ಅರಣ್ಯ ಸಚಿವ ಖಂಡ್ರೆ(ಕಂಡರೆ) ಆನೆ,ಹುಲಿ.ಸಿಂಹ,ಇಲಿ,ಪಲ್ಲಿಗಳು ನಡುಗುತ್ತವೆ ಎಂಬ ಭ್ರಮೆ ಯಲ್ಲಿ ಬಾಳೆ ಹೊನ್ನೂರಲ್ಲಿ ರೈತರು,ಬೆಳೆಗಾರರು ಮತ್ತು ವಿವಿಧ ಮುಖಂಡರುಗಳ ಸಭೆ ನಡೆಸಲಾಗಿದೆ.
ಖಂಡ್ರೆ ಬೆಟ್ಟ(ಗುಡ್ಡ) ಬಗೆದು ಇಲಿ ಹಿಡಿಯುವ ಪ್ರಯತ್ನ ನೋಡಿದರೆ ನಗೆ ಬರುತ್ತಿದೆ.ಮೂಲ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಬೇಕಾಗಿದೆ ಎನ್ನಿಸುತ್ತದೆ. ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿನಲ್ಲಿ ಸಂಚಾರ ಮಾಡುತ್ತಿರುವುದು ಮುಖ್ಯವಾಗಿ ಅರಣ್ಯ ಪ್ರದೇಶ ನಾಶವಾಗುತ್ತಿರುವುದು ಮುಖ್ಯ ಕಾರಣ.
ಇನ್ನೊಂದು ಕಾಡಿನಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರದ ಕೊರತೆ.ನೀರಿನ ಅಭಾವ ಜೊತೆಗೆ ಅರಣ್ಯ ಪ್ರದೇಶದಲ್ಲಿ ಹೋಮ್ ಸ್ಟೇ, ರೆಸಾರ್ಟ್ ರಸ್ತೆಗಳ ಅಭಿವೃದ್ಧಿ ಮತ್ತು ವಾಹನಗಳು ಹಾಗೂ ಜನರ ಓಡಾಟ ಹೆಚ್ಚಾಗಿರುವುದು ಮುಖ್ಯವಾದ ಕಾರಣಗಳು.ಇವಗಳ ಬಗ್ಗೆ ಗಮನ ಹರಿಸದೆ ಎಷ್ಟು ಸಭೆ ನಡೆಸಿದರೆ ಪ್ರಯೋಜನ ಆಗುವುದಿಲ್ಲ.
ಹೆಣದ ಮುಂದೆ ರಾಜಕಾರಣ ಮಾಡುವ ಜೀವರಾಜ್ ಅಂಡ್ ಟೀಮ್ ಸಭೆಗೆ ಬಾರದೆ ನಾಪತ್ತೆಯಾಗಿದ್ದು ಮಾತ್ರ ಸೋಜಿಗದ ವಿಷಯ ಎನ್ನಲು ಸಾಧ್ಯವಿಲ್ಲ. ಇವರುಗಳು ಸಭೆಗೆ ಬಂದು ಸಮಸ್ಯೆ ಬಗ್ಗೆ ಹೇಳದಿರುವುದು ನೋಡಿದರೆ ಕಾಡು ಪ್ರಾಣಿಗಳು ಜನರ ಜೀವ ತೆಗೆದರೆ ರಾಜಕಾರಣ ಮಾಡಬಹುದು ಎಂದು ತಿಳಿದಂತೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.
ಖಂಡ್ರೆ ಕೂಡ ಜನರ ಸಮಸ್ಯೆ ನೆಪದಲ್ಲಿ ಸಭೆ ನಡೆಸಿ ಹೋಗುವುದಕ್ಕಿಂತ ಬಾಳೆ ಹೊನ್ನೂರು ಸ್ವಾಮೀಜಿಯ ಕೃಪಕಾಟಕ್ಷದ ಜೊತೆಗೆ ಚಿಕ್ಕಮಗಳೂರಿನ ಬಸವ ಮಂದಿರದ ಕಾರ್ಯಕ್ರಮ ಮುಖ್ಯ ಎನ್ನಿಸುತ್ತಿದೆ.
ಖಂಡ್ರೆಗೆ ನಿಜವಾದ ಕಾಳಜಿ ಇದ್ದರೆ ಪ್ರಾಣಿಗಳಿಂದ ಆಗುತ್ತಿರುವ ಅನಾಹುತ ತಡೆಯ ಬೇಕಾದರೆ ಒತ್ತುವರಿಯಾಗಿರುವ ಅರಣ್ಯ ಪ್ರದೇಶ ಗುರ್ತಿಸಿ ತೆರುವು ಗೊಳಿಸ ಬೇಕು.ಅರಣ್ಯ ಇಲಾಖೆಯವರು ಪ್ರಾಣಿಗಳ ರಕ್ಷಣೆಗೆ ಬೇಕಾದ ಅಭಿವೃದ್ಧಿ ಕೆಲಸದಲ್ಲಿ ಲೂಟಿ ಮಾಡುತ್ತಿರುವುದನ್ನು ತಡೆಯಬೇಕು
ಇದಕ್ಕೆ ಆದ್ಯತೆ ಕೊಡುವುದು ಬಿಟ್ಟು ಕಾಟಚಾರಕ್ಕೆ ಸಭೆ ನಡೆಸಿ ಕಾಫಿ,ಕುಡಿದು ತಿಂಡಿ ತಿಂದು ಹಾರ,ತುರಾಯಿ ಹಾಕಿಸಿ ಕೊಂಡು ಹೋದರೆ ಪ್ರಯೋಜನ ಏನು? ಈಗಾಗಲೇ ಜಿಲ್ಲೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಆನೆ ತುಳಿತದಿಂದ ಸಾವಪ್ಪಿದರೆ ಕಾಡು ಕೋಣಗಳಿಂದ ಹಲವರಿಗೆ ಅನಾಹುತವಾಗಿದೆ.
ಕಾಡು ಹಂದಿಗಳು ರೈತರು ಬೆಳೆದ ಬೆಳೆ ನಾಶಮಾಡಿವೆ.ಇದಕ್ಕೆ ತಕ್ಷಣ ಪರಿಹಾರ ನೀಡ ಬೇಕು. ಖಂಡ್ರೆ, ಖಂಡ್ರೆ ಕಂಡರೆ ಕಾಡು ಪ್ರಾಣಿಗಳು ಹೋಗುವುದಿಲ್ಲ ಸಭೆ ನಡೆಸಿದರೆ ಪ್ರಯೋಜನ ಆಗುವುದಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದವರಿಂದ ನಿರೀಕ್ಷೆ ಮಾಡುವುದು ಮೂರ್ಖತನ ಎನ್ನಲೇ ಬೇಕಾಗುತ್ತದೆ.
Can the Khandre Sabha stop the “disaster” of wild animals?
Leave a comment