮದ ಸಂತೆ ಮೈದಾನದಲ್ಲಿ ತೆರೆಯಲು ಉದ್ದೇಶಿಸಿರುವ ಫಾಡರ್ ಬ್ಯಾಂಕ್ ಸ್ಥಳವನ್ನು ವೀಕ್ಷಿಸಿ, ಮೇವು ಸಂಗ್ರಹಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಅಜ್ಜಂಪುರದ ಬರ ಪೀಡಿತ ಪ್ರದೇಶಗಳಿಗೆ ಭೇಟಿ : ಅಜ್ಜಂಪುರ ತಾಲ್ಲೂಕು ತೀವ್ರ ಬರಪೀಡಿತವಾಗಿದ್ದು ಅಜ್ಜಂಪುರದಲ್ಲಿ ಹತ್ತು ಹೊಸ ಕೆರೆಗಳ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ತಹಸಿಲ್ದಾರ್ ವಿನಾಯಕ ಸಾಗರ್ಗೆ ಸೂಚಿಸಿದರು. ತಹಸಿಲ್ದಾರ್ ಮಾಹಿತಿ ನೀಡಿ ಅಜ್ಜಂಪುರ ತಾಲ್ಲೂಕಿನಲ್ಲಿ ಈಗಾಗಲೇ ಮೂರು ಕೆರೆಗಳ ನಿರ್ಮಾಣಕ್ಕೆ ಒಟ್ಟು ಅರವತ್ತು ಎಕರೆ ಜಗವನ್ನು ಗುರುತಿಸಿದ್ದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ಸೋಮನಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದು ಜನ-ಜಾನುವಾರುಗಳ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಬರದು ಎಂದರು. ಬಗ್ಗವಳ್ಳಿಯಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ಗೊಂಡೆದಹಳ್ಳಿಯಲ್ಲಿ ಹೊಸ ಕೆರೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಜ್ಜಂಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಬರ ನಿರ್ವಹಣೆ ಕುರಿತು ಸಭೆ ನಡೆಸಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಂತಹ ಗ್ರಾಮಗಳ ಬಗ್ಗೆ ಮಾಹಿತಿ ಪಡೆದರು.
ತಹಸಿಲ್ದಾರ್ ಮಾಹಿತಿ ನೀಡಿ ಅಜ್ಜಂಪುರದಲ್ಲಿ ಒಂದು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಡಲಾಗುತ್ತಿದ್ದು, ಮೂರು ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಬೋರ್ವೆಲ್ನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಒಂದು ತಿಂಗಳಲ್ಲಿ ಸುಮಾರು ೫೪ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಬಹುದು ಎಂದು ವರಧಿ ನೀಡಲಾಗಿದೆ ಇದಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮೊದಲ ಆಯ್ಕೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆಯುವುದು, ಎರಡನೇ ಆಯ್ಕೆ ಪ್ರಸ್ತುತ ಇರುವ ಬೋರ್ವೆಲ್ ಗಳನ್ನು ಡೀಪನಿಂಗ್ ಮಾಡುವುದು, ಅವಶ್ಯಕತೆ ಇದ್ದ ಸಂದರ್ಭದಲ್ಲಿ ಮಾತ್ರ ಹೊಸ ಬೋರ್ವೆಲ್ ಕೊರೆಸಬೇಕು. ಕೊರೆಸುವ ಸಂದರ್ಭದಲ್ಲಿ ನೀರಿನ ಮೂಲಗಳ ಹತ್ತಿರ ಕೊರೆಸುವುದು ಉತ್ತಮ ಎಂದ ಅವರು ಕೊನೆಯ ಆಯ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.ಸಭೆಯ ನಂತರ ಹೆಬ್ಬೂರು ಲಿಪ್ಟ್ ಇರಿಗೇಶನ್ ಪಾಯಿಂಟ್ ಹಾಗೂ ಗೌರಪುರ ಗ್ರಾಮಗಳಿಗೆ ಭದ್ರ ಮೇಲ್ದಂಡೆ ಮೂಲಕ ಹನಿ ನೀರಾವರಿ ಮೂಲಕ ಜಮೀನುಗಳಿಗೆ ನೀರು ಒದಗಿಸುತ್ತಿರುವ ಬಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಜ್ಜಂಪುರ ತಹಸೀಲ್ದಾರ್ ವಿನಾಯಕ ಸಾಗರ್, ಕಡೂರು ತಹಸೀಲ್ದಾರ್ ಪೂರ್ಣಿಮಾ, ಹಾಗೂ ಅಜ್ಜಂಪುರ, ಕಡೂರು ತಾಲ್ಲೂಕಿನ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Take measures to ensure there is no shortage of fodder for livestock.
Leave a comment