ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಇಂದಿನ ಯುವಪೀಳಿಗೆ ಬಹಳ ಷ್ಟು ಎಚ್ಚರಿಕೆ ವಹಿಸಬೇಕು. ಕಲಿಕೆಯಲ್ಲಿ ಹೊರತಾಗಿ ಯಾವುದೇ ದುಶ್ಚಟ ಅಥವಾ ವ್ಯಾಮೋಹಕ್ಕೆ ಒಳಗಾಗ ದೇ ಅಂದುಕೊಂಡ ಗುರಿತಲುಪಬೇಕು ಎಂದು ಸಾಮಾಜಿಕ ಚಿಂತಕಿ ರಾಧಾಸುಂದ್ರೇಶ್ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಅಂತರಾಷ್ಟ್ರೀಯ ಪ್ರಜಾಪ್ರಭು ತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿ ಸಾಧಿಸುವ ಛಲ, ಗುರಿ ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಕಲಿಕೆಯ ಬ ದುಕು ಸಾರ್ಥಕವಾಗಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಾಲಕರು ಜೀವನದುದ್ದಕ್ಕೂ ಶ್ರಮಿಸುತ್ತಾರೆ. ಆ ಹೆತ್ತವ ರ ಆಸೆ ನೀರಾಗಿಸದೇ, ನನಸಾಗಿಸುವತ್ತ ಚಿಂತಿಸುವುದು ಉತ್ತಮ ಮಕ್ಕಳ ಲಕ್ಷಣ ಎಂದರು.
ದೇಶದಲ್ಲಿ ಕಾರ್ಮಿಕರು ಹಾಗೂ ಯೋಧರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಈರ್ವರು ಒಂದು ದಿನ ತಮ್ಮೆಲ್ಲಾ ಕಾರ್ಯಗಳನ್ನು ಬದಿಗಿರಿಸಿದರೆ, ದೇಶ ಮುನ್ನೆಡೆಯಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ವಿದ್ಯಾಥಿ ಗಳು ತಮ್ಮ ಜೀವನದಲ್ಲಿ ಯೋಧ ಮತ್ತು ಕಾರ್ಮಿಕರಿಗೆ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಬಿ.ಎಸ್.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯ ವಸ್ಥೆ ಕಳೆದುಕೊಂಡಿದೆ. ನಾವೆಲ್ಲರೂ ದೇಶದ ಬಹುದೊಡ್ಡ ಹಬ್ಬಗಳಾದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ದಿನದ ಹಬ್ಬವನ್ನು ಮರೆತಿದ್ದೇವೆ. ಹೀಗಾಗಿ ಮನೆಗಳಲ್ಲಿ ಆಚರಿಸುವ ಪ್ರತಿ ಹಬ್ಬದಂತೆ, ಈ ಎರಡು ಹಬ್ಬ ವನ್ನು ಆಚರಿಸಿದರೆ ಮಹಾಪುರುಷರ ಕನಸು ಸಾರ್ಥಕವಾಗಲಿದೆ ಎಂದರು.
ಹಾಸನ ಸರ್ಕಾರಿ ಕಲಾ ಕಾಲೇಜು ಸಹ ಪ್ರಾಧ್ಯಾಪಕ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಪ್ರಜಾಪ್ರ ಭುತ್ವ ದಿನಕ್ಕೆ ಸೀಮಿತವಾಗಬಾರದು. ಪ್ರತಿಯೋರ್ವರ ಸಾಮಾನ್ಯರ ಬದುಕಿನಲ್ಲಿ ಆಶಾದೀಪವಾಗಿ ಪ್ರಜ್ವಲಿಸ ಬೇಕು. ಪ್ರಥಮ ಬಾರಿಗೆ ಮತ ಚಲಾಯಿಸುವ ಯುವಪೀಳಿಗೆ ಸಂವಿಧಾನದ ವಿಚಾರವನ್ನು ಅರ್ಥೈಸಿಕೊಂ ಡು ಮತ ಚಲಾಯಿಸುವುದು ಸೂಕ್ತ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಮೂಡಲಗಿರಿಯ್ಯ ದೇ ಶದ ಪ್ರತಿ ನಾಗರೀಕರಿಗೆ ಮತದಾನದ ಹಕ್ಕನ್ನು ಕರುಣಿಸಿದ ಚೇತನ ಡಾ|| ಬಿ.ಆರ್.ಅಂಬೇಡ್ಕರ್. ಈ ಮತದಾ ನದ ಅವಕಾಶವನ್ನು ಆಮಿಷಗಳಿಗೆ ಒಳಗಾಗಿ ಮಾರಿಕೊಂಡರೆ ಪ್ರಜಾಪ್ರಭುತ್ವ ಶಕ್ತಿ ನಶಿಸುವ ಜೊತೆಗೆ ದೇಶದ ಆಡಳಿತಕ್ಕೂ ಅಪಾಯ ತಂದೊಡ್ಡಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ವಿಷಯಗ ಳ ಬಗ್ಗೆ ಪ್ರಬಂಧ ಮಂಡಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಸಾಂಸ್ಕೃತಿಕ ಸಮಿತಿ ಸಂಚಾಲಕ ಎ.ಸಿ. ಪುಟ್ಟಸ್ವಾಮಿ, ಐಕ್ಯೂಎಸಿ ಸಂಚಾಲಕ ದೀಕ್ಷಿತ್ಕುಮಾರ್, ಯೋಜನಾಧಿಕಾರಿ ಎ.ಆರ್.ಶಿವರಾಜ್, ವಿವಿದ ವಿ ಭಾಗದ ಮುಖ್ಯಸ್ಥರಾದ ಡಾ.ಸುಷ್ಮಾ, ಲೋಕೇಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Do not succumb to infatuation during your formative years.
Leave a comment