ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮರು ಎಣಿಕೆ ವಿವಾದ ರಾಜ್ಯ ರಾಜಕಾರಣದಲ್ಲಿ ತೀವ್ರ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಟೇಬಲ್ ಏಜೆಂಟ್ಗಳು ಅಪವಾದಗಳಿಂದ ಮುಕ್ತರಾಗಲು ದೇವಾಯಗಳಲ್ಲಿ ಆಣೆ-ಪ್ರಮಾಣದ -ಪ್ರಾರ್ಥನೆ ಇಡಲು ಮುಂದಾಗುವ ಮೂಲಕ ರಾಜಕೀಯ – ದೇವರ ಅಂಗಳಕ್ಕೆ ತಲುಪಿದೆ.
೨೦೨೩ರ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೂತ್ ಏಜೆಂಟ್ಗಳೇ ಕಾಂಗ್ರೆಸ್ ಜೊತೆ ಕೈಜೋಡಿಸಿ ಬಿಜೆಪಿಯ ಸೋಲಿಗೆ ಕಾರಣವಾಗಿದ್ದಾರೆ ಎಂಬ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಈ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿಯ ಕೌಂಟಿಂಗ್ ಏಜೆಂಟ್ಗಳಾದ ಅದ್ದಾಡ ಸತೀಶ್, ಶೆಟ್ಟಿಗದ್ದೆ ರಾಮಸ್ವಾಮಿ, ಕಿರಣ್ ಮಡಬಳ್ಳಿ ಮತ್ತು ಅನು ನಾರ್ವೆ ಅವರು ಇಂದು ಕೊಪ್ಪದ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಭೂತರಾಯ ದೇವಸ್ಥಾನಗಳಲ್ಲಿ ದೇವರ ಮುಂದೆ ಆಣೆ-ಪ್ರಮಾಣ ಮಾಡಿದ್ದಾರೆ.
ಮತ ಎಣಿಕೆಯಲ್ಲಿ ಯಾವುದೇ ಲೋಪ ಎಸಗಿಲ್ಲ ಮತ್ತು ಪಕ್ಷಕ್ಕೆ ,ವಿಶ್ವಾಸ ದ್ರೋಹ ಬಗೆದಿಲ್ಲ ಎಂದು ಅವರು ದೇವರ ಮುಂದೆ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಈ ವಿಚಾರದಲ್ಲಿ ಸಕ್ರಿಯವಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಕೋರಿ ಶನಿವಾರ ಕೊಪ್ಪದ ವೀರಭದ್ರಸ್ವಾಮಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಇತ್ತೀಚಿನ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ೫೨ ಮತಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಶೃಂಗೇರಿಯಲ್ಲಿ ಸತ್ಯ-ಅಸತ್ಯಗಳ ನಡುವಿನ ರಾಜಕೀಯ ಹೋರಾಟ ದೇವಸ್ಥಾನದ ಅಂಗಳಕ್ಕೆ ಬಂದುನಿಂತಿದೆ.
ಚಾರಿತ್ರೈ ವಧೆಮಾಡಿದವರನ್ನು ಭೂತರಾಯಸ್ವಾಮಿ ನೋಡಿಕೊಳ್ಳಲಿ
ಕೊಪ್ಪದ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಭೂತರಾಯ ದೇವಸ್ಥಾನಗಳಲ್ಲಿ ದೇವರ ಮುಂದೆ ಆಣೆ-ಪ್ರಮಾಣ ಮಾಡಿದ ಅದ್ದಡ ಸತೀಶ್ ವಿಧಾನಸಭಾ ಕ್ಷೇತ್ರಕ್ಕೆ ೨೦೨೩ರಲ್ಲಿ ನಡೆದ ಚುನಾವಣಾ ಪೋಸ್ಟಲ್ ಮತ ಎಣಿಕೆಯಲ್ಲಿ ಚುನಾವಣಾ ಕೇಂದ್ರದಲ್ಲಿ ಟೇಬಲ್ ಏಜೆಂಟ್ ಆಗಿದ್ದ ನಾನು ಕಾಂಗ್ರೆಸ್ ನವರೊಂದಿಗೆ ಡೀಲ್ ಮಾಡಿ ಕೊಂಡಿದ್ದೇನೆ, ಯಾವುದೇ ಅಕ್ರಮ ನಡೆದಿಲ್ಲ.
ಎಲ್ಲವೂ ಪಾರದರ್ಶವಾಗಿ ನಡೆದಿದೆ, ನಾನು ಯಾವುದೇ ತಪ್ಪು ಮಾಡಿಲ್ಲಾ. ನಾನು ತಪ್ಪುಮಾಡಿದ್ರೆ ನಾಶವಾಗಲಿ.ಸುಮ್ಮನೆ ನನ್ನ ಮೇಲೆ ಅಪವಾದಹೋರಿಸಿ ಚಾರಿತ್ರ್ಯ ವಧೆಮಾಡಿದವರನ್ನು ಭೂತರಾಯಸ್ವಾಮಿ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಅಪವಾದ ಹೊರಿಸಿರುವುದು ಮನಸ್ಸಿಗೆ ನೋವು ತಂದಿದೆ.
ಇದೇ ವೇಳೆ ಮುಖಂಡ ಶೆಟ್ಟಿ ಗದ್ದೆ ರಾಮಸ್ವಾಮಿ ದೇವರ ಮೊರೆ ಹೋಗಿ ಇದೇ ವೇಳೆ ೨೦೨೩ರಲ್ಲಿ ನಡೆದ ಚುನಾವಣಾ ಮತ ಎಣಿಕೆ ವೇಳೆ ನಾನು ಇವಿ.ಎಂ ಮತಗಳ ಎಣಿಕೆಯ ಬಗ್ಗೆ ಕಾರ್ಯನಿರ್ವಹಿಸಿದ್ದೇನೆ. ನನಗೂ ಅಂಚೆಮತಗಳ ಎಣಿಕೆಗೂ ಯಾವುದೇ ಸಂಬಂಧವಿಲ್ಲಾ. ನಾನು ಯಾವುದೇ ಸಹಿ ಹಾಕಿಲ್ಲಾ. ಅನಾಶ್ಯಕವಾಗಿ ನನ್ನಮೇಲೆ ಕಾಂಗ್ರೆಸ್ವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆನೆ ಎಂದು ಅಪಾದನೆ ಮಾಡಲಾಗಿದೆ.
ಕಳೆದ ೪೫ವರ್ಷಗಳ ರಾಜಕೀಯ ಜೀವನದಲ್ಲಿ ಇಂಥಹ ಅಪವಾದ ಹೊರಿಸಿರುವುದು ಮನಸ್ಸಿಗೆ ನೋವು ತಂದಿದೆ. ನಾನು ತಪ್ಪುಮಾಡಿದರೆ ನನಗೆ ಶಿಕ್ಷೆಯಾಗಲಿ. ಇಲ್ಲವೆ ಅಪವಾದ ಹೊರಿಸದವರಿಗೆ ಶಿಕ್ಷೆಯಾಗಲಿ ಎಂದು ಭೂತರಾಯ ,ಪಂಚಲಿಂಗ, ವೀರಭದ್ರಸ್ವಾಮಿಗೆ ಹರಿಕೆ ಹೊತ್ತಿರುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜೇಗೌಡ
ಮರು ಮತ ಎಣಿಕೆ ಬಳಿಕ ತಮ್ಮ ಶಾಸಕ ಸ್ಥಾನ ರದ್ದಾಗಿರುವುದನ್ನು ಪ್ರಶ್ನಿಸಿ ಶೃಂಗೇರಿಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೇ ೩, ೨೦೨೬ರಂದು ಪರಿಷ್ಕೃತ ಫಲಿತಾಂಶವನ್ನು ಚುನಾವಣಾಧಿಕಾರಿ ಅಧಿಕೃತವಾಗಿ ಪ್ರಕಟಿಸಿದ್ದರು.
ಈ ಪರಿಷ್ಕೃತ ಫಲಿತಾಂಶದಲ್ಲಿ ರಾಜೇಗೌಡರ ಒಟ್ಟು ಮತಗಳ ಸಂಖ್ಯೆ ೨೫೫ರಷ್ಟು ಕಡಿತಗೊಂಡು, ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜೇಗೌಡ ಸುಪ್ರೀಂ ಕೊರ್ಟ್ಮೊರೆ ಹೋಗಿದ್ದಾರೆ.
Controversy over postal recount in Sringeri assembly constituency for Devara Angala
Leave a comment