Home namma chikmagalur chikamagalur ಇಂದಿನಿಂದ ಜಿಲ್ಲೆಯಲ್ಲಿ ಸಂಘಟನ್ ಸೃಜನ ಅಭಿಯಾನ
chikamagalurHomeLatest Newsnamma chikmagalur

ಇಂದಿನಿಂದ ಜಿಲ್ಲೆಯಲ್ಲಿ ಸಂಘಟನ್ ಸೃಜನ ಅಭಿಯಾನ

Share
Share

ಚಿಕ್ಕಮಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ತೀರ್ಮಾನದಂತೆ ದೇಶದಾದ್ಯಂತ ‘ಸಂಘಟನ್ ಸೃಜನ ಅಭಿಯಾನ’ ನಡೆಸುತ್ತಿದ್ದು, ಜಿಲ್ಲೆಯಲ್ಲೂ ಇಂದಿನಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಮಾಜಿ ಕಾರ್ಯದರ್ಶಿ, ಗುಜರಾತ್ ಉಸ್ತುವಾರಿ ಬಿಶ್ವರಂಜನ್ ಮೊಹಾಂತಿ ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಜಿಲ್ಲೆಯ 12 ಬ್ಲಾಕ್‌ಗಳಿಗೆ ತೆರಳಿ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು, ನಾಮನಿರ್ದೇಶಿತರು, ಹಿರಿಯ ಮುಖಂಡರನ್ನು ಜುಲೈ 26ರಿಂದ ಅ.1ರವರೆಗೆ ಭೇಟಿಯಾಗುತ್ತಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅಪೇಕ್ಷೆಯಂತೆ ಪಕ್ಷದ ತತ್ವ-ಸಿದ್ಧಾಂತದಡಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುವುದು. ಪಕ್ಷಕ್ಕೆ ಹೊಸ ಚೈತನ್ಯ ನೀಡಲು ಸಂಘಟನ್ ಸೃಜನ್ ಅಭಿಯಾನ ಸಹಕಾರಿಯಾಗಲಿದೆ. ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಅಧಿವೇಶದಲ್ಲಿ ಅಭಿಯಾನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವವರು ಅರ್ಜಿಯನ್ನು ಪಡೆದು ಭರ್ತಿಮಾಡಬೇಕು. ಈಗಾಗಲೇ ಪಕ್ಷಕ್ಕೆ ನಿರ್ವಹಿಸಿರುವ ಕೆಲಸಗಳನ್ನು ನಮೂದಿಸಬೇಕೆಂದು ತಿಳಿಸಿ, ಈ ಜಿಲ್ಲೆಯಲ್ಲಿ ಸಂಘಟನ್ ಸೃಜನ್ ಅಭಿಯಾನದ ವರದಿಯನ್ನು ಪಕ್ಷದ ವರಿಷ್ಠರಿಗೆ ತಲುಪಿಸಲಾಗುವುದು. ಪಕ್ಷದ ಇತರ ವಿಷಯಗಳ ಕುರಿತು ಚರ್ಚಿಸುವುದಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂಶುಮಂತ್ ಮಾತನಾಡಿ, ಜುಲೈ 26ರಂದು ಎಐಸಿಸಿ ಮಾಜಿ ಕಾರ್ಯದರ್ಶಿ ಬಿಶ್ವರಂಜನ್ ಮೊಹಾಂತಿ ಅವರು ಮೂಡಿಗೆರೆ, ಅಲ್ಲೂರು, ಕಳಸ ಬ್ಲಾಕ್ ಸಮಿತಿಗೆ ಭೇಟಿ ನೀಡುವರು. 27ರಂದು ಶೃಂಗೇರಿ, ಕೊಪ್ಪ, ನರಸಿಂಹರಾಜಪುರಕ್ಕೆ 28ಕ್ಕೆ ತರೀಕೆರೆ, ಅಜ್ಜಂಪುರಕ್ಕೆ 29ಕ್ಕೆ ಕಡೂರು, ಬೀರೂರು ಬ್ಲಾಕ್‌ಗೆ 30ರಂದು ಚಿಕ್ಕಮಗಳೂರು, ಸಖರಾಯಪಟ್ಟಣಕ್ಕೆ 31ರಂದು, ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿಗಳನ್ನು ಪ್ರತ್ಯೇಕವಾಗಿ ಭೇಟಿಮಾಡಲಿದ್ದಾರೆ. ಆ.1ರಂದು ಸಮುದಾಯ ಮುಖಂಡರ ಸಭೆ ನಡೆಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಮೋಹನ್, ಬಿ.ಎಂ.ಸಂದೀಪ, ರೂಬೆನ್ ಮೊಸಸ್, ಶಿವಾನಂದಸ್ವಾಮಿ, ಮಲ್ಲೇಶ್, ಎಚ್.ಪಿ. ಮಂಜೇಗೌಡ, ಶಾಸಕರಾದ ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ, ಟಿ.ಡಿ.ರಾಜೇಗೌಡ ಭಾಗವಹಿಸಿದ್ದರು.

Organization creation campaign in the district from today

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನ ಐದು ಶಾಸಕರಿದ್ದು ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ ಹೀಗಾಗಿ ಮಂತ್ರಿ...

ಪಂಚಾಯತ್‌ರಾಜ್‌ನಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ

ಚಿಕ್ಕಮಗಳೂರು:  ಭಾರತ ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದೆ. ಆದರೆ, ಇತ್ತೀಚೆಗೆ ಪಂಚಾಯತ್‌ರಾಜ್ ವ್ಯವಸ್ಥೆಯ ಅಧಿಕಾರ ಮೊಟುಕುಗೊಳಿಸುತ್ತಿರುವುದು ವಿಷಾದನೀಯ ಎಂದು ಎಂದು ಕೇಂದ್ರ...

Related Articles

ಲಕ್ಯ ಕ್ರಾಸ್ ಬಳಿ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಚಾಲಕ ಸಾವು

ಚಿಕ್ಕಮಗಳೂರು:  ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಯ ಕ್ರಾಸ್ ಬಳಿ ಸೋಮವಾರ ಸಂಭವಿಸಿದ ಭೀಕರ...

ಶಾಹುರವರು ಜಾತೀಯತೆ ತೊಲಗಿಸಲು ಶ್ರಮಿಸಿದ ಮಾನವತಾವಧಿ

ಚಿಕ್ಕಮಗಳೂರು: ವೈಚಾರಿಕತೆಯ ಭದ್ರ ಬುನಾದಿಯನ್ನು ಸಾಮಾಜಿಕ ಪರಿವರ್ತನ ಚಳ ವಳಿಯ ಸಂದರ್ಭದಲ್ಲಿ ರಾಜಪ್ರಭುತ್ವದಲ್ಲಿ ಶಾಹೂ ಮಹಾರಾಜರು...

ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ

ಚಿಕ್ಕಮಗಳೂರು: ೨೭ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರ ಜಿಲ್ಲಾ...

ಮಹಿಳೆಯರು ಧರಿಸುವ ‘ನೈಟಿ’ ಧರಸಿ ದೇವಸ್ಥಾನದಲ್ಲಿ ಕಳ್ಳತನ

ಚಿಕ್ಕಮಗಳೂರು:  ದೇವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಹೊಸದೇನಲ್ಲ. ಆದರೆ, ಪತ್ತೆಯಾಗಬಾರದು ಎಂದು ಕಳ್ಳರು ಹೂಡುವ ತಂತ್ರಗಳು ಮಾತ್ರ...