Home namma chikmagalur chikamagalur ಕಾಂಗ್ರೆಸ್ – ಮಿತ್ರ ಪಕ್ಷದಿಂದ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ
chikamagalurHomeLatest Newsnamma chikmagalur

ಕಾಂಗ್ರೆಸ್ – ಮಿತ್ರ ಪಕ್ಷದಿಂದ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ

Share
Share

ಚಿಕ್ಕಮಗಳೂರು:ಸಂಸತ್ತಿನಲ್ಲಿ ನಾರಿಶಕ್ತಿ ಮಹಿಳಾ ಮೀಸಲಾತಿ ವಿರುದ್ಧ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮತಚಲಾಯಿಸುವ ಮೂಲಕ ಮಹಿಳೆಯರ ಹಕ್ಕಿನ ಕತ್ತುಹಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಸಂಸದ ಕೋಟಶ್ರೀನಿವಾಸಪೂಜಾರಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ನಾರಿಶಕ್ತಿ ಮಸೂದೆ ತಿದ್ದುಪಡಿಯನ್ನು ಕಾಂಗ್ರೆಸ್ ಅದರ ಮಿತ್ರಕೂಟಗಳು ಪಾಸಾಗುವುದನ್ನು ನಿರಾಕರಿಸುವ ಮೂಲಕ ದೇಶದ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ. ದೇಶದ ೧೪೬ಕೋಟಿ ಜನಸಂಖ್ಯೆಯಲ್ಲಿ ಶೇ.೭೦ರಿಂದ ೭೫ರಷ್ಟು ಮಹಿಳೆಯರಿದ್ದು, ಏ ೧೬ರಂದು ಮಸೂದೆ ಮಂಡನೆಯಾಗಿ ವಿಸ್ತೃತ ಚರ್ಚೆ ನಡೆಸಲಾಯಿತು.ಬಿಲ್ ಪಾಸಾದರೆ ಮಹಿಳಾ ಕುಲಕ್ಕೆ ದೊಡ್ಡಶಕ್ತಿ ಬರುತ್ತದೆ ಎಂದು ತಿಳಿದು ಬಿಲ್‌ಪಾಸಾಗದಂತೆ ನೋಡಿಕೊಂಡಿವೆ ಎಂದು ತಿಳಿಸಿದರು.

ನಾಶಿಶಕ್ತಿ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡುವಂತೆ ಪ್ರಧಾನಿನರೇಂದ್ರಮೋದಿ ವಿರೋಧ ಪಕ್ಷಗಳಲ್ಲಿ ಮನವಿ ಮಾಡಿದ್ದರು.ಆದರೆ ಇಲ್ಲಸಲ್ಲದ ತಗಾದೆ ತೆಗೆದು ಮಸೂದೆ ಪಾಸಾಗದಂತೆ ನೋಡಿಕೊಂಡಿವೆ. ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಮದೂದೆ ಪ್ರತಿಯನ್ನು ಹರಿದುಹಾಕುವ ಮೂಲಕ ಮಹಿಳೆಯರಿಗೆ ಘೋರ ಅನ್ಯಾಯ ಮಾಡಿದ್ದಾರೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಬ್ಯಾನರ್ಜಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆಂದು ಆರೋಪಿಸಿದರು.

ನಾರಿಶಕ್ತಿ ಮಸೂದೆ ವಿರುದ್ಧ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮತಚಲಾಯಿಸುವ ಮೂಲಕ ಮಹಿಳಾ ಮೀಸಲಾತಿ ವಿರೋಧಿ ಎಂಬುದನ್ನು ನಿರೂಪಿಸಿವೆ.ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಮಹಿಳಾ ವಿರೋಧಿ ಎಂಬುದನ್ನು ಪತ್ಯಕ್ಷವಾಗಿಯೇ ಒಪ್ಪಿಕೊಂಡಿವೆ. ೫ನೇ ಬಾರಿಗೆ ಮಹಿಳಾ ರಾಜಕೀಯ ಮೀಸಲಾತಿ ಅನುಮೋದನೆಗೆ ಅಡ್ಡಿಪಡಿಸಿರುವುದನ್ನು ಖಂಡಿಸುವುದಾಗಿ ಹೇಳಿದರು.

ಕಳೆದ ೨೦೨೪ರ ಚುನಾವಣೆ ಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ೨೦೨೩ರಲ್ಲಿ ಮಹಿಳಾ ಮೀಸಲಾತಿಯನ್ನು ಬೆಂಬಲಿಸುವ ಮೂಲಕ ಸಮಯಸಾಧಕತನವನ್ನು ಪ್ರದರ್ಶಿಸಿದ್ದವು ಆದರೆ ಈ ಬಾರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನಾರಿಶಕ್ತಿ ಮಸೂದೆ ತಿದ್ದುಪಡಿಯನ್ನು ವಿರೋಧಿಸುವ ಮೂಲಕ ಮಹತ್ವದ ಮಸೂದೆಗೆ ಸೋಲುಂಟಾಗಲು ಕಾರಣವಾಯಿತು. ಮಸೂದೆ ವಿಷಯದಲ್ಲಿ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಜನಪರ ಕಾರ್ಯಗಳಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ವಿರೋಧಿಸುತ್ತಲೇ ಬಂದಿವೆ. ಆದರೆ, ಅವುಗಳ ವಿರೋಧಕ್ಕೆ ಕೇಂದ್ರ ಸರ್ಕಾರ ಎಂದಿಗೂ ಬಗ್ಗುವುದಿಲ್ಲ. ಜನಪರ ಅಭಿವೃದ್ಧಿ ಕಾರ್ಯಗಳು ಮುಂದುವರೆದುಕೊಂಡು ಹೋಗಲಿವೆ ಎಂದು ಸಂಸದರು ತಿಳಿಸಿದರು.

ಸಂಸತ್‌ಕ್ಷೇತ್ರ ಪುನರ್‌ವಿಂಗಡಣೆಯಾಗುವುದರಿಂದ ಸಂಸತ್‌ಸ್ಥಾನಗಳು ಹೆಚ್ಚಾಗಲಿವೆ. ಮಹಿಳೆಯರ ಸಂಖ್ಯೆಯೂ ಹೆಚ್ಚಾಗಲಿವೆ. ಸಂಸದರು ಪ್ರತಿಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಕಷ್ಟಸುಖಗಳನ್ನು ತಿಳಿದುಕೊಳ್ಳಲು ಸುಲಭವಾಗಲಿದೆ ಎನ್ನುವ ಕಾರಣಕ್ಕಾಗಿ ನಾರಿಶಕ್ತಿ ಮಸೂದೆ ತಿದ್ದುಪಡಿಯೊಂದಿಗೆ ಕ್ಷೇತ್ರ ಪುನರ್‌ವಿಂಗಡಣೆಯನ್ನು ಸೇರ್ಪಡೆಗೊಳಿಸಲಾಗಿತ್ತು. ಮಸೂದೆ ತಿರಸ್ಕೃತಗೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ರಾಜ್ಯಸರ್ಕಾರ ಒಳಮೀಸಲಾತಿ ನೀಡಿರುವ ವಿಚಾರ ಚರ್ಚೆಯಾಗುತ್ತಿದೆ. ಬಿಜೆಪಿಸರ್ಕಾರ ಅಧಿಕಾರದಲ್ಲಿದ್ದಾಗ ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಶೇ. ೧೭ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು.ಈಗಿನ ಕಾಂಗ್ರೆಸ್ ಸರ್ಕಾರ ಮೀಸಲಾತಿ ಪ್ರಮಾಣವನ್ನು ೧೫ಕ್ಕೆ ಇಳಿಕೆ ಮಾಡಿದೆ. ಎಡಗೈ ಸಮುದಾಯಕ್ಕೆ ಶೇ.೫.೨೫, ಬಲಗೈ ಸಮುದಾಯಕ್ಕೆ ೫.೨೫ ಮೀಸಲಾತಿ, ಇತರೆಸಮುದಾಯಕ್ಕೆ ಶೇ ೪.೫ ಮೀಸಲಾತಿಯನ್ನು ನೀಡಿದ್ದು, ಕೆಲವು ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹೇಳಿದರು.

ಸರ್ಫೇಸಿ ಕಾಯ್ದೆ ಕುರಿತು ಮಾತನಾಡಿದ ಅವರು ಬೆಳೆಗಾರರು ಈ ಕಾಯ್ದೆಯನ್ನು ವಿರೋಧಿಸಿದ್ದರು. ತಾವು ಸೇರಿದಂತೆ ಕೆಲವು ಸಂಸದರು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಕೇಂದ್ರ ಸಚಿವರನ್ನು ಭೇಟಿಮಾಡಿ ಚರ್ಚೆನಡೆಸಿದ್ದು, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದೆವು. ಸಚಿವರು ವರದಿ ತರಿಸಿಕೊಂಡು ನೋಡಿದಾಗ ಕೆಲವೇ ಜನರ ಆಸ್ತಿಗಳ ಆನ್‌ಲೈನ್‌ನಲ್ಲಿ ಹರಾಜಾಗಿರುವುದನ್ನು ಗಮನಿಸಿ ಕೆಲವೇ ಪ್ರಕರಣಗಳಿಗೆ ಕಾಯ್ದೆ ರದ್ದತಿ ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದರೆಂದರು.

ಆನ್‌ಲೈನ್ ಹರಾಜು ಬದಲಿಗೆ ಹಾಫ್‌ಲೈನ್ ಹರಾಜುಜಾರಿಗೆ ಒತ್ತಾಯಿಸಿದ್ದೇವೆ. ಸಚಿವರು ಉಡುಪಿಗೆ ಆಗಮಿಸುತ್ತಿದ್ದು, ಅವರ ಬಳಿ ಮತ್ತೊಮ್ಮೆ ಚರ್ಚಿಸುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ,ನಗರ ಮಂಡಲ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್, ಮಾಧ್ಯಮ ಪ್ರಮುಖ್ ಕೋಟೆ ದಿನೇಶ್, ರೈತಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್, ಯುವಮೋರ್ಚಾ ಜಿಲ್ಲಾಕಾರ್ಯದರ್ಶಿ ಶಶಿ, ಪ್ರಕೋಷ್ಟದ ಮುಖಂಡ ಚಮನ್, ಮಣಿಕಂಠ, ಸಚಿನ್ ಇದ್ದರು.

Insult to the women of the country by Congress and allied parties

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...