ಚಿಕ್ಕಮಗಳೂರು: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಪ್ರಾಜೆಕ್ಟ್ ಪಂಚತಂತ್ರ ನಾಟಕ ಜನರ ಗಮನ ಸೆಳೆಯಿತು.
ಪಂಚತಂತ್ರದ ಪ್ರಾಣಿಗಳ ಕಥೆಗಳನ್ನು ಇಂದಿನ ಜಾಯಮಾನಕ್ಕೆ ಒಗ್ಗಿಸಿ ಮಾಡಿದ ರಂಗಪ್ರಯೋಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಅರುಣ್ ಲಾಲ್ ಅವರು ನಿರ್ದೇಶಿಸಿದ ನಾಟಕವನ್ನು ನಿರ್ದಿಗಂತ ತಂಡ ನಾಟಕ ಪ್ರಸ್ತುತ ಪಡಿಸಿತು.
ತೇಜಸ್ವಿ ಅವರ 88ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕರ್ವಾಲೊ ಕೃತಿ ಆಧರಿತ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಣೆ ಮಾಡಲಾಯಿತು.
ಕಲಾವಿದರಾದ ಹರ್ಷ ಕಾವೇರಿಪುರ (ಪ್ರಥಮ), ನಿತೇಶ್ (ದ್ವಿತೀಯ), ಮನೋಹರ ಟಿ.ಎನ್. (ತೃತೀಯ) ಮತ್ತು ಪೆಟ್ರಿಷಿಯಾ, ಪೃಥ್ವಿಕ್ ಹುಲ್ಲೇಮನೆ, ಭರತ್ ಶೇಡ್ತಾರ್, ಪ್ರಶಾಂತ್ ಕೆ.(ಪ್ರೋತ್ಸಾಹಕ) ಬಹುಮಾನ ಸ್ವೀಕರಿಸಿದರು.
ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ ಕ್ರಮವಾಗಿ ₹20 ಸಾವಿರ, ₹10 ಸಾವಿರ ಹಾಗೂ ಪ್ರಮಾಣ ಪತ್ರ, ತೃತೀಯ ಹಾಗೂ ಪ್ರೋತ್ಸಾಹಕ ಸ್ಥಾನಗಳಿಗೆ ₹5 ಸಾವಿರ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮವನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು.
ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಸಿ.ರಮೇಶ್, ಸದಸ್ಯರಾದ ರಾಘವೇಂದ್ರ, ರವೀಶ್ ಬಸಪ್ಪ, ರುದ್ರಸ್ವಾಮಿ, ಕಲಾವಿದರಾದ ವಿಶ್ವಕರ್ಮ ಆಚಾರ್ಯ, ನಾಟಕದ ನಿರ್ದೇಶಕ ಅರುಣ್ ಲಾಲ್, ಸಂಯೋಜಕ ಅಮಿತ್ ರೆಡ್ಡಿ ಇದ್ದರು.
Project Panchatantra drama that caught people’s attention
Leave a comment