Home namma chikmagalur chikamagalur ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚನೆ
chikamagalurCrime NewsHomeLatest Newsnamma chikmagalur

ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚನೆ

Share
Share

ನರಸಿಂಹರಾಜಪುರ: ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ ಆರೋಪದ ಮೇಲೆ ಡಿಜಿಟಲ್ ಸಂಸ್ಥೆ ಮತ್ತು ಗುತ್ತಿಗೆದಾರನ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ನರಸಿಂಹರಾಜಪುರ ಉಪವಿಭಾಗದ ವ್ಯಾಪ್ತಿಯಲ್ಲಿ ಜೆಜೆಎಂ ಹಾಗೂ ಟಾಸ್ಕ್‌ಪೋರ್ಸ್ ಯೋಜನೆಯಡಿ ಕೊಳವೆಬಾವಿ ಕಾಮಗಾರಿ ನಿರ್ವಹಣೆ ಮಾಡಲು ಕರಾರು ಪತ್ರದಲ್ಲಿ ಒಪ್ಪಂದ ನಡೆದಿತ್ತು. ಗುತ್ತಿಗೆದಾರರು ಮತ್ತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಡುವೆ ಒಪ್ಪಂದ ಏರ್ಪಟ್ಟಿತ್ತು.

2026ರ ಮಾರ್ಚ್‌ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್, ಗುತ್ತಿಗೆದಾರರು ಕೊರೆದಿರುವ ಕೊಳವೆಬಾವಿಗಳಿಗೆ ನಕಲಿ ಛಾಪಾ ಕಾಗದಗಳನ್ನು ನೀಡಿ ಕರಾರು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಬಳಿಕ ಎಂಜಿನಿಯರ್‌ಗಳು ಪರಿಶೀಲಿಸಿದ್ದು, 14 ಛಾಪಾ ಕಾಗದಗಳು ಪುನರಾವರ್ತನೆ ಆಗಿರುವುದು ಕಂಡುಬಂದಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುನಿಲ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.

ಕರಾರು ಪತ್ರಗಳನ್ನು ನೀಡಿರುವ ಆಯಿರಾ ಡಿಜಿಟಲ್ ಸಂಸ್ಥೆ ಮತ್ತು ಕರಾರು ಮಾಡಿಕೊಂಡಿರುವ ಎಸ್‌ಕೆಪಿ ಕನ್‌ಸ್ಟ್ರಕ್ಷನ್ ಆ್ಯಂಡ್ ಬೂರ್‌ವೆಲ್ ಗುತ್ತಿಗೆದಾರರ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಕೆಲ ಕಾಗದಗಳು 6 ಬಾರಿ ಪುನರಾವರ್ತನೆ ಆಗಿವೆ. ಕೆಲವು 2 ಬಾರಿ ಪುನರಾವರ್ತನೆ ಆಗಿವೆ. ಒಟ್ಟು 14 ನಕಲಿ ಛಾಪಾ ಕಾಗದಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ದೂರಿದ್ದಾರೆ.

Cheating the government exchequer by creating a fake print

Share

Leave a comment

Leave a Reply

Your email address will not be published. Required fields are marked *

Don't Miss

ನೀಟ್ ವಿದ್ಯಾರ್ಥಿಗಳ ಹಲ್ಲೆ ಖಂಡಿಸಿ ಸಿಪಿಐನಿಂದ ಪ್ರತಿಭಟನೆ

ಚಿಕ್ಕಮಗಳೂರು:  ನೀಟ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಸಿಪಿಐ ತಾಲ್ಲೂಕು ಘಟಕದಿಂದ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತ ದಲ್ಲಿ ಮುಖಂಡರುಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ...

ಮಳೆಗಾಗಿ ಅಯ್ಯನಕೆರೆ, ಮದಗದಕೆರೆ ತಪ್ಪಲಿನಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಆತಂಕಗೊಂಡಿರುವ ಕಡೂರು ತಾಲೂಕಿನ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಗ್ರಾಮಸ್ಥರು ಉತ್ತಮ ಮಳೆಯಾಗಿ ಕೆರೆಗಳು ತುಂಬಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಸುಮಾರು 1,300 ಹೆಕ್ಟೇರ್...

Related Articles

ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ

ಚಿಕ್ಕಮಗಳೂರು: ಸಮಾನತೆಯ ಆಶಯ ದೊಂದಿಗೆ ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ...

ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ಶೃಂಗೇರಿ : ತಾಲೂಕಿನ ನೆಮ್ಮಾರ್ ಸರ್ಕಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ...

ಶಂಕರ ಭಾರತಿ ಗೋಶಾಲೆಗೆ ₹10 ಲಕ್ಷ ವೆಚ್ಚದ ನೂತನ ಗೋಶೆಡ್ ನಿರ್ಮಾಣ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸ್ಟೇಟ್...

ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ...