Home namma chikmagalur chikamagalur ಕ್ಷೌರಿಕ ಮೂಲ ವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಿ
chikamagalurHomeLatest Newsnamma chikmagalur

ಕ್ಷೌರಿಕ ಮೂಲ ವೃತ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಿ

Share
Share

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಅನೇಕ ಬಲಾಡ್ಯ ಕಂಪನಿಗಳು ಮು ಂದಾಗಿವೆ. ಈ ಮೂಲ ವೃತ್ತಿದಾರರು ಕುಲಕಸುಬನ್ನು ತ್ಯಜಿಸದೇ, ಉತ್ತೇಜಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ಬಳ ಸಿ ಕ್ಷೌರಿಕ ಉದ್ಯಮವನ್ನು ವೃದ್ದಿಸಬೇಕು ಎಂದು ವಕೀಲ ಪ್ರಕಾಶ್ ಹೇಳಿದರು.

ನಗರದ ನೆಹರು ರಸ್ತೆಯಲ್ಲಿ ಶ್ರೀರಾಮಮಂದಿರ ಆರ್ಯನಯಜ ಕ್ಷತ್ರಿಯ ಸವಿತಾ ಸಮಾಜ ಹಾಗೂ ಯುವ ವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ಧ ವಿಶ್ವ ಕ್ಷೌರಿಕ ದಿನಾಚರಣೆ ಹಾಗೂ ಕ್ಷೌರಿಕ ರಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಅಂದ-ಚೆಂದವನ್ನು ಹೆಚ್ಚಿಸುವ ಕ್ಷೌರಿಕ ವೃತ್ತಿ ಒಂದು ವಿಶೇಷವಾಗಿದೆ. ಇಂದಿನ ಯುವಕರು ಹೆಚ್ಚು ಮೂಲಕಸುಬನ್ನು ಕೈಬೀಡದೇ ಮುಂದುವರೆಸುವ ಕಾರ್ಯ ಮಾಡಬೇಕು. ಅಲ್ಲದೇ ವೃತ್ತಿ ಕಡಿಮೆ ವೆಚ್ಚದಲ್ಲಿ ಲಾಭಾಂಶ ಗಳಿಸಿಕೊಡುವ ಒಂದು ಉದ್ಯಮವಾಗಿದೆ ಎಂದು ತಿಳಿಸಿದರು.

ಇತ್ತೀಚಿನ ಹೊಸ ಹೊಸ ತಂತ್ರಜ್ಞಾನ ಬಳಕೆಯಿಂದ ಶೇವಿಂಗ್, ಹೇರ್‌ಕಟ್ಟಿಂಗ್ ಆಕರ್ಷಕತೆ ಬೆಳೆಸುತ್ತಿ ದೆ. ಗ್ರಾಹಕರಿಗೆ ಉತ್ತಮ ಸೇವೆ, ವಿಭಿನ್ನ ರೀತಿಯ ವಿನ್ಯಾಸಗಳು ಸೆಳೆಯುವ ಒಂದು ಸಾಧನ. ಹೀಗಾಗಿ ಹೆಚ್ಚು ಶ್ರಮಿಸಿದರೆ ಬದುಕನ್ನು ಬದಲಾಯಿಸುವ ಅಪರೂಪದ ಕಸುಬಾಗಿದೆ ಎಂದು ಹೇಳಿದರು.

ಶ್ರೀಮಾ ಬ್ಯೂಟಿಷಿಯನ್ ಅಕಾಡೆಮಿ ಸಂಸ್ಥಾಪಕಿ ಮಂಜುಳಾ ಮಾತನಾಡಿ ಇತ್ತೀಚಿನ ಯುವಕರು ಡಾಕ್ಟರ್, ಇಂಜಿನಿಯರ್‌ಗಳಾಗುವ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪೂರ್ವಿಕರ ಕಾಲಘಟ್ಟದಿಂದ ಹರಿದುಬಂದಿರುವ ವೃತ್ತಿಯನ್ನು ಮಾಡುತ್ತಿಲ್ಲ. ಹೀಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವೃತ್ತಿ ಆರಂಭಿಸಿದರೆ, ಹಂತ ಹಂತವಾಗಿ ಬೆಳೆದು ದೊಡ್ಡಮಟ್ಟಿನ ಮಳಿಗೆಯಾಗಿ ಪರಿವರ್ತಿಸಬಹುದು ಎಂದರು.

ಶ್ರೀರಾಮಮಂದಿರ ಆರ್ಯನಯಜ ಕ್ಷತ್ರಿಯ ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್ ಮಾತ ನಾಡಿ ಕಾರ್ಯಾಗಾರದಲ್ಲಿ ಆಧುನಿಕತೆಗೆ ತಕ್ಕಂತೆ ಹೇರ್‌ಕೇರ್, ಸ್ಟೈಲಿಂಗ್, ಹೇರ್ ಕಲರ್, ಕರ್ಲಿ, ಸ್ಕಿನ್ ಕೇ ರ್ ಸೇರಿದಂತೆ ವಿವಿಧ ಮಾದರಿಯ ತರಭೇತಿಯನ್ನು ನೀಡಲಾಗುತ್ತಿದ್ದು ಆಸಕ್ತಿಯುಳ್ಳವರು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಖಜಾಂಚಿ ಗಿರೀಶ್, ಕಾರ್ಯದರ್ಶಿ ಯಶ್ವಿನ್, ಸದಸ್ಯರಾದ ಬಸವರಾಜ್‌ಗೋಗಿ, ಲಕ್ಷ್ಮೀಕಾಂತ್, ಎನ್.ಶ್ರೀಧರ್, ನಾಗರಾಜ್, ಯುವ ವೇದಿಕೆ ಅಧ್ಯಕ್ಷ ಧನರಾಜ್, ಉ ಪಾಧ್ಯಕ್ಷ ನರೇಂದ್ರ, ಗೌರವಾಧ್ಯಕ್ಷ ಹರೀಶ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Work to promote the barbering profession.

Share

Leave a comment

Leave a Reply

Your email address will not be published. Required fields are marked *

Don't Miss

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು: ಈಜಲು ತೆರಳಿದ್ದ 23 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭೈರನಕಟ್ಟೆ ಸಮೀಪದ ಭದ್ರಾ ಬ್ಯಾಕ್‌ವಾಟರ್‌ನಲ್ಲಿ ನಡೆದಿದೆ. ಮೃತ ಯುವಕನನ್ನು ಶಿವಮೊಗ್ಗ ಜಿಲ್ಲೆಯ...

ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕತ್ತು ಹಿಸುಕಿ ಹಾಗೂ ಮೂಗು–ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಚಿಕ್ಕಮಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ...

Related Articles

ಹೆಚ್ಚುವರಿ ಟಿಕೆಟ್ ದರ ವಸೂಲಿ ವಿರುದ್ಧ ಪರಿಹಾರಕ್ಕೆ ಸೂಚನೆ

ಚಿಕ್ಕಮಗಳೂರು: ಪ್ರಯಾಣಿಕರಿಂದ ನಿಯಮಬಾಹಿರವಾಗಿ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ...

ಬಿಸಿಯೂಟ ಕಾರ್ಯಕರ್ತೆರ ವೇತನ ಬಿಡುಗಡೆಗೆ ಆಗ್ರಹಿಸಿ ಮನವಿ

ಚಿಕ್ಕಮಗಳೂರು: – ಬಿಸಿಯೂಟ ಕಾರ್ಯಕರ್ತೆಯರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳವ ನ್ನು ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು...

ಅನುಸೂಚಿತ ಜಾತಿ-ಬುಡಕಟ್ಟುಗಳ ಆಯೋಗದ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ

ಚಿಕ್ಕಮಗಳೂರು : ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ರಾಜ್ಯ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ...

ಎಸ್ಸಿ-ಎಸ್ಟಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ

ಚಿಕ್ಕಮಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ವಿಲೇವಾರಿಗೆ ಆದ್ಯತೆ...