ಕಡೂರು: ತಾಲ್ಲೂಕಿನ ಮಲ್ಲಾಘಟ್ಟ ಗ್ರಾಮದಿಂದ ಸಿಂಗಟಗೆರೆಗೆ ಹೋಗುವ ರಸ್ತೆಯಲ್ಲಿ ಭಾನುವಾರ ಮುಂಜಾನೆ ಹಂದಿ ಬೇಟೆಗೆ ಬಂದಿದ್ದ ತಂಡವನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಕಡೂರು ಸರ್ಕಲ್ ಇನ್ಸ್ಪೆಕ್ಟರ್ ಎಂ.ರಫೀಕ್ ಅವರು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ವೇಳೆ ಬೊಲೆರೋ ಪಿಕಪ್ ವಾಹನವನ್ನು ತಡೆದು ತಪಾಸಣೆ ನಡೆಸಿದಾ ಈ ವೇಳೆ ವಾಹನದಲ್ಲಿ ಮೂರು ಸಿಂಗಲ್ ಬ್ಯಾರಲ್ ಬಂದೂಕು ಮತ್ತು 25 ಜೀವಂತ ಗುಂಡುಗಳು ಪತ್ತೆಯಾಗಿವೆ.
ಈ ಕುರಿತು ವಿಚಾರಣೆ ನಡೆಸಿದಾಗ ಆರೋಪಿಗಳು ತಾವು ಹಂದಿ ಬೇಟೆಯಾಡಲು ಬಂದಿರುವುದಾಗಿ ಉತ್ತರಿಸಿದ್ದಾರೆ. ಶಸ್ತ್ರಾಸ್ತ್ರದ ಕುರಿತು ದಾಖಲೆ ಹಾಜರು ಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕು ಬಿದರಹಳ್ಳಿ ಗ್ರಾಮದ ಗಂಧನ್ ಜಿ.ಎಂ., ಗೌತಮ್ ಜಿ.ಎಂ., ಮೂಡಿಗೆರೆ ತಾಲ ಕುಂದೂರು ಗ್ರಾಮದ ಸಚಿನ್ ಎಸ್.ಎಂ., ಅಭಿಷೇಕ್ ಎಸ್.ಎಂ.,ಸಂಜೀವ್ಕುಮಾರ್, ನೂತನ ಡಿ.ಎಸ್. ಮತ್ತು ಯಗಟಿ ಹೋಬಳಿ ಮುಗಳಿಕಟ್ಟೆ ಗೇಟ್ನ ದೇವರಾಜ ಅವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿಂಗಟಗೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Pig hunting: 7 people arrested
Leave a comment