Home namma chikmagalur chikamagalur ಮೃತಪಟ್ಟ ಪತಿಯ ಶವದ ಜೂತೆ 10 ದಿನ ಕಾಲಕಳೆದ ಪತ್ನಿ
chikamagalurHomeLatest Newsnamma chikmagalur

ಮೃತಪಟ್ಟ ಪತಿಯ ಶವದ ಜೂತೆ 10 ದಿನ ಕಾಲಕಳೆದ ಪತ್ನಿ

Share
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1,"remove_bg":1},"is_sticker":false,"edited_since_last_sticker_save":true,"containsFTESticker":false}
Share

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಇಲ್ಲಿನ ನಿವಾಸಿ 77 ವರ್ಷದ ಸಿರಿಲ್ ಮೋನಿಸ್ ಎಂಬುವವರು ಸುಮಾರು ಹತ್ತು ದಿನಗಳ ಹಿಂದೆಯೇ ಅನಾರೋಗ್ಯದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು.

ಆದರೆ ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ, ಪತಿ ಮೃತಪಟ್ಟಿರುವುದು ಅವರಿಗೆ ತಿಳಿಯದೆ ಹತ್ತು ದಿನಗಳ ಕಾಲ ಕೊಳೆತು ಹುಳ ಬಿದ್ದಿದ್ದ ಶವದ ಜೊತೆಯಲ್ಲೇ ವಾಸವಾಗಿದ್ದರು. ಸಿರಿಲ್ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ,

ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗಲೆಲ್ಲಾ, ಅಪ್ಪ ಚೆನ್ನಾಗಿದ್ದಾರೆ ಎಂದು ತಾಯಿ ಉತ್ತರಿಸುತ್ತಿದ್ದರು. ಇತ್ತೀಚೆಗಷ್ಟೇ ಊರಿಗೆ ಬಂದು ಹೋಗಿದ್ದ ಮಗನಿಗೆ ತಂದೆಯ ಸಾವಿನ ಸುಳಿವೇ ಸಿಕ್ಕಿರಲಿಲ್ಲ. ಮನೆಯಿಂದ ವಿಪರೀತ ವಾಸನೆ ಬರಲು ಆರಂಭಿಸಿದಾಗ ಸ್ಥಳೀಯರು ಗಮನಹರಿಸಿದ್ದು, ಆಗ ಸತ್ಯ ಬೆಳಕಿಗೆ ಬಂದಿದೆ.

ಪೊಲೀಸರು ಸ್ಥಳಕ್ಕೆ ಬಂದಾಗಲೂ ಮಾನಸಿಕ ಅಸ್ವಸ್ಥ ಪತ್ನಿ “ನನ್ನ ಗಂಡ ನನಗೆ ಬೇಕು” ಎಂದು ಪಟ್ಟು ಹಿಡಿದು ಶವವನ್ನು ಮುಟ್ಟಲು ಬಿಡದೆ ರೋದಿಸಿದ್ದು ನೆರೆದವರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ಶವವು ಸಂಪೂರ್ಣವಾಗಿ ಕೊಳೆತು ಹುಳ ಹಿಡಿದಿದ್ದರಿಂದ ಸ್ಥಳೀಯರು ಹತ್ತಿರ ಹೋಗಲು ಹಿಂಜರಿಯುತ್ತಿದ್ದಾಗ, ಸಮಾಜ ಸೇವಕ ಆರೀಫ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು.

ಅಂತಿಮವಾಗಿ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಂಜೆ ವೇಳೆಗೆ ಊರಿಗೆ ಬಂದ ಮಗನಿಗೆ ಅಪ್ಪನ ಮುಖ ನೋಡುವ ಭಾಗ್ಯವೂ ಸಿಗಲಿಲ್ಲ, ಇತ್ತ ಮಗಳು ವಿದೇಶದಿಂದ ಬರಲಾಗದ ಪರಿಸ್ಥಿತಿಯಲ್ಲಿದ್ದರು. ತಂದೆಯ ಸಾವಿನ ವಿಷಯ ತಿಳಿಯದ ತಾಯಿ ಮತ್ತು ತಂದೆಯ ಅಂತ್ಯಕಾಲದಲ್ಲಿ ಜೊತೆಗಿಲ್ಲದ ಮಕ್ಕಳ ಸ್ಥಿತಿ ಕಂಡು ಇಡೀ ಗ್ರಾಮವೇ ಕಂಬನಿ ಮಿಡಿದಿದೆ.

Wife who spent 10 days with her husband after his death

Share

Leave a comment

Leave a Reply

Your email address will not be published. Required fields are marked *

Don't Miss

ಕಳಸದ ಹೆಮ್ಮಕ್ಕಿಯಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲ್ ಇಡಕಣಿ ಗ್ರಾಮದ ಹೆಮ್ಮಕ್ಕಿ ಭಾಗದಲ್ಲಿ ಕಳೆದ ಹತ್ತು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಇಲ್ಲಿನ ಮುಂಡಾನೆ ಮೋಹನ್...

ಮುಳ್ಳಯ್ಯನಗಿರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್

ಚಿಕ್ಕಮಗಳೂರು:  ಕರ್ನಾಟಕದ ನೆಚ್ಚಿನ ಪ್ರವಾಸಿ ತಾಣವಾದ ಕಾಫಿನಾಡು ಚಿಕ್ಕಮಗಳೂರಿನ  ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ವಿಶ್ವ ಪ್ರಸಿದ್ಧ ಎತ್ತರದ ಶಿಖರ ಮುಳ್ಳಯ್ಯನಗಿರಿ...

Related Articles

ಕೇರಳದ ಶ್ರೀನಂದಾ ಮಿಸ್ಸಿಂಗ್ – ಅಪಸ್ವರಗಳ ಮಧ್ಯೆ ಹಲವು ಅನುಮಾನಗಳು ?

ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್ ನಿಂದ ಪ್ರವಾಸಕ್ಕೆ ಬಂದಿದ್ದಾ ನಲವತ್ತು ಜನರ ಮಧ್ಯೆ ಎಸ್, ಎಸ್, ಎಲ್,ಸಿ.ಓದುತ್ತಿದ್ದ...

ಪ್ರಚೋದಕಾರಿ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷರ ಬಂಧನಕ್ಕೆ ಮನವಿ

ಚಿಕ್ಕಮಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಪ್ರಚೋದಕಾರಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ...

ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊಡ್ಡ ಸವಾಲಾಗಿದೆ

ಚಿಕ್ಕಮಗಳೂರು: ಆಧುನಿಕ ಜೀವನ ಪದ್ಧತಿಯಲ್ಲಿ ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊ ಡ್ಡ ಸವಾಲಾಗಿ ಪರಿಣಾಮಿಸಿದೆ. ಪ್ರಸ್ತುತ...

ದ್ವೀತಿಯ ಪಿಯುಸಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ 90.80ರಷ್ಟು ಫಲಿತಾಂಶ

ಚಿಕ್ಕಮಗಳೂರು: ಪಿಯುಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇಕಡವಾರು ಉತ್ತಮ ಸಾಧನೆ ಮಾಡಿದೆ, ಕಳೆದ ವರ್ಷ...