ಚಿಕ್ಕಮಗಳೂರು: ಬ್ಯಾಂಕ್ ಕೆಲಸದ ನಿಮಿತ್ತ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಬ್ಯಾಂಕ್ಗೆ ತೆರಳಿದ್ದಾಗ ಕಾರಿಗೆ ಹಾನಿ ಮಾಡಿ ಕಳ್ಳತನ ನಡೆಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂದುವಳ್ಳಿಯ ಕಾಫಿ ಬೆಳೆಗಾರ ಮತ್ತು ಕಾಫಿ ಮರ್ಚೆಂಟ್ ಅರವಿಂದ್ ತಮ್ಮ ಸ್ಯಾಂಟ್ರೋ ಕಾರನ್ನು ರಸ್ತೆ ಬದಿ ನಿಲ್ಲಿಸಿ ಬ್ಯಾಂಕ್ಗೆ ಹೋಗಿದ್ದರು ಅವರು ವಾಪಸ್ ಬಂದಾಗ, ಕಾರಿನ ಬಲಭಾಗದ ಮುಂಭಾಗದ ಬಾಗಿಲು ಒಡೆದಿರುವುದು ಕಂಡುಬಂದಿದೆ.
ಅಷ್ಟೇ ಅಲ್ಲದೆ, ದುಷ್ಕರ್ಮಿಗಳು ಕಾರಿನ ಚಕ್ರಗಳ ಗಾಳಿ ತೆಗೆದು ಪಂಚರ್ ಮಾಡಿದ್ದಲ್ಲದೆ, ಕಲ್ಲಿನಿಂದ ಉಜ್ಜಿ ಗಾಜುಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದ್ದಾರೆ. ಕಾರಿನ ಒಳಗಿಟ್ಟಿದ್ದ ಸುಮಾರು ಎರಡು ಲಕ್ಷ ರೂಪಾಯಿ ನಗದು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆ ಪತ್ರಗಳು ನಾಪತ್ತೆಯಾಗಿವೆ.
ಈ ಕೃತ್ಯವನ್ನು ಸ್ಥಳೀಯ ನಿವಾಸಿಯಾದ ಶರತ್ ಎಂಬ ವ್ಯಕ್ತಿ ಎಸಗಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದುಹೋದ ಹಣ ಮತ್ತು ದಾಖಲೆಗಳನ್ನು ಕೊಡಿಸಿ ನ್ಯಾಯ ಒದಗಿಸುವಂತೆ ಸಂತ್ರಸ್ತರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Rs 2 lakh stolen from car on Bar Line Road
Leave a comment