Home namma chikmagalur chikamagalur ಮಾಯಾಂಗನೆಯರ ಜಾಲ- ಮತ್ತು ಮಠ ಮಾಂತ್ರಿಕ ಕಾಟ- ಮಿಥುನ್ ವಿಲ,ವಿಲ ?
chikamagalurHomeLatest Newsnamma chikmagalur

ಮಾಯಾಂಗನೆಯರ ಜಾಲ- ಮತ್ತು ಮಠ ಮಾಂತ್ರಿಕ ಕಾಟ- ಮಿಥುನ್ ವಿಲ,ವಿಲ ?

Share
Share

ಚಿಕ್ಕಮಗಳೂರು: “ನಕಲಿ” ಐ.ಎ.ಎಸ್ ಮಿಥುನ್ ಪೊಲೀಸರ ಬಲೆಯಲ್ಲಿ ವಿಲ,ವಿಲ, ಎನ್ನಲು ಮಾಯಾಂಗನೆಯರ ಜಾಲದ ಜೊತೆಗೆ ಮಠಧೀಶರ ಕಾಟ ಕಾರಣ ಎಂದು ಬಲ್ಲ ಮೂಲಗಳು ಹೇಳುತ್ತಿವೆ.ಮೇಘನ, ಸುಮಿತ್ರಾ ಯಾರು ಎಂಬ ಪ್ರಶ್ನೆ ಜೊತೆಗೆ ಜಿಲ್ಲೆಯ ಅವಧೂತ ವಿನಯವಂತನ ಜೊತೆ ಹೆಸರಾಂತ ಮಠದ ಸ್ವಾಮೀಜಿ ಹೆಸರು ಕೇಳಿ ಬರುತ್ತಿವೆ.

ಶಾಸಕ ತಮ್ಮಯ್ಯರ ಜೊತೆಗೆ ಬೆಳಗಾವಿ ಅಧಿವೇಶನದಲ್ಲಿ ಲಾಂಜ್ ನಲ್ಲಿ ಕುಳಿತು ಊಟ ಮಾಡಿದ ಪೋಟೋ ವೈರಲ್ ಮಾಡಿ ದಂಧೆ ಆರಂಭ ಮಾಡಿದವನು ಹಲವರಿಗೆ ವಂಚಿಸಿರುವ ಮಾಹಿತಿಗಳು ದಿನ ನಿತ್ಯ ಕೇಳಿ ಬರುತ್ತಿರುವುದು ಮಾತ್ರ ಅನುಮಾನಕ್ಕೆ ಕಾರಣವಾಗಿದೆ..

ಮಿಥುನ್ ಚಿಕ್ಕಮಗಳೂರಿನ ಮಲ್ಲೇಗೌಡ ಜನರಲ್ ಆಸ್ಪತ್ರೆಯನ್ನು ತನ್ನ ಕಾರ್ಯಸ್ಥಾನ ಮಾಡಿಕೊಂಡಿರುವುದು ಮತ್ತೆ ಅಲ್ಲಿಯೇ ಕುಳಿತು ಹಣ ಮಾಡುವುದರ ಬಗ್ಗೆ ಸ್ಕೆಚ್ ರೂಪಿಸಿರುವುದರ ಜೊತೆಗೆ ಹಲವರ ಜೊತೆಗೆ ಖಾಸಗಿ ಕ್ಷಣಗಳನ್ನು ಕಳೆದಿರುವುದು ರೋಚಕವಾಗಿದೆ ಇದು ಹಲವಾರು ಸಿಬ್ಬಂದಿಗೆ ಗೊತ್ತಿದೆ ಆದರೆ ಈ ಬಗ್ಗೆ ಮಾಹಿತಿ ಇತ್ತೀಚೆಗೆ ಹೊರಬರುತ್ತಿವೆ.ನರ್ಸ್ ಒಬ್ಬಳ ಮೂಲಕ ಆಸ್ಪತ್ರೆಗೆ ಎಂಟ್ರಿ ಕೊಟ್ಟವನು ಜಿಲ್ಲಾ ಸರ್ಜನ್ ಮೂಲಕ ಹಲವರಿಗೆ ಪರಿಚಯವಾಗಿದೆ.

ಅದರಲ್ಲೂ ಕ್ಷೇತ್ರದ ಶಾಸಕ ತಮ್ಮಯ್ಯರಿಗೆ ಪರಿಚಯವಾಗಿದ್ದು ಅವನ ಕಾರ್ಯ ಚಟುವಟಿಕೆಗಳಿಗೆ ಹಾದಿ ಮಾಡಿಕೊಟ್ಟಿದೆ. ಬಡ ಹುಡುಗನೊಬ್ಬ ಜಿಲ್ಲೆಯಲ್ಲಿ ಐ.ಎ.ಎಸ್ ಪಾಸ್ ಮಾಡಿದ್ದಾನಲ್ಲ ಎಂದು ಸ್ವಲ್ಪ ಉದಾರತೆ ತೋರಿದ್ದೇ ಈಗ ಕೈ,ಕೈ ಹಿಸುಕಿ ಕೊಳ್ಳವಂತೆ ಆಗಿದೆ ಎಂದು ಹೇಳಲಾಗುತ್ತಿದೆ.ಇದಲ್ಲದೆ ಒಮ್ಮೆ ಮೂರ ಲಕ್ಷ ಹಣ ಪಡೆದು ವಾಪಸ್ಸು ಕೊಟ್ಟಿದ್ದಾನೆ.ನೆಕ್ಸ್ಟ್ ಮತ್ತೊಮ್ಮೆ ಡಬಲ್ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ .

ಇದರ ಜೊತೆಗೆ ಪಟ್ಟಣ ಸಹಕಾರ ಬ್ಯಾಂಕ್ ನಲ್ಲಿ ಹತ್ತು ಲಕ್ಷ ವೈಯಕ್ತಿಕ ಸಾಲ ಮಂಜೂರು ಮಾಡಿಸಲು ಬ್ಯಾಂಕ್ ಗೆ ಹೋಗಿ ಬಂದಿದ್ದಾನೆ. ನಂತರ ಹತ್ತಿರದ ಸಂಬಂಧಿಗೆ ಶಾಸಕರ ಮೂಲಕ ಹದಿನೈದು ಲಕ್ಷಕ್ಕೂ ಹೆಚ್ಚು ಸಾಲ ಮಂಜೂರು ಮಾಡಿಸಲಾಗಿದೆ.ಸಾಲಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಲಾಗಿದೆ. ಮಧು,ಪಾಲಾಕ್ಷ ಮತ್ತಿತರರಿಗೆ ಮೆಡಿಕಲ್ ಸಪ್ಲೈಗೆ ಅಮಿಷ ಒಡ್ಡಿದ್ದಾನೆ.ಇವರಲ್ಲದೆ ಹಲವು ವೈದ್ಯರಿಗೆ ಗಾಳ ಹಾಕಿ ಹಣ ಕಿತ್ತುಕೊಂಡಿದ್ದಾನೆ.ಇದರ ಜೊತೆಗೆ ನನ್ನ ಬಳಿ ಕೋಟ್ಯಾಂತರ ಹಣ ಇದೆ ಅದನ್ನು ಬ್ಯಾಂಕ್ ಗೆ ವರ್ಗಾಯಿಸುತ್ತೇನೆ ಎಂದು ಸುಳ್ಳು, ಸುಳ್ಳು ಹೇಳಿರುವುದು ಕೂಡ ಹರಿದಾಡುತ್ತಿದೆ.

ಒಳ್ಳೆಯ ಕಲಾವಿದರನ್ನು ಮೀರಿಸುವ ಬುದ್ದಿವಂತಿಕೆ ವಿಲನ್ ಗಳ ರೀತಿಯಲ್ಲಿ ಸುಳ್ಳು, ಸುಳ್ಳು ಹೇಳಿ ಎತ್ತಿ ಕಟ್ಟುವುದರಲ್ಲಿ ನಿಸ್ಸೀಮನಾಗಿದ್ದ ಮಿಥುನ್ ನಡವಳಿಕೆಗಳ ಬಗ್ಗೆ ಸಾಮಾನ್ಯ ನಾಲ್ಕನೇ ದರ್ಜೆಯ ನೌಕರರಿಗೆ ಗೊತ್ತಿದ್ದರೂ ಜಿಲ್ಲಾ ಸರ್ಜನ್ ಆಗಿದ್ದ ಚಂದ್ರಶೇಖರ್ ಗಮನಕ್ಕೆ ಬಾರದಿರುವುದು ಆಶ್ಚರ್ಯ.ಮಿಥುನ್ ಗೋವ,ದೆಹಲಿ,ಮಸ್ಸೂರಿ ಯಾರ ಯರ ಜೊತೆಗೆ ಹೋಗಿದ್ದ ಅಲ್ಲಿ ನಡೆದಿರುವ ಬಾನಗಡಿ ಏನು? ಹಣ ಕಳೆದುಕೊಂಡವರು ಬಾಯಿ,ಬಾಯಿ ಬಡೆದುಕೊಂಡರೆ ಸದ್ಯ ಬಚಾವ್ ಆದ್ವಲ್ಲಾ ಎಂದು ಕೆಲವರು ನಿಟ್ಟುಸಿರು ಬಿಡುತ್ತಿದ್ದಾರೆ.ಕೊಟ್ಟವನು ಕೊಡಂಗಿ ಇಸುಕೊಂಡವನು ವೀರಭದ್ರ ಎಂಬ ಗಾದೆ ನೆನಪಾಗುತ್ತಿದೆ.

ಬಿಜೆಪಿಯವರು ಬೆನ್ನುಬಿದ್ದಿದ್ದಾರೆ.ಲೀಸಾ ಫೌಂಡೇಶನ್ ನವರು ಜಾಲಾಡುತ್ತಿದ್ದಾರೆ.ಇದರ ಮಧ್ಯೆ ಬೆಂಗಳೂರಿನಲ್ಲಿ ದೂರು ದಾಖಲಾಗಿರುವುದು ಏಕೆ. ಕೊಡುವುದು ,ತೆಗೆದು ಕೊಂಡಿರುವುದು ಚಿಕ್ಕಮಗಳೂರಿನಲ್ಲಿ ಹೀಗಾಗಿ ಕೇಸ್ ನ ಬಗ್ಗೆ ವಕೀಲರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

Mithun, is it okay?

Share

Leave a comment

Leave a Reply

Your email address will not be published. Required fields are marked *

Don't Miss

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಚಿಕ್ಕಮಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ. ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ...

Related Articles

ಮೆಡಿಕಲ್ ಅಂಗಡಿಗೆ ಕನ್ನ : ₹2.66 ಲಕ್ಷ ನಗದು ದೋಚಿ ಪರಾರಿ

ಚಿಕ್ಕಮಗಳೂರು;  ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ...

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್...

ಸಾಲ ತೀರಿಸಲಾಗದೆ ರೈತ ಬೆಂಕಿ ಹಚ್ಚಿಕೊಂಡು ಸಾವು

ಕಡೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು...