ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಹಂತ ಹಂತವಾ ಗಿ ಜಾರಿಗೊಳಿಸಿ ರೈತರು ಬದುಕು ಮತ್ತು ಭೂಮಿಯನ್ನೇ ಕಸಿದುಕೊಳ್ಳಲಿದೆ ಎಂದು ಸಾಮೂಹಿಕ ರಾಜ್ಯ ಅಧ್ಯಕ್ಷೀಯ ಮಂಡಳೀ ಸದಸ್ಯ ಹೊನ್ನೂರು ಪ್ರಕಾಶ್ ಎಚ್ಚರಿಸಿದರು.
ನಗರದ ಲಯನ್ಸ್ ಭವನದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ ರೈತರ ಬೆಳೆಗಳಿಗೆ ಸರ್ಕಾರಗಳು ವೈಜ್ಞಾನಿಕ ಬೆಲೆ ಘೋಷಿಸದಿರುವ ಪರಿಣಾಮ ದೇಶದಲ್ಲಿ ಪ್ರತಿ ಮೂ ರು ಗಂಟೆಗೊಮ್ಮೆ ಓರ್ವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಅಣ್ಣತಮ್ಮಂದಿರಂತೆ ಇರುವ ರೈತರು ಕಿತ್ತಾಟ, ಶಾಸಕರ ಪರ ಚಪ್ಪಾಳೆಗಳಲ್ಲಿ ತೊಡಗಿದರೆ, ಉದ್ಯಮಿಗಳು ರೈತರ ಭೂಮಿಯನ್ನು ಖರೀದಿಸಿ ಕೊಂಡು ರೈತರನ್ನೇ ಗುಲಾಮರಾಗಿಸುವುದು ಖಚಿತ ಎಂದು ಹೇಳಿದರು.
ರೈತ ಸಂಘಟನೆ ಮತ್ತು ಹೆಗಲ ಮೇಲಿರುವ ಹಸಿರು ಶಾಲು ರೈತರ ಧ್ವನಿ, ಪ್ರಾಮಾಣಿಕ ಕೆಲಸದ ಸಂಕೇ ತ. ಈ ಕ್ಷೇತ್ರದಲ್ಲಿರುವ ರೈತರು ವೈಯಕ್ತಿಕ ಸಂಪಾದನೆಗೆ ಆಸಕ್ತಿ ತೋರಬಾರದು. ಹಿಂದಿನ ರೈತ ಸಂಘಟನೆ ಗಳಲ್ಲಿ ರೈತರ ಒಳಿತು ಹಾಗೂ ಸಮಾಜಕ್ಕೆ ಪೂರಕವಾಗಿ ಸಾವಿರಾರು ಮಂದಿ ರೈತ ಮುಖಂಡರು ಪ್ರಾಣತ್ಯಾ ಗ ಮಾಡಿರುವುದು ಸ್ಮರಿಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಅಧಿಕೃತವಾಗಿ ಸುಮಾರು ೧೩೦ಕ್ಕೂ ಹೆಚ್ಚು ರೈತ ಸಂಘಗಳಿವೆ. ಈ ಸಂಘಟನೆಗಳು ಪದಾ ಧಿಕಾರಿಗಳ ತೀರ್ಮಾನವೇ ಅಂತಿಮವಾಗಿದೆ. ಆದರೆ ಸಾಮೂಹಿಕ ನಾಯಕತ್ವದ ಸಂಘಟನೆಯಲ್ಲಿ ಯಾವು ದೇ ಪದಾಧಿಕಾರಿಗಳಿಲ್ಲ. ಎಲ್ಲಾ ರೈತ ಕಾರ್ಯಕರ್ತರ ತೀರ್ಮಾನವೇ ಒಮ್ಮತದ ತೀರ್ಮಾನವಾಗಿದ್ದು, ರಾ ಜ್ಯದಲ್ಲಿ ಸುಮಾರು ೨೦ ಜಿಲ್ಲೆಗಳಲ್ಲಿ ಸಂಘನಾತ್ಮಕ ಶಕ್ತಿ ಹೊಂದಿದೆ ಎಂದು ತಿಳಿಸಿದರು.
ದೇಶ ಹಾಗೂ ರಾಜ್ಯದ ಸರ್ಕಾರಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೃಂದ ರೈತರ ಕೂಲಿ ಆಳುಗಳಾಗಿ ಕರ್ತವ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದ ಸಂಘಟನೆ ಕಾನೂನು ಕಲಿ ಸಲಿದೆ. ರೈತ ಮುಖಂಡರುಗಳು ವಿಷಯ ಹಾಗೂ ಸಮಸ್ಯೆಗಳೇ ಸಾಮೂಹಿಕವಾಗಿ ಸ್ಪಂದಿಸುವುದೇ ಈ ಸಂ ಘಟನೆಯ ಮೂಲಧ್ಯೇಯವಾಗಿದೆ ಎಂದರು.
ಪ್ರಸ್ತುತ ದೇಶದಲ್ಲಿ ವಿದ್ಯುತ್, ಬ್ಯಾಂಕ್ ಅರಣ್ಯ ಮತ್ತು ನದಿಗಳು ಖಾಸಗೀಕರಣಕ್ಕೆ ದೂಡುತ್ತಿದೆ. ಗ್ರಾಮೀ ಣ ರಸ್ತೆಗಳಿಗೂ ತೆರಿಗೆ ಕಟ್ಟುವ ಪದ್ಧತಿ ನಿರ್ಮಾಣವಾಗಿದೆ. ರಸಗೊಬ್ಬರ ಬೆಲೆ ಹೆಚ್ಚಳಗೊಂಡಿದೆ. ಅಂದು ಪೂರ್ವಿಕರು ಉಳಿಸಿಕೊಟ್ಟ ಭೂಮಿಯನ್ನು ಭವಿಷ್ಯದ ಮಕ್ಕಳಿಗೆ ಉಳಿಸಿಕೊಡುವುದು ರೈತರ ಮೂಲಹಕ್ಕಾ ಗಿದ್ದು ಇದಕ್ಕಾಗಿ ಚಳುವಳಿ ಅತ್ಯಗತ್ಯವಾಗಿದೆ ಎಂದು ಹೇಳಿದರು.
ರೈತರು ಒಂದು ಪಕ್ಷಕ್ಕೆ ಸೀಮಿತಗೊಳ್ಳಬಾರದು. ಮತದಾನವೇ ರೈತರಿಗೆ ದೊಡ್ಡ ಅಧಿಕಾರವಿದ್ದಂತೆ. ರಾ ಜ್ಯ ಹಾಗೂ ದೇಶದಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳುವ ಪಕ್ಷಕ್ಕೆ ರೈತ ಸಂಘ ವಿರೋಧ ಪಕ್ಷವಾಗಿಯೇ ಉಳಿಯ ಬೇಕು. ಜನಪ್ರತಿನಿಧಿಗಳು ರೈತರತ್ತ ಧಾವಿಸಿ ಸಮಸ್ಯೆ ಕೇಳಬೇಕು. ಆದರೆ ರೈತ ಮುಖಂಡರುಗಳೇ ಹಾರ ತೂ ರಾಯಿ ಮೂಲಕ ಜನಪ್ರತಿನಿಧಿಗಳತ್ತ ತೆರಳಿದರೆ ಘನತೆ ಕಳೆದುಕೊಳ್ಳಲಿದೆ ಎಂದರು.
ಭವಿಷ್ಯದಲ್ಲಿ ರೈತ ಸಮೂಹ ದೊಡ್ಡ ಗಂಡಾಂತರ ಎದುರಿಸುವ ಆತಂಕವಿದೆ. ದೇಶದ ಸರ್ಕಾರಿ ಕಚೇರಿ ಗಳು ಖಾಸಗೀಕರಣದತ್ತ ಸಾಗುತ್ತಿದೆ. ಮುಂದೆ ರೈತರಿಗೆ ಬ್ಯಾಂಕ್ನಲ್ಲಿ ಸಾಲಸೌಲಭ್ಯವಿಲ್ಲ. ಬೆಳೆದ ಬೆಳಗಳಿಗೂ ವೈಜ್ಞಾನಿಕ ಬೆಲೆಯಿಲ್ಲ. ನಾಲ್ಕು ಶತಮಾನಗಳಿಂದ ರೈತ ಚಳುವಳಿಗೆ ನಡೆಯುತ್ತಿದ್ದರೂ ಸಮಸ್ಯೆ ಬಗೆಹರಿಯು ತ್ತಿಲ್ಲ. ಹೀಗಾಗಿ ಪ್ರೊ.ನಂಜುಂಡಸ್ವಾಮಿ ನಿಲುವಿನೊಂದಿಗೆ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು
ರೈತರು ಉತ್ಪಾದಕ, ಗ್ರಾಹಕನ ಸ್ಥಾನ ಹೊಂದಿದ್ದಾನೆ. ವರ್ಷದ ಪರಿಶ್ರಮದ ಬೆಳೆಗಳನ್ನು ಕಂಪನಿಗಾಗಿ ಬೆಳೆಯುವ ಸ್ಥಿತಿಯಿದೆ. ಇಂದಿಗೂ ರೈತರಿಗೆ ಸಹಕಾರ ಸಂಘ, ಸ್ವಂತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಈ ವಿರುದ್ಧ ಶಾಸಕರು, ಸಚಿವರಿಗೆ ಪ್ರಶ್ನಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು. ರೈತಾಪಿ ವರ್ಗವು ಒಗ್ಗಟ್ಟು ಪ್ರದರ್ಶಿ ಸಿ ವಿರೋಧಿ ಕಾಯ್ದೆ ತಡೆಗಟ್ಟುವ ಶಕ್ತಿ ಸಂಘಟನೆಯಲ್ಲಿದೆ ಎಂದರು.
ಪ್ರಸ್ತುತ ಕಾಲಮಾನದಲ್ಲಿ ಪೆಟ್ರೋಲ್, ಡೀಸೆಲ್ ದರವು ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ಆದರೆ ರೈತರ ಬೆಳೆಗಳಿಗೆ ಬೆಲೆಯು ಕುಂಠಿತವಾಗುತ್ತಿದೆ. ಸರ್ಕಾರಗಳ ಕೈಗೊಂಬೆಗಳಾಗದೇ, ವಿದ್ಯುತ್, ರಸಗೊಬ್ಬರ ಸ್ವಂತ ಉತ್ಪಾದಿಸುವ ತಂತ್ರಗಾರಿಕೆ ಕಲಿಯಬೇಕು. ರೈತ ಚಳುವಳಿ ಜೊತೆಗೆ ಸ್ವಂತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳ ಬೇಕು. ಇಂದು ರಾಗಿಗೆ ಬೆಲೆಯಿಲ್ಲ. ರಾಗಿಮಾರ್ಟ್ ಬೆಲೆಯಿದ್ದು, ಇದನ್ನೇ ಸ್ವಂತ ಉದ್ಯಮವಾಗಿ ರೂಪಿಸಿಕೊ ಳ್ಳಬೇಕು ಎಂದರು.
ರೈತ ಸಂಘಟನೆಗಳು ಸರ್ಕಾರ ಅಥವಾ ಕಂಪನಿಗಳಿಂದ ಭಿನ್ನಾಭಿಪ್ರಾಯಕ್ಕೆ ಒಳಗಾಗುತ್ತಿಲ್ಲ. ಒಳಶತ್ರು, ಕುತಂತ್ರಿಗಳಿಂದ ಹಾಳಾಗುತ್ತಿದೆ. ಮತದಾನದ ವೇಳೆ ರೈತ ಸಹಕಾರಕ್ಕೆ ಬೆನ್ನೆಲುಬಾಗುವ ವ್ಯಕ್ತಿಗೆ ಮತದಾನ ಮಾಡಿ. ಹಣ ಅಥವಾ ಹೆಂಡಕ್ಕೆ ಮತವನ್ನು ಮಾರಿಕೊಳ್ಳಬೇಡಿ. ರೈತರ ಉತ್ಪಾದಿಸುವ ಬೆಳೆಗಳಿಂದ ಬೇರೆ ವ್ಯಕ್ತಿ ಶ್ರೀಮಂತನಾಗುವುದನ್ನು ತಪ್ಪಿಸಿ, ರೈತನೇ ಶ್ರೀಮಂತನಾಗಿಸುವ ಶಕ್ತಿ ರೂಪಿಸಿಕೊಳ್ಳಬೇಕು ಎಂದರು.
ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಮಂಜುಕಿರಣ್ ಮಾತನಾಡಿ ಪ್ರೊ.ನಂಜುಂಡಿಸ್ವಾಮಿ ನೇತೃತ್ವದ ರೈತ ಸಂಘ ಸಾಮೂಹಿಕ ನಾಯಕತ್ವಕ್ಕೆ ಹೆಚ್ಚು ಒತ್ತು ನೀಡಿತ್ತು. ರಾಜಕೀಯ ಪುಂಡಾರಿಗಳ ಹತ್ತಿರ ಕೈಚಾಚ ದೇ, ಸ್ವಾಭಿಮಾನದ ಹಕ್ಕುಗಳನ್ನು ಪಡೆದುಕೊಳ್ಳುವ ಅಭೂತಪೂರ್ವ ಸಿದ್ದಾಂತಗಳು ಪ್ರೊಪೆಸರ್ ಸಂಘಟನೆ ಯಲ್ಲಿ ಕಾಣಸಿಗಲಿದೆ ಎಂದರು.
ರೈತ ಸಂಘಟನೆಗಳಲ್ಲಿ ರೋಗಾಣು ಎಂಬ ವಿಷ ಬೀಜ ಬಿತ್ತದಂತೆ ಸಂಘಟನೆಗಳು ಕಾರ್ಯಪ್ರವೃತ್ತರಾ ಗಬೇಕು. ರಾಜಕಾರಣದಿಂದ ರೈತ ಸಂಘಟನೆ ವಿನಾಶ ಅಥವಾ ಛಿದ್ರಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇ ಕು. ಹೊಂದಾಣಿಕೆ ಬಲದಿಂದ ಮಾತ್ರ ರೈತನು ಸ್ವಾತಂತ್ರ್ಯ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂಬುದು ಪ್ರೊ. ನಂಜುಂಡಿಸ್ವಾಮಿಯ ನಿಲುವಾಗಿತ್ತು ಎಂದು ತಿಳಿಸಿದರು.
ಪ್ರಸ್ತುತ ರೈತರಿಗೆ ಪ್ರೊ.ನಂಜುಂಡಸ್ವಾಮಿ, ಬಸವಣ್ಣ, ಕುವೆಂಪು, ಅಂಬೇಡ್ಕರ್, ಕನಕದಾಸರ ಲಾಂಛನ ಬೇಕಾಗಿದೆ ಹೊರತು, ಮಹಾನೀಯರ ವಿಚಾರಧಾರೆಗಳು ಬೇಡವಾಗಿದೆ. ಈ ವ್ಯಕ್ತಿಗಳೆಲ್ಲಾ ಜಾತಿಬಿಟ್ಟು ಕಾ ಯಕ ಶ್ರೇಷ್ಟ ಎಂದವರು. ಆದರೆ ಸಮಾಜವು ಜಾತಿ ವಿಚಾರದಲ್ಲೇ ಮುನ್ನುಗ್ಗುತ್ತಿರುವುದು ವಿಷಾಧಕರ ಸಂಗ ತಿ ಎಂದು ಹೇಳಿದರು.
ಸಾಮೂಹಿಕ ನಾಯಕತ್ವ ರಾಜ್ಯ ಅಧ್ಯಕ್ಷೀಯ ಮಂಡಳಿ ಜಿಲ್ಲಾ ಘಟಕದ ಸದಸ್ಯ ಸುನೀಲ್ ಮಾತನಾಡಿ ದೇಶದ ಆಡಳಿತ, ಆಳುವ ವರ್ಗವು ರೈತರ ಆಯ್ಕೆಯಾಗಿರಬೇಕು. ಸೂಕ್ತ ರೀತಿಯಲ್ಲಿ ಜನಪ್ರತಿನಿಧಿಗಳು ಆಯ್ಕೆಗೊಳಿಸಿದರೆ ಚಳುವಳಿಯ ಅವಶ್ಯಕತೆಯೇ ಇರುವುದಿಲ್ಲ. ಆದರೆ ರೈತರ ಧ್ವನಿಗೆ ಸ್ಪಂದಿರುವಾಗ ಸಂ ವಿಧಾನ ಹಕ್ಕಿನಡಿ ರೈತ ಸಂಘ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದರು.
ಸಮರ್ಪಕ ಬೆಳೆಗಳನ್ನು ಬೆಳೆಯಲು ರೈತರು ಇಂದಿಗೂ ಬ್ಯಾಂಕ್ನಲ್ಲಿ ಸಾಲಕ್ಕೆ ಕೈಚಾಚುವುದು ತಪ್ಪಿಲ್ಲ. ಜನಪ್ರತಿನಿಧಿಗಳು, ಸರ್ಕಾರವು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ರೈತರು ವೈಯಕ್ತಿಕ ದ್ವೇಷ, ಕಿತ್ತಾಟ ಬ ದಿಗಿರಿಸಿ, ಒಂದಾದರೆ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಬಹುದು. ಅಲ್ಲದೇ ರೈತ ಹೋರಾಟವು ಭೂ ಹೀನಾ, ಭೂಕಬಳಿಕೆ ವಿರುದ್ಧ ಅನೇಕ ಕಡೆಗಳಲ್ಲಿ ಹೋರಾಡಿ ಜಯತಂದುಕೊಟ್ಟಿದೆ ಎಂದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ನೀರಾವರಿ ಯೋಜನೆ, ಕರಗಡ ಏತ ನೀರಾವರಿ, ಮಳಲೂರು ಏತ ನೀರಾವರಿ ಯೋಜನೆಗಳು ವಿಫಲತೆ ಹೊಂದಿವೆ. ಕೊಟ್ಟಿಗಟ್ಟಲೇ ಹಣ ಹೂಡಿದರೂ ಕಾಮಗಾರಿ ಪೂರ್ಣ ಗೊಳ್ಳದಿರುವುದು ದುರ್ದೈವ ಅಥವಾ ರಾಜಕೀಯ ಹಿಚ್ಚಾಶಕ್ತಿ ಕೊರತೆಯೇ ಎಂಬುದು ತಿಳಿಯದಂತಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕ, ಲಯನ್ಸ್ ಕ್ಲಬ್ ಹಾಗೂ ಹೋಲಿಕ್ರಾಸ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ಹಿರಿಯ ಮುಖಂಡ ಕೆ.ಕೆ.ಕೃಷ್ಣೇಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ರೈತ ಸಂಘ ಮಂಡಳಿ ಹಾಸನದ ಸದಸ್ಯ ಕಣಗಾಲ್ಮೂರ್ತಿ, ಸ್ವಾಮಿಗೌಡ, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಕರವೇ ಜಿಲ್ಲಾಧ್ಯಕ್ಷ ಕೆಂಫನಹ ಳ್ಳಿ ಅಶೋಕ್, ಮುಖಂಡರುಗಳಾದ ವಿಜಯ್ಕುಮಾರ್, ಹೊನ್ನೇಶ್ ಇದ್ದರು.
Farmers who depend on agriculture show solidarity
Leave a comment