Home namma chikmagalur chikamagalur ದೇವಸ್ಥಾನ, ಜಾತ್ರೆ ರಕ್ತ ಸಂಬಂಧ ಗಟ್ಟಿಗೊಳಿಸುವ ಕೇಂದ್ರ
chikamagalurHomeLatest Newsnamma chikmagalur

ದೇವಸ್ಥಾನ, ಜಾತ್ರೆ ರಕ್ತ ಸಂಬಂಧ ಗಟ್ಟಿಗೊಳಿಸುವ ಕೇಂದ್ರ

Share
Share

ಚಿಕ್ಕಮಗಳೂರು:  ದೇವಸ್ಥಾನ, ಜಾತ್ರೆ ಮತ್ತು ಹಬ್ಬಗಳು ಪರಸ್ಪರ ರಕ್ತಸಂಬಂಧ ಗಟ್ಟಿಗೊ ಳಿಸುವ ಪವಿತ್ರ ಕೇಂದ್ರ. ಭಗವಂತನ ದರ್ಶನ ಪಡೆದ ಭಕ್ತಾಧಿಗಳು ಮನಸ್ಸಿನಲ್ಲಿರುವ ಕಲ್ಮಶ ಹೊರಚೆಲ್ಲಿ, ಶು ದ್ಧ ಮನಸ್ಸಿನ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗಾಂಧಿ ಆಶ್ರಮ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿ ದರು.

ತಾಲ್ಲೂಕಿನ ಸಗನೀಪುರ ರಸ್ತೆ ಸಮೀಪದಲ್ಲಿ ಬುಧವಾರ ಜಿಲ್ಲಾ, ತಾಲ್ಲೂಕು ಬಲಿಜ ಸಂಘ ಮತ್ತು ಬಲಿ ಜ ಕುಲಬಾಂಧವರ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಶ್ರೀ ಯೋಗಿನಾರೇಯಣಾ ಯತೀಂದ್ರ ಕೈವಾರ ತಾ ತಯ್ಯನವರ ನೂತನ ದೇವಾಲಯ ಉದ್ಗಾಟನೆ, ರಾಜಗೋಪುರ ಕಳಸ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವಾಲಯ ಧರ್ಮಕ್ಕೆ ಸೀಮಿತಗೊಳಿಸದೇ, ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಮ ಂದಿರದ ಸುತ್ತಮುತ್ತ ಔಷಧಿ ಸಸಿಗಳು ಬೆಳೆಸಬೇಕು. ಮನೆ ಅಥವಾ ವೃತ್ತಿ ಬದುಕಿನಲ್ಲಿ ಕಲಹಗಳು ಕಂಡುಬಂ ದಲ್ಲಿ ದೃತಿಗೆಡಬಾರದು. ಈ ವೇಳೆ ಯತೀಂದ್ರ ಶ್ರೀಗಳ ಸನ್ನಿಧಿಯಲ್ಲಿ ಧಾನ್ಯಸ್ಥರಾದರೆ ಮಾನಸಿಕ ಒತ್ತಡ ದೂ ರಾಗಿ, ಸಮೃದ್ಧಿ ಬದುಕು ದೊರೆಯಲಿದೆ ಎಂದರು.

ಬಲಿಜ ಸಮಾಜ ಮಹಾಲಕ್ಷ್ಮೀ ದೇವಿಗೆ ಬಳೆ ತೊಡಿಸಿದ ಜನಾಂಗ. ಈ ಕುಲದಲ್ಲಿ ಜನಿಸಿದ ಕೈವಾರ ತಾತಯ್ಯನವರು ಸಮಾಜಕ್ಕೆ ಸ್ಪೂರ್ತಿಯಾಗಿ ಬಾಳಿದವರು. ತಮ್ಮ ತಪಸ್ಸಿನಿಂದಲೇ ಕಲ್ಲನ್ನು ಸಕ್ಕರೆಯಾಗಿಸಿದ ದೈವತ್ವ ಗುಣದವರು. ದುಷ್ಟರ ಮನಸ್ಸಿನಲ್ಲಿ ಒಳಿತಿನ ಬೀಜಬಿತ್ತಿ ಸನ್ನಡತೆಯ ದಾರಿ ತೋರಿದ ಮಹಾಪುರು ಷ ಎಂದು ಹೇಳಿದರು.

ಪ್ರಸ್ತುತ ದೇವಾಲಯ ಲೋಕಾರ್ಪಣೆಗೊಂಡಿದ್ದು, ಇನ್ನುಳಿದಂತೆ ಸಮುದಾಯ ಭವನ, ಸಸಿಗಳ ನೆಡ ಲು, ಜನಾಂಗದ ಮದುವೆ ಕಾರ್ಯಕ್ಕೆ ಮಾಂಗಲ್ಯ, ಪ್ರತಿಭಾ ಪುರಸ್ಕಾರ ಹಾಗೂ ಕಾರ್ತೀಕ ಮಾಸಕ್ಕೆ ಪಲ್ಲಕ್ಕಿ ಉತ್ಸವಕ್ಕೆ ಅವಶ್ಯವಿರುವ ಸವಲತ್ತು ಒದಗಿಸಲಾಗುವುದು. ಅಲ್ಲದೇ ಜಿಲ್ಲೆ ಪ್ರವಾಸಿತಾಣವಾದ ಹಿನ್ನೆಲೆ ಮುಂದೆ ಈ ಕ್ಷೇತ್ರವನ್ನು ಶ್ರದ್ದಾಕೇಂದ್ರವಾಗಿ ಮಾರ್ಪಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಪ್ರತಿಯೊಂದು ಊರು ಅಯೋಧ್ಯೆ ನಗರಿಯಾಗಬೇಕು. ಪ್ರತಿ ಮನೆಯು ರಾಮರಾಜ್ಯವಾಗ ಬೇಕು. ಭಾರತೀಯರ ಮೂಲ ಸನಾತನ ಧರ್ಮವನ್ನು ಜಾತಿ ಹೆಸರಿನಲ್ಲಿ ಹತ್ತಿಕ್ಕುವವರ ಎದುರು ಸದೃಢ ಹಿಂದೂಗಳಾಗಿ ಬೆಳೆಯುವ ಜೊತೆಗೆ ಜವಾಬ್ದಾರಿ ಪ್ರಜೆಯಾಗಿ ರಾಷ್ಟ್ರದ ಅಭಿವೃದ್ದಿ ಶ್ರಮಿಸಲು ಮುಂದಾಗ ಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಸಕ ಹೆಚ್.ಡಿ.ತಮ್ಮಯ್ಯ ಹದಿನೆಂಟನೇ ಶತಮಾನದಲ್ಲಿ ಜನಿ ಸಿದ ಕೈವಾರ ತಾತಯ್ಯ ಅನೇಕ ಕಾವ್ಯ, ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ಅರ್ಪಿಸಿದರು. ಶ್ರೀಗಳು ಆಧ್ಯಾ ತ್ಮಕ ಕಡೆ ಹೆಚ್ಚಿನ ಒಲವಿತ್ತು. ಅಮರನಾರಾಯಣ ಹೆಚ್ಚು ಆರಾಧಿಸಿದ ಹಿನ್ನೆಲೆ ಯೋಗೀ ನಾರೇಯಣಾ ಯ ತೀಂದ್ರ ಎಂದು ನಾಮಾಂಕಿತವಾಗಿದೆ ಎಂದು ಹೇಳಿದರು.

ಯತೀಂದ್ರ ಶ್ರಿಗಳ ಕುರಿತು ಪುಸ್ತಕಗಳ ಜೊತೆಗೆ ಚಲನಚಿತ್ರವು ಬೆಳ್ಳಿ ಪರದೆಯಲ್ಲಿ ಮೂಡಿಬಂದಿದೆ. ಈ ದಾರ್ಶನಿಕರ ಸದ್ವಿಚಾರ, ತತ್ವಾದರ್ಶ ಹಾಗೂ ಸಮಾಜಮುಖಿ ಚಿಂತನೆ ಇಡೀ ದೇಶದಲ್ಲಿ ಪಸರಿಸಲು ಎಂ. ಆರ್.ಜಯರಾಮ್ ಹಾಗೂ ಅವರ ಕುಟುಂಬದ ಶ್ರಮ ಬಹಳಷ್ಟಿದೆ. ಇದೀಗ ಜಿಲ್ಲೆಯಲ್ಲೇ ದೇವಸ್ಥಾನ ನಿಮಿ ಸಿದ ಕಾರಣ ಸ್ಥಳೀಯ ಭಕ್ತಾಧಿಗಳಿಗೆ ಅನುಕೂಲವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಬದುಕಿನ ಉದ್ದಕ್ಕೂ ಸಮಾಜಮುಖಿ ಕಾರ್ಯವು ತಾತಯ್ಯನವರ ಜೀವನದ ಗುರಿಯಾಗಿತ್ತು. ಭಗವಂತ ಕೇವಲ ಗರ್ಭಗುಡಿಯಲ್ಲಿಲ್ಲ. ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ನೆಲೆಸಿದ್ದಾನೆ. ಒಳಗಿನ ದೈವತ್ವ ಗುಣಗಳನ್ನು ಮನುಷ್ಯ ಅರಿತು ಮುನ್ನೆಡೆದರೆ ಸಾತ್ವಿಕ, ಸಂತೋ ಷದ ಬದುಕು ಸಿಗಲಿದೆ ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ, ನಟಿ ತಾರಾ ಅನುರಾಧ ಮಾತನಾಡಿ ಬಲಿಜ ಸಮಾಜ ಹಿಂದುಳಿದಿದ್ದರೂ, ಮಂ ಗಳದ್ರವ್ಯ, ಎಲೆಅಡಿಕೆ ಮತ್ತು ಬಳೆ ವೃತ್ತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಜನಾಂಗದಲ್ಲಿ ಜನಿಸಿರುವ ತಮ ಗೂ ಬಹಳಷ್ಟು ಹೆಮ್ಮೆಯಿದೆ. ಹೀಗಾಗಿಯೇ ತವರಿನ ಮನೆಯಂತೆ ಅರಿಶಿನ-ಕುಂಕುಮ ಸ್ವೀಕರಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಚಿಕ್ಕಬಳ್ಳಾಪುರದ ಮೂಲ ಕ್ಷೇತ್ರದಲ್ಲಿ ನೆಲೆಸಿರುವ ಕೈವಾರ ತಾತಯ್ಯನವರ ದೇಗುಲವನ್ನು, ಜಿಲ್ಲಾ ಕೇಂದ್ರದಲ್ಲೂ ಪ್ರತಿಷ್ಟಾಪಿಸುವ ಮೂ ಲಕ ಭಕ್ತಗಣಕ್ಕೆ ಅರ್ಪಿಸಿರುವುದು ಹೆಮ್ಮೆಯ ಸಂಗತಿ. ತಾತಯ್ಯನವರು ಕೂಡಾ ಶರಣ ಪರಂಪರೆ, ಸಂಪ್ರ ದಾಯದಂತೆ ಬದುಕುವ ಮೂಲಕ ಸಂದೇಶ ನೀಡಿದವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಆನಂದಶೆಟ್ಟಿ ವಹಿಸಿದ್ದರು. ಈ ವೇಳೆ ಶ್ರೀ ಕ್ಷೇತ್ರ ಕೈವಾರ ಕ್ಷೇತ್ರ ಧರ್ಮಾಧಿಕಾರಿ ಡಾ|| ಎಂ.ಆರ್.ಜಯರಾಮ್, ಸಿಡಿಎ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಬಲಿಜ ಸಮಾಜದ ತಾಲ್ಲೂಕು ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಮಹೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ಕೆ.ಬಿ.ಗಿರೀಶ್, ಸಹ ಕಾರ್ಯದರ್ಶಿ ಯಶ್ವಮತ್, ಖಜಾಂಚಿ ರತೀಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಪೂಜಾರ ಮಂಜಪ್ಪ, ದಿವಾಕರ್, ವಕ್ತಾರ ಕುಮಾರ್ ಆರ್.ಶೆಟ್ಟಿ, ಸಮಾಜದ ಮುಖಂಡ ವಿರೂಪಾಕ್ಷ ಮತ್ತಿತರರು ಉಪಸ್ಥಿತರಿದ್ದರು.

Temple fair are centers for strengthening blood ties

Share

Leave a comment

Leave a Reply

Your email address will not be published. Required fields are marked *

Don't Miss

ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಮಾರಾಟ ಜಾಪ ಪತ್ತೆ

ಚಿಕ್ಕಮಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ತೇಗೂರು ಗ್ರಾಮದ ಜನರಿಂದ ಅಕ್ಕಿಯನ್ನು ಸಂಗ್ರಹಿಸಿದ್ದ ಆಟೋ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ,...

ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ

ಚಿಕ್ಕಮಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ ಸಾಧನೆ ಮಾಡಿದ್ದಾರೆ. ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಅವರು ಒಟ್ಟು 625 ಅಂಕಗಳಿಗೆ 625...

Related Articles

ಇಂಧನ ಸಚಿವರ ಜಿಲ್ಲೆಯಲ್ಲಿ ರೈತರು ಮಾತ್ರ ಕತ್ತಲಲ್ಲಿ ಕಾಲ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರಿಗೆ ಈಗ ವಿದ್ಯುತ್ ಅಭಾವವೇ ಶಾಪವಾಗಿ ಪರಿಣಮಿಸಿದೆ....

ರಸ್ತೆಅಪಘಾದಲ್ಲಿ ಬೈಕ್‌ ಚಾಲಕನ ಸಾವು

ಕೊಪ್ಪ: ಅತಿ ವೇಗ ಮತ್ತು ಹೆಲ್ಮಟ್ ಧರಿಸದ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಕೊಪ್ಪದ ಕುಂಬ್ರಿಹುಬ್ಬು...

ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಒಂಟಿ ಸಲಗ

ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು,...

ಮೇ.14ಕ್ಕೆ ಸರಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮೂಡಿಗೆರೆ: ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಹಾಗೂ ಸರಳ...