Home namma chikmagalur chikamagalur ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ
chikamagalurHomeLatest Newsnamma chikmagalur

ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

Share
Share

ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಬೇಲೂರು ರಸ್ತೆ ಸಮೀಪ ಮುಖಂಡರುಗಳು ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ|| ಕೆ.ಸುಂದರಗೌಡ ಕರ್ನಾಟಕ ರಾಜ್ಯ ಶ್ರೀಗಂಧದ ಬೀಡಾಗಿತ್ತು. ಯಥೆಚ್ಚವಾಗಿ ಬೆಳೆಯುತ್ತಿದ್ದ ಶ್ರೀಗಂಧವು ಇಂದು ಮರವಿಲ್ಲದೇ ಬರಡು ಭೂಮಿಯಾಗುತ್ತಿದೆ. ರೈತರು ಜೀವನಕ್ಕೆ ಆಸರೆಯಾಗಿ ಬೆಳೆದಿರುವ ಶ್ರೀಗಂಧ ಮರವನ್ನು ಕಳ್ಳರ ಹಾವಳಿಯಿ ಂದ ನಲುವಂತಾಗುತ್ತಿದೆ ಎಂದರು.

ಕೃಷಿ ಚಟುವಟಿಕೆ ಜೊತೆಗೆ ರೈತರು ಉಪ ಬೆಳೆಯಾಗಿ ಶ್ರೀಗಂಧ ಬೆಳೆಯುತ್ತಿದ್ದರು. ಅನೇಕ ವರ್ಷಗಳಿ ಂದ ಪೋಷಿಸಿದ ಮರವನ್ನು ರಾತ್ರೋರಾತ್ರಿ ಕಡಿದು ಸಾಗಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಅರ ಣ್ಯ ಇಲಾಖೆ ರೈತರ ಬೆಳೆದಿರುವ ಬೆಳೆಗೆ ರಕ್ಷಣೆ ಒದಗಿಸದಿದ್ದಲ್ಲಿ ಮುಂದೆ ಶ್ರೀಗಂಧ ಮರವು ನಶಿಸುವ ಕಾಲ ಸನ್ನಿಹಿತವಾಗಲಿದೆ ಎಂದು ತಿಳಿಸಿದರು.

ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಶ್ರೀಗಂಧದ ಕೃಷ್ಣೇಗೌಡ ಮಾತನಾಡಿ ರೈತರು ಮತ್ತು ಬೆಳೆಗಾರರಿಗೆ ಬದುಕಿಗೆ ಆಸರೆಯಾದ ಶ್ರೀಗಂಧ ಬೆಳೆ ರಕ್ಷಣೆಗೆ ಅನೇಕ ವರ್ಷಗಳಿಂದ ಅಧಿಕಾರಿಗಳಿಗೆ ಮನ ವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಪೂರ್ವಿಕರು ಬಳುವಳಿಯಾಗಿ ಉಳಿಸಿಕೊಟ್ಟ ಶ್ರೀಗಂಧ ಬೆಳೆ ಇಂದು ಕದೀಮರ ಪಾಲಾಗುತ್ತಿದೆ ಎಂದು ಹೇಳಿದರು.

ಕಾಡಿನ ವನ್ಯಮೃಗಗಳು ನಾಡಿನತ್ತ ಧಾವಿಸಲು ಅರಣ್ಯದಲ್ಲಿ ಆಹಾರದ ಕೊರತೆ ಹಾಗೂ ಕಾಡುಪ್ರಾಣಿ ಗಳ ಹತ್ಯೆಯೇ ನೇರ ಕಾರಣವಾಗಿದೆ. ಮಾನವ ದುರಾಸೆಗೆ ಪಕೃತಿಯನ್ನು ಹಾಳು ಮಾಡುವುದು ಸರಿಯಲ್ಲ. ಇತ್ತೀಚೆಗೆ ಕಾಡಾನೆಗಳ ಹಿಂಡು ನಗರ ಸಮೀಪದಲ್ಲೇ ಸಂಚರಿಸಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದು ಈ ಬಗ್ಗೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದರು.

ಶ್ರೀಗಂಧ ಬೆಳೆಗಾರ ವಿಶುಕುಮಾರ್ ಮಾತನಾಡಿ ರೈತರು ಶ್ರೀಗಂಧ ಮರಗಳ ಮಾರಾಟದಿಂದ ಸರ್ಕಾ ರಕ್ಕೆ ಶೇ.೫೫ ರಷ್ಟು ತೆರಿಗೆ ರೂಪದಲ್ಲಿ ನೀಡಲಾಗುವುದು. ಹೀಗಾಗಿ ಸರ್ಕಾರವು ಶ್ರೀಗಂಧ ಬೆಳೆಗೆ ಪ್ರೊತ್ಸಾಹ ನೀಡಬೇಕು. ಅಲ್ಲದೇ ಬೆಳೆಗಾರರಿಗೆ ಉಚಿತ ಗನ್ ತರಬೇತಿ, ತೋಟಗಳಿಗೆ ಸಿಸಿಟಿವಿ ಸೌಲಭ್ಯ ಕಲ್ಪಿಸಿಕೊಡ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ವಕ್ತಾರ ಹುಣಸೇಮಕ್ಕಿ ಲ ಕ್ಷ್ಮಣ್, ಮುಖಂಡರಾದ ತರೀಕೆರೆ ಲಿಂಗರಾಜ್, ಮರಬೈಲು ಜಗದೀಶ್ ಉಪಸ್ಥಿತರಿದ್ದರು.

Silent protest demanding protection of sandalwood trees and plastic-free environment

Share

Leave a comment

Leave a Reply

Your email address will not be published. Required fields are marked *

Don't Miss

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು ನೆರೆಯವರ ತೋಟದ ಮನೆಯ ಹಿಂಭಾಗ ಬೆಂಕಿ ಹಚ್ಚಿಕೊಂಡು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ....

Related Articles

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...

ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವ ನೆಪದಲ್ಲಿ ₹1.59 ಲಕ್ಷ ವಂಚನೆ

ಚಿಕ್ಕಮಗಳೂರು: ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದಾಗಿ ನಂಬಿಸಿ ಬ್ಯಾಂಕ್ ಅಧಿಕಾರಿಯಂತೆ ನಟಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರ...