Home namma chikmagalur chikamagalur ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ
chikamagalurHomeLatest Newsnamma chikmagalur

ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ

Share
Share

ಚಿಕ್ಕಮಗಳೂರು: ಚುನಾವಣಾ ಆಯೋಗದ ಅಧಿಕೃತ ಘೋಷಣೆಯೊಂದಿಗೆ ಡಿ.ಎನ್. ಜೀವರಾಜ್ ಅವರ ಗೆಲುವು ಖಚಿತಗೊಂಡಿದ್ದು, ಅವರು ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹೈಕೋರ್ಟ್ ಆದೇಶದ ಮೇರೆಗೆ ಮೇ 2ರಂದು ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟ ತಲುಪಿದ್ದು, ಚುನಾವಣಾ ಆಯೋಗ ಇಂದು ಅಧಿಕೃತ ಫಲಿತಾಂಶವನ್ನು ಪ್ರಕಟಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಡಿ.ಎನ್. ಜೀವರಾಜ್ ಅವರು ಮರು ಎಣಿಕೆಯಲ್ಲಿ ಮುನ್ನಡೆ ಸಾಧಿಸಿ, ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರನ್ನು ಹಿಂದಿಕ್ಕಿ ಗೆಲುವು ದಾಖಲಿಸಿದ್ದಾರೆ.

ಮೇ 2ರಂದು ನಡೆದ ಮರು ಎಣಿಕೆಯಲ್ಲಿ ಅಂಚೆ ಮತಗಳ ಪರಿಶೀಲನೆ ಪೂರ್ಣಗೊಂಡಿದ್ದರೂ ಫಲಿತಾಂಶವನ್ನು ತಕ್ಷಣ ಘೋಷಿಸಲಾಗಿರಲಿಲ್ಲ. ಈ ಬೆಳವಣಿಗೆ ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಮರು ಎಣಿಕೆಯು ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದು, ಕೊನೆ ಹಂತದಲ್ಲಿ ಜೀವರಾಜ್ ಮುನ್ನಡೆ ಕಾಯ್ದುಕೊಂಡಿದ್ದರು.

ಈ ಫಲಿತಾಂಶ ಶೃಂಗೇರಿ ಕ್ಷೇತ್ರದ ರಾಜಕೀಯದಲ್ಲಿ ಮಹತ್ವದ ತಿರುವು ತಂದಿದ್ದು, ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿದೆ.

D.N. Jeevaraj elected as new MLA of Sringeri constituency

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...