Home namma chikmagalur chikamagalur ಜೀತ ಪದ್ಧತಿ ತಡೆಗಟ್ಟಲು ಮಾಧ್ಯಮಗಳು ಜೀತ ಪದ್ಧತಿ ವರದಿ ಪ್ರಕಟಿಸಬೇಕು
chikamagalurHomeLatest Newsnamma chikmagalur

ಜೀತ ಪದ್ಧತಿ ತಡೆಗಟ್ಟಲು ಮಾಧ್ಯಮಗಳು ಜೀತ ಪದ್ಧತಿ ವರದಿ ಪ್ರಕಟಿಸಬೇಕು

Share
Share

ಚಿಕ್ಕಮಗಳೂರು: ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಜೀತ ಪದ್ಧತಿಗೆ ಒಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾದುದು. ಆ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ವಿಕಸನ ಸಂಸ್ಥೆ ಕಾರ್ಯನಿರ್ವಾಹಣಾಧಿಕಾರಿ ವಿಭಾ ವರ್ಗಿಸ್ ಹೇಳಿದರು.

ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ನಗರದ ಪ್ರೆಸ್ ಕ್ಲಬ್‌ನಲ್ಲಿ ವಿಸಕನ ಸಂಸ್ಥೆ ವತಿಯಿಂದ ಪತ್ರಕರ್ತರಿಗಾಗಿ ಗುರುವಾರ ಆಯೋಜಿಸಿದ್ದ ‘ಜೀತ ಕಾರ್ಮಿಕ ಮತ್ತು ಮಾನವ ಕಳ್ಳಸಾಗಾಣಿಕೆ’ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜೀತ ಕಾರ್ಮಿಕ ಪದ್ಧತಿ ಅಸ್ತಿತ್ವಕ್ಕೆ ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ ಕಾರಣ. ಸಮಾಜದ ಕೆಲವು ಸಂಪ್ರದಾಯ, ಜಮೀನ್ದಾರಿ ಪದ್ಧತಿಯಿಂದ ಭೂಮಿ ಕಳೆದುಕೊಂಡು ಜೀತ ಪದ್ಧತಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಈ ಪದ್ಧತಿ ತೊಗಲಿಸಲು 1976ರಲ್ಲಿ ಜೀತ ಪದ್ಧತಿ ರದ್ದತಿ ಕಾಯ್ದೆ ಜಾರಿಗೆ ಬಂದಿತು ಎಂದರು.

ಜೀತ ಕಾರ್ಮಿಕ ಪದ್ಧತಿ ಹೆಚ್ಚಾಗಿ ಮೀನು ಕೃಷಿ, ಇಟ್ಟಿಗೆ ಗೂಡು, ಅಕ್ಕಿ ಗಿರಣಿ, ತಂಬಾಕು ತಯಾರಿಕೆ ಘಟಕಗಳು, ಕಲ್ಲು ಕ್ವಾರಿಗಳು, ರೇಷ್ಮೆ ಕೃಷಿ ಘಟಕ, ರೆಸಾರ್ಟ್‌ಗಳು, ಮನೆ ಕೆಲಸ, ವ್ಯವಸಾಯ, ಕಾಫಿ ತೋಟಗಳು, ಶುಂಠಿ ಕೃಷಿ ಮಾಡುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಬಹುದು ಎಂದು ತಿಳಿಸಿದರು.

ಜೀತ ಪದ್ಧತಿ ತಡೆಗಟ್ಟಲು ಮಾಧ್ಯಮಗಳು ಜೀತ ಪದ್ಧತಿ ಕುರಿತಂತೆ ಜಾಗೃತಿ ವರದಿ ಪ್ರಕಟಿಸಬೇಕು. ಸಮಸ್ಯೆಗಳನ್ನು ಬಹಿರಂಗಪಡಿಸಬೇಕು. ಸರ್ಕಾರ ತನ್ನ ಜವಾಬ್ದಾರಿ ಖಾತರಿಪಡಿಸಬೇಕು ಎಂದು ಹೇಳಿದರು.
ಜೀತ ಪದ್ಧತಿ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಬೇಕು. ಜಿಲ್ಲಾ ಹಾಗೂ ಉಪವಿಭಾಗೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಜಾಗೃತಿ ಸಮಿತಿಗಳು ಜೀತ ಪದ್ಧತಿ ತಡೆಗಟ್ಟುವಿಕೆ ಮತ್ತು ಜೀತದಾಳುಗಳ ಪುನರ್ವಸತಿ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜೀತ ಪದ್ಧತಿ ತಡೆಗಟ್ಟುವ ಜಾಗೃತಿ ಅಭಿಯಾನ ನಡೆಯಬೇಕು ಎಂದು ತಿಳಿಸಿದರು.

ಜೀತ ಪದ್ಧತಿಯಿಂದ ಬಿಡುಗಡೆಯಾದ ಕುಟುಂಬ ಅಥವಾ ವ್ಯಕ್ತಿಗಳಿಗೆ ಸಂಪೂರ್ಣ ರಕ್ಷಣೆ ನೀಡಬೇಕು. ಸರ್ಕಾರದಿಂದ ದೊರೆಯುವ ಮೂಲ ಸೌಕರ್ಯಗಳಾದ ಆಧಾರ್ ಕಾರ್ಡ್, ಗುರುತಿನ ಚೀಟಿ, ಮನೆ, ಉದ್ಯೋಗಾವಕಾಶ ಮತ್ತು ಜೀವ ವಿಮೆಯನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಹೇಳಿದರು.

ಮೂಡಿಗೆರೆ ತಾಲ್ಲೂಕಿನಲ್ಲಿ 18 ಪ್ರಕರಣ ಹಾಗೂ ತರೀಕೆರೆ ತಾಲ್ಲೂಕಿನಲ್ಲಿ 4 ಪ್ರಕಣಗಳು ದಾಖಲಾಗಿ ಜೀತ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಕಸನ ಸಂಸ್ಥೆ ನಿರ್ದೇಶಕ ವರ್ಗೀಸ್, ಹೃದಯರಾಜ್, ನವೀನ್, ಸಂತ್ರಸ್ತರಾದ ತಾಯಮ್ಮ, ಮೂರ್ತಿ ಭಾಗವಹಿಸಿದ್ದರು.

To prevent slavery media should publish slavery reports

Share

Leave a comment

Leave a Reply

Your email address will not be published. Required fields are marked *

Don't Miss

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ ಬಿ.ಎಸ್. ಅವರ ನೇತೃತ್ವದಲ್ಲಿ ಜುಲೈ 5, 2026ರಂದು ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಆರ್.ಸಿ....

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ ಫಾಲ್ಸ್‌ (Hebbe Falls) ಧುಮ್ಮಿಕ್ಕಿ ಹರಿಯುತ್ತಿದೆ. ಹೆಬ್ಬೆ ಜಲಪಾತದಲ್ಲಿ ಸುಮಾರು 100 ಅಡಿಗೂ ಎತ್ತರದಿಂದ...

Related Articles

ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿ ಡಾ.ದೇವರಾಜ್

ಚಿಕ್ಕಮಗಳೂರು; ಮಲ್ಲೇಗೌಡ ಜನರಲ್ ಆಸ್ಪತ್ರೆಯ ಸರ್ಜನ್ ಆಗಿ ಡಾ.ಟಿ.ಎಂ.ದೇವರಾಜ್ ನೇಮಕವಾಗಿದ್ದು ಇಂದು ಮಧ್ಯಾಹ್ನ. ಅಧಿಕಾರ ಸ್ಪೀಕಾರ...

ಭದ್ರಾ ಹುಲಿ ಸಂರಕ್ಷಿತ ಸಿಬ್ಬಂದಿಗಳಿಂದಲೇ ಮದ್ಯಪಾನ ಮೋಜು ಮಸ್ತಿ

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ತಣಿಗೆಬೈಲು ವಲಯದ, ವಿರೂಪಾಕ್ಷ ಖಾನ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳು...

ತೋಟಕ್ಕೆ ನೀರು ಬಿಡಲು ಹೋದ ಯುವತಿ ಅಪಹರಣ

ಅಜ್ಜಂಪುರ : ಯುವತಿಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುವ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ...

ಹಣದಾಸೆಗೆ ಮಗಳನ್ನೇ ವಿದೇಶದಲ್ಲಿ ಮಾರಿದ ಪಾಲಕರು

ಚಿಕ್ಕಮಗಳೂರು:  ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪಾಲಕರು ವಿದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿರುವ ಅಮಾನುಷ...