Home namma chikmagalur chikamagalur ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
chikamagalurCrime NewsHomeLatest Newsnamma chikmagalur

ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Share
Share

ಚಿಕ್ಕಮಗಳೂರು: ನಗರದ ಶಂಕರಪುರ ಬಡಾವಣೆಯಲ್ಲಿ 25 ವರ್ಷದ ಅವಿವಾಹಿತ ಯುವಕನೊಬ್ಬ ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಹಿಂದೆ ತೀವ್ರ ಅನುಮಾನವಿದೆ ಎಂದು ಯುವಕನ ತಾಯಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತ ಯುವಕನನ್ನು ಮೂರ್ತಿ ಎಲ್. (25) ಎಂದು ಗುರುತಿಸಲಾಗಿದೆ. ಈತ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದನು. ಆತನ ಮನೆಯ ಸಮೀಪದ ವಿವಾಹಿತ ಮಹಿಳೆಯೊಂದಿಗೆ ಕಳೆದ ಒಂದು ವರ್ಷದಿಂದ ಕಳ್ಳಸಂಬಂಧವಿತ್ತು ಎನ್ನಲಾಗಿದೆ.

ಈ ಸಂಬಂಧದ ಬಗ್ಗೆ ತಾಯಿ ಹಾಗೂ ಸಂಬಂಧಿಕರು ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಲ್ಲದೆ ಈ ಹಿಂದೆ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಿ ಪೊಲೀಸರಿಂದಲೂ ಎಚ್ಚರಿಕೆ ಕೊಡಿಸಲಾಗಿತ್ತು. ಆದರೂ ಸಹಾ ಆಕೆ ಬೇರೆ ಬೇರೆ ಮೊಬೈಲ್ ನಂಬಗರ್‌ಳಿಂದ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಇದರಿಂದಾಗಿ ಮೂರ್ತಿ ಆಕೆಯ ವ್ಯಾಮೋಹಕ್ಕೆ ಬಿದ್ದಿದ್ದನು.

ಏಕಾಏಕಿ ಬೇಸರಗೊಂಡು ಬುಧವಾರ ರಾತ್ರಿ ಮನೆಯ ಚಿಲಕ ಹಾಕಿಕೊಂಡು ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು. ತಾಯಿ ಮನೆಗೆ ಬಂದು ಬಾಗಿಲಿನ ಸಂದಿನಿಂದ ಇಣುಕಿ ನೋಡಿದಾಗ ಮೂರ್ತಿಯ ಕಾಲುಗಳು ನೇತಾಡುತ್ತಿರುವುದು ಕಂಡಿದೆ.

ತಕ್ಷಣವೇ ಅಕ್ಕನ ಮಕ್ಕಳ ಸಹಾಯದಿಂದ ಬಾಗಿಲು ಒಡೆದು ಸೀರೆಯನ್ನು ಕೊಯ್ದು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಗನ ಆತ್ಮಹತ್ಯೆಯ ನಿಖರ ಕಾರಣ ತಿಳಿಯದ ಹಿನ್ನೆಲೆಯಲ್ಲಿ ತಾಯಿ ಗುರಮ್ಮ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Youth commits suicide by hanging himself with saree at home

Share

Leave a comment

Leave a Reply

Your email address will not be published. Required fields are marked *

Don't Miss

ಚಲಿಸುತ್ತಿದ್ದ ಕಾರೊಂದರಲ್ಲಿ ದಿಢೀರ್ ಬೆಂಕಿ

ಕೊಪ್ಪ: ಚಲಿಸುತ್ತಿದ್ದ ಕಾರೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ರಸ್ತೆ ಮಧ್ಯೆಯೇ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನಿಂದ ಕೊಪ್ಪ ಸಮೀಪದ ನಿಲುವಾಗಿಲು...

ನಗರಠಾಣೆಯಲ್ಲಿ ಸ್ವಯಂಪ್ರೇರಿತವಾಗಿ (ಸುಮೋಟೊ) ಪ್ರಕರಣ

ಚಿಕ್ಕಮಗಳೂರು: ನಗರದಲ್ಲಿ ರಾಜಕೀಯ ಮುಖಂಡರ ಬೆಂಬಲಿಗರ ನಡುವಿನ ಪ್ರತಿಷ್ಠೆಯ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಾಜಿ ಸಚಿವ ಸಿ.ಟಿ. ರವಿ ಹಾಗೂ ಶಾಸಕ ಎಚ್.ಡಿ. ತಮ್ಮಯ್ಯ ಅವರ ಬೆಂಬಲಿಗರು ಸಾರ್ವಜನಿಕ...

Related Articles

ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ...

ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನಾ ಧರಣಿ

ಮೂಡಿಗೆರೆ: ತಾಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆನಂಬರ್ ೧೪೪ ರಲ್ಲಿ ವಸತಿಗಾಗಿ ಹೋರಾಟ ವೇದಿಕೆ...

ನಡು ರಸ್ತೆಯಲ್ಲೇ ಮಚ್ಚು ಹಿಡಿದು ಭೀಕರವಾಗಿ ಜಗಳ

ಚಿಕ್ಕಮಗಳೂರು: ಮನೆ ಮುಂದೆ ನೀರು ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರು ನಡು ರಸ್ತೆಯಲ್ಲೇ ಮಚ್ಚು...

ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ಕಡೂರು: ಟಿವಿಎಸ್ ಎಕ್ಸ್ ಹಾಗೂ ಪಿಕಪ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ...