ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಪತ್ತರಗುಟ್ಟುತ್ತಿದೆ.ಶಾಸಕರು ಮತ್ತು ಕಾಂಗ್ರೆಸ್ ದುಡಿದ ಮುಖಂಡರು ಕಣ್ಣ್ ,ಕಣ್ಣ್ ಬಿಡುತ್ತಿದ್ದಾರೆ. ನಾಲ್ಕು ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅದರಲ್ಲೂ ಮಹಿಳಾ ಖೋಟದಡಿ ಸಚಿವರಾಗಲು ಪರದಾಡುತ್ತಿರುವ ಹತ್ತಾರು ಜನ ಹೈಕಮಾಂಡ್ ಮತ್ತು ಸರ್ಕಾರದ ವಿರುದ್ಧ ಕೊತ,ಕೊತ ಕೂದಿಯುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಬಾರಿ ರಾಜೇಗೌಡ, ಶ್ರೀನಿವಾಸ್, ಡಾ. ಅಂಶುಮಂತ್ ಮತ್ತು ಎ.ಎನ್.ಮಹೇಶ್ ಹಾಗೂ ಹರೀಶ್ ಎಂಬುವರು ಸ್ಥಾನ ಗಿಟ್ಟಿಸಿದ್ದರು.ಈಗ ಮತ್ತೆ ನಿಗಮ ಮಂಡಳಿಗಳ ಹಂಚಿಕೆಗೆ ಸರ್ಕಸ್ ಶುರುವಾಗಿದ್ದು ಹಾಲಿ ಮೂರು ಜನ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ.ಅದರಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅಯಾಕಟ್ಟಿನ ನಿಗಮವಾದ ವಿದ್ಯುತ್ ನಿಗಮ ಉಳಿಸಿಕೊಂಡರೆ ಎ.ಎನ್.ಮಹೇಶ್ ರವರನ್ನು ಐದು ವರ್ಷಗಳ ಕಾಲ ಯಾರೂ ಏನೂ ಮಾಡಲು ಸಾಧ್ಯವಿಲ್ಲ.
ಇದರ ಜೊತೆಗೆ ಪ್ರವಾಸೋದ್ಯಮದ ನಿಗಮದ ಅಧ್ಯಕ್ಷರಾಗಿರುವ ಎನ್.ಆರ್.ಪುರದ ಶ್ರೀನಿವಾಸ್ ಮುಷ್ಟಿ ಬಿಗಿಡಿದು ಮತ್ತೊಮ್ಮೆ ಅದೇ ಸ್ಥಾನದಲ್ಲಿ ಕಂಗೊಳಿಸುವುದು ಖಚಿತ. ಇನ್ನೂ ಮಂತ್ರಿಯಾಗ ಬೇಕು ಎಂದು ರಾತ್ರಿ ಹಗಲು ಸುತ್ತಿದ ತರೀಕೆರೆ ಶಾಸಕ ಶ್ರೀನಿವಾಸ್ ಗೆ ನಿಗಮದ ಬಾಗಿಲು ತೆರೆದಿದೆ ಅದರಲ್ಲೂ ಮೈಸೂರು ಮೀನರಲ್ಸ್ ನಿಗಮದ ಅಧ್ಯಕ್ಷನಾಗವ ಅವಕಾಶ ಹೆಚ್ಚಾಗಿದೆ. ಇದರ ಜೊತೆಗೆ ಮಹಿಳಾ ಖೋಟಾದಡಿ ರೇಖಾ ಹುಲಿಯಪ್ಪ ಗೌಡ ಯಾವುದಾದರೂ ನಿಗಮ ಕ್ಕೆ ಅಧ್ಯಕ್ಷರಾಗುವ ಅವಕಾಶ ಹೆಚ್ಚಾಗಿದೆ.
ಇನ್ನೂ ಕಾಂಗ್ರೆಸ್ನ ಕಟ್ಟಾಳು ಎಂ.ಎಲ್.ಮೂರ್ತಿ ಮಾತ್ರ ಅವರೀವರ ಮನೆ ಬಾಗಿಲು ತಟ್ಟುವ ಅವಕಾಶಕ್ಕೆ ದಾರಿ ಕಾಣದಾಗಿದೆ.ಇಂತಹ ನಿಷ್ಠಾವಂತ ರಂಗೇನಹಳ್ಳಿ ವಿಶ್ವನಾಥ್, ಕಡೂರಿನ ಶ್ರೀನಿವಾಸ್ ಮತ್ತು ಮೂಡಿಗೆರೆ ಜಯರಾಂ ನಂತವರು ಕೈಕೈ ಹಿಸುಕಿ ಕೊಂಡು ನಮ್ಮದು ಪಕ್ಷ ನಿಷ್ಠೆ ಎನ್ನುವವರು ಇದ್ದಾರಲ್ಲಾ ಎನ್ನುವ ಜನರಿದ್ದಾರೆ.
Congress struggling to allocate posts in boards and corporations.
Leave a comment