Home namma chikmagalur chikamagalur ಗ್ರಾಮದ ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
chikamagalurHomeLatest Newsnamma chikmagalur

ಗ್ರಾಮದ ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Share
Share

ಚಿಕ್ಕಮಗಳೂರು:  ಚಿಕ್ಕಹಳ್ಳ ಗ್ರಾಮದ ರಸ್ತೆಯನ್ನು ಪ್ರಭಾವಿ ವ್ಯಕ್ತಿಗಳು ಮುಟ್ಟುಗೋಲು ಹಾಕಿ ಕೊಂಡಿರುವ ನಡೆಯನ್ನು ಖಂಡಿಸಿ ಶುಕ್ರವಾರ ಚಿಕ್ಕಹಳ್ಳ ಗ್ರಾಮದ ರಸ್ತೆ ಹೋರಾಟ ಸಮಿತಿ, ರೈತ ಸಂಘ ಹಾಗೂ ದಸಂಸ ಮುಖಂಡರುಗಳು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಸ್ತೆ ಬಿಡಿಸಿಕೊಡಬೇಕು ಎಂದು ಪಟ್ಟುಹಿಡಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಮಾತನಾಡಿ ಆಲ್ದೂರು ಹೋಬಳಿ ಸತ್ತಿಹಳ್ಳಿ ಗ್ರಾಮ ದ ಚಿಕ್ಕಹಳ್ಳ ಗ್ರಾಮಕ್ಕೆ ತೆರಳಲು ಇದ್ದ ರಸ್ತೆಯನ್ನು ಖಾಸಗೀ ವ್ಯಕ್ತಿಯೋರ್ವರು ನ್ಯಾಯಾಲಯದ ಆದೇಶ ತಂದು ಬಂದ್‌ಗೊಳಿಸಿದ ಪರಿಣಾಮ ಸುಮಾರು ೨೦ಕ್ಕೂ ಹೆಚ್ಚು ಕುಟುಂಬಗಳು ಕಾಲುದಾರಿಯಲ್ಲೇ ತೆರಳ ಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಗ್ರಾಮಕ್ಕೆ ರಸ್ತೆ ಬಿಡಿಸಿಕೊಡುವ ಸಂಬಂಧ ಗ್ರಾಮಸ್ಥರು ಅನೇಕ ಭಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅಧಿಕಾರಿಗಳು ವಿಸಿ ಸಭೆ ಎಂದು ಸಬೂಬು ನೀಡಿ ಬಗೆಹರಿಸುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಸಚಿವರು ಕೂಡಾ ಸಮಸ್ಯೆ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ರೈತರ ಸಮಸ್ಯೆ ಹೇಳತೀರವಾಗಿದೆ ಎಂದರು.

ಇತ್ತೀಚೆಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಆದೇಶದನ್ವಯ ಅಧಿಕಾರಿಗಳಿಗೆ ಸೂಚನೆ ನೀಡಿದರೂ, ಆಲ್ದೂರಿನ ಸ್ಥಳೀಯ ರೇಂಜರ್ ಅಧಿಕಾರಿ ಪ್ರಭಾವಿ ವ್ಯಕ್ತಿಯ ಹಣದಾಸೆಗೆ ಬಲಿಯಾಗಿ ದುರಂಹಕಾರದಿಂದ ರಸ್ತೆ ಬಿಡಿಸಿಕೊಡದೇ ಆ ವ್ಯಕ್ತಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಸ್ತೆ ಬಿಡಿಸಿಕೊಡುವ ಸಂಬಂಧ ಕಾನೂನು ರೀತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ಬೇಕಿದೆ. ಆದರೆ ಆರ್.ಎಫ್. ಅಧಿಕಾರಿಗಳಿಗೆ ರೈತರ ಸಮಸ್ಯೆ ಆಲಿಸುತ್ತಿಲ್ಲ. ಶೀಘ್ರದಲ್ಲೇ ಚಿಕ್ಕಹಳ್ಳ ಗ್ರಾಮದ ರಸ್ತೆಯನ್ನು ಒತ್ತುವರಿ ಮಾಡಿರುವ ವ್ಯಕ್ತಿಯಿಂದ ರಸ್ತೆ ಬಿಡಿಸಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆ ಸಲಾಗುವುದು ಎಂದು ಎಚ್ಚರಿಸಿದರು.

ಚಿಕ್ಕಹಳ್ಳ ಗ್ರಾಮಸ್ಥ ದೀಕ್ಷಿತ್ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ರಸ್ತೆಯನ್ನು ಪ್ರಭಾವಿ ವ್ಯಕ್ತಿಯೋ ರ್ವರು ನ್ಯಾಯಾಲಯದ ಅನುಮತಿ ಪಡೆದು ಗ್ರಾಮಸ್ಥರು ಸಂಚರಿಸುವ ರಸ್ತೆಗೆ ಅಡ್ಟಗಟ್ಟಿದ್ದಾರೆ. ಮನೆಯಿಂ ದ ಸುಮಾರು ೧ ಕಿ.ಮೀ. ದೂರದಿಂದ ನಿವಾಸಿಗಳು ತೋಟದ ದಾರಿಯಲ್ಲೇ ನಡೆದು ಸಾಗುವ ಸ್ಥಿತಿ ನಿರ್ಮಾ ಣಗೊಂಡಿದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಶಾಲಾಮಕ್ಕಳು, ಹಿರಿಯರಿಗೆ ಸಂಚರಿಸಲು ಬಹಳಷ್ಟು ಸಮಸ್ಯೆ ಆಗುತ್ತಿದೆ. ಶಾಲೆಗೆ ತೆರಳಲ ಲು ಮಕ್ಕಳು ಹಾಗೂ ಹಿರಿಯರಿಗೆ ಅನಾರೋಗ್ಯ ಸಮಸ್ಯೆ ಎದುರಾದಾಗ ಶೀಘ್ರವೇ ಆಸ್ಪತ್ರೆಗೆ ಕೊಂಡೊಯ್ಯ ಲು ಕಷ್ಟಸಾಧ್ಯವಾಗಿದೆ. ಅಲ್ಲದೇ ಪ್ರಭಾವಿ ವ್ಯಕ್ತಿ ಗ್ರಾಮದ ಸ್ಮಶಾನ ಜಾಗಕ್ಕೂ ಗೇಟ್ ನಿರ್ಮಿಸುವ ಮೂಲಕ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.

ಕಳೆದ ೨೦೨೧ ರಿಂದಲೂ ಗ್ರಾಮದ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಹಲವು ರೀತಿಯಲ್ಲಿ ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡಿ ಐದಾರು ವರ್ಷಗಳು ಕಳೆದಿವೆ. ಈ ಫಲವಾಗಿ ಗೋಮಾಳ ಜಾಗದಲ್ಲಿ ರಸ್ತೆ ನಿರ್ಮಿಸಿಕೊಡಲು ತಾಲ್ಲೂಕು ಆಡಳಿತ ಒಪ್ಪಿ ನಕಾಶೆ ಸಹ ಪೂರ್ಣ ಗೊಂಡಿದೆ ಎಂದರು.

ಆದರೆ ಜಿಲ್ಲಾಡಳಿತ, ತಾಲ್ಲೂಕ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ನಡುವೆ ಸಮನ್ವಯತೆ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮಕ್ಕೆ ಓಡಾಡಲು ರಸ್ತೆ ಎನ್ನುವು ದು ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಸಂಸ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ ರೈತರು ಸಂಚರಿಸುವ ರಸ್ತೆಯನ್ನು ಒತ್ತುವರಿ ಮಾ ಡಿರುವುದು ಕಾನೂನು ಉಲ್ಲಂಘನೆ. ಈ ಭಾಗದ ನಿವಾಸಿಗಳು ಅನೇಕ ವರ್ಷಗಳಿಂದ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು. ಆದರೆ ಈ ಪ್ರಭಾವಿ ವ್ಯಕ್ತಿಗಳು ರಸ್ತೆ ಮುಚ್ಚಿರುವುದು ಸರಿಯಲ್ಲ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮಾಜಿ ಅಧ್ಯಕ್ಷ ಬಸವರಾಜ್, ಮುಖಂಡರಾದ ಸುನೀಲ್‌ಕುಮಾರ್, ಕೆ.ಭರತ್, ಚಿಕ್ಕಹಳ್ಳ ಗ್ರಾಮ ಸ್ಥರಾದ ಸಚಿನ್, ಆಕಾಶ್‌ಗೌಡ, ಪ್ರಮೋದ್, ಚಿರಾಗ್, ಪ್ರಶಾಂತ್, ರಮೇಶ್‌ಗೌ ಡ, ಹೂವೇಗೌಡ, ಮುರ ಳಿ, ಕಾಳೇಗೌಡ, ಸುದನ್ವ, ಮಲ್ಲೇಶ್, ಮೋಹನ್ ಮತ್ತಿತರರಿದ್ದರು.

Protest by various organizations demanding the release of the village road

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...