ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ತಣಿಗೆಬೈಲು ವಲಯದ, ವಿರೂಪಾಕ್ಷ ಖಾನ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳು ಆಗಲು ರಾತ್ರಿ ಎನ್ನದೆ ಮದ್ಯಪಾನ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬಂದಿದೆ , ಚೆಕ್ ಪೋಸ್ಟ್ ಕಚೇರಿ,ಕ್ಯಾಂಪ್ ತುಂಬೆಯೆಲ್ಲ ಮದ್ಯ ಸೇವಿಸಿದ ರಾಶಿ, ರಾಶಿ ಹೆಂಡದ ಬಾಟಲಿಗಳು ಕಂಡುಬಂದಿವೆ.
ಈ ಚೆಕ್ ಪೋಸ್ಟ್ ನಲ್ಲಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಇಲ್ಲಿಂದ ಕೆಮ್ಮಣ್ಣುಗುಂಡಿ ತಲುಪಲು ಬರುವ ಪ್ರವಾಸಿಗರಿಗೆ, ವಾಹನಗಳಿಗೆ ಇಂತಿಷ್ಟು ದುಡ್ಡು ಕಟ್ಟಿಸಿಕೊಂಡು ಪಾಸ್ ನೀಡುತ್ತಾರೆ,ಸಂಜೆ 6 ರಿಂದ ಬೆಳಿಗ್ಗೆ 6 ವರೆಗೆ ಈ ರಸ್ತೆ ರಾತ್ರಿ ಸಂಚಾರ ನಿಷೇಧವಿದೆ,ರಾತ್ರಿವೇಳೆ ಇಲ್ಲಿ ಭಾರಿ ಮದ್ಯ ಸಮಾರಾಧನೆ ,ಪಾರ್ಟಿ,ಮೋಜು, ಮಸ್ತಿ ಮಿತಿಮೀರಿದೆ.ಇಲ್ಲಿನ ಅದಿಕಾರಿಗಳು, ದಿನ ಗೂಲಿ ಸಿಬ್ಬಂದಿಗಳು ಕಂಠ ಪೂರ್ತಿ ಕುಡಿದು ಮತ್ತಿನಲ್ಲಿರುತ್ತಾರೆ .
ಇತ್ತ ಸರ್ಕಾರಿ ಗಾರ್ಡ್, ವನಪಾಲಕ,ವಲಯ ಅರಣ್ಯಾಧಿಕಾರಿಗಳ ಶಾಮೀಲಾಗಿದ್ದಾರೆ ಹಾಗಾಗಿ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿ ಮದ್ಯಪಾನ ಮಾಡುವ ಅಡ್ಡೆಯಾಗಿ ಕ್ಯಾಂಪ್, ಚೆಕ್ ಪೋಸ್ಟ್ ಕಚೇರಿ ಮಾರ್ಪಟ್ಟಿದೆ.ಸಿಬ್ಬಂದಿಗಳ ಜೊತೆಗೆ ಇಲ್ಲಿ ಕೆಲವು ರಾಜಕಾರಣಿಗಳ ಚೀಲಗಳು ಕೂಡ ಬಂದು ಪಾರ್ಟಿ ಮಾಡುವುದು ಮಾಮೂಲು ಆಗಿದೆ.ರಾಜಕಾರಣಿಗಳ ಕಡೆಯವರಿಗೆ ಸಿಬ್ಬಂದಿಗಳೇ ಮದ್ಯ ತಂದುಕೊಟ್ಟು ಇಲ್ಲಿ ಪಾರ್ಟಿ ಮಾಡಲಾಗುತ್ತದೆ.
ಚೆಕ್ ಪೋಸ್ಟ್ ಕಚೇರಿ ಗಬ್ಬು ನಾರುತಿದ್ದು,ಎಲ್ಲಿ ನೋಡಿದರೂ ಒಳಗಡೆ ಮದ್ಯ ಬಾಟಲಿಗಳು,ಟೆಟ್ರಾ ಪ್ಯಾಕ್ಗಳು ತುಂಬಿ ಹೋಗಿವೆ. ಕೋವಿಡ್ ಸಂದರ್ಭದಲ್ಲಿ ಈ ವಲಯದಲ್ಲಿ ಉನ್ನತ ಅಧಿಕಾರಿಗಳು ಪಾರ್ಟಿ ಮೋಜು ಮಸ್ತಿ ಮಾಡಲು ಹೋಗಿ ಗ್ರಾಮಸ್ಥರಿಂದ ಛೀಮಾರಿ ಹಾಕಿಸಿಕೊಂಡಿದ್ದು ಇದೆ,ಈಗ ಇಲ್ಲಿನ ಸಿಬ್ಬಂದಿಗಳೇ ಚೆಕ್ ಪೋಸ್ಟ್ ಕಚೇರಿಯನ್ನು ಹಾಗೂ ಇಲ್ಲಿರುವ ಬೇಟೆ ನಿಗ್ರಹ ಶಿಬಿರವನ್ನು ಮದ್ಯ ಸೇವನೆಗೆ ಅಡ್ಡೆಗಳಾಗಿ ಮಾಡಿದ್ದಾರೆ.
ಇಲ್ಲಿ ಶಿಕಾರಿ ಹೆಚ್ಚಿದ್ದು ಅದರ ಕಡಿವಾಣಕ್ಕೆ ಚೆಕ್ ಪೋಸ್ಟ್ ಮತ್ತು ಬೇಟೆ ನಿಗ್ರಹ ಶಿಬಿರವನ್ನು ಸ್ಥಾಪಿಸಲಾಯಿತು 2017ರಲ್ಲಿ,ಆದರೆ ಇದು ಸಮಂಜಸವಾಗಿ ಕಾರ್ಯ ಮಾಡದೆ ಸಿಬ್ಬಂದಿಗಳ ಪಾರ್ಟಿ ತಾಣವಾಗಿ ಪರಿವರ್ತನೆ ಆಗಿದ್ದು ನಿಜಕ್ಕೂ ಬೇಸರದ ಸಂಗತಿ.ಭದ್ರಾ ಹುಲಿ ಸಂರಕ್ಷಿತ ವಿಭಾಗದ ಹಿರಿಯ ಅಧಿಕಾರಿಗಳು ಇತ್ತ ಒಂದು ದಿನವೂ ಬರೆದೆ ಇರುವುದು ಹಾಗೂ ವಲಯ ಅರಣ್ಯಾಧಿಕಾರಿ ಶಾಮೀಲಾಗಿ ಹಿಡಿತ ತಪ್ಪಿರುವುದು ಇದಕ್ಕೆ ಸಾಕ್ಷಿ.
ಈ ಕೂಡಲೇ ಮದ್ಯಪಾನ ನಿರತ ಅಧಿಕಾರಿ, ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಚೆಕ್ ಪೋಸ್ಟ್ ದಿನದ 24 ಗಂಟೆ ಕಾರ್ಯ ಮಾಡಬೇಕು,ಜೊತೆಗೆ ನಿರ್ಲಕ್ಷ ತೋರಿದ ಇಲ್ಲಿನ ವಲಯ ಅರಣ್ಯಾಧಿಕಾರಿಯನ್ನು ಅಮಾನತ್ತು ಮಾಡಬೇಕು,ಅಮೂಲ್ಯ ವನ್ಯ ಸಂಪತ್ತನ್ನು ಉಳಿಸಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
Bhadra tiger reserve staff enjoying drinking and partying
Leave a comment