ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗಿನಿಂದ ಸುಮಾರು 10,64,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೂರುದಾರೆ ಮಹಿಳೆಯು ಫೆ. 25ರಂದು ಮಧ್ಯಾಹ್ನ 2:45 ರಿಂದ 3:00 ಗಂಟೆಯ ಸುಮಾರಿಗೆ ಬಸ್ ಹತ್ತಿದಾಗ ತಮ್ಮ ಬ್ಯಾಗಿನಲ್ಲಿದ್ದ ಒಡವೆಗಳನ್ನು ಖಚಿತಪಡಿಸಿಕೊಂಡು, ಜಿಪ್ ಹಾಕಿ ಬ್ಯಾಗನ್ನು ತೊಡೆಯ ಮೇಲೆ ಇಟ್ಟುಕೊಂಡು ಪ್ರಯಾಣಿಸಿದ್ದರು.
ಸಖರಾಯಪಟ್ಟಣದಲ್ಲಿ ಬಸ್ ಇಳಿದು ಗಮನಿಸಿದಾಗ ಬ್ಯಾಗಿನ ಜಿಪ್ ತೆರೆದಿರುವುದು ಕಂಡುಬಂದಿದೆ. ಆತಂಕಗೊಂಡ ಮಹಿಳೆಯು ಬಸ್ ನಿಲ್ದಾಣದಲ್ಲಿ ಪರಿಶೀಲಿಸದೆ, ನೇರವಾಗಿ ತಮ್ಮ ಸೊಸೆಯ ಅಕ್ಕನ ಮನೆಗೆ ತೆರಳಿ ಬ್ಯಾಗ್ ಪರೀಕ್ಷಿಸಿದಾಗ ಒಳಗೆ ಇಟ್ಟಿದ್ದ ಒಡವೆ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು 40 ಗ್ರಾಂ ತೂಕದ ಎರಡು ಬಳೆಗಳು (໑໐໙໙ 230 5,32,000 ) ಸುಮಾರು 35 ಗ್ರಾಂ ತೂಕದ ಒಂದು ನೆಕ್ಸಸ್ (ಅಂದಾಜು ಬೆಲೆ 4,65,500 ರೂ.) 5 ಗ್ರಾಂ ತೂಕದ ಒಂದು ಜೊತೆ ಓಲೆಗಳು (ಅಂದಾಜು ಬೆಲೆ 66,500 ರೂ.) ಒಟ್ಟು 80 ಗ್ರಾಂ ತೂಕದ, 10,64,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪತ್ತೆಹಚ್ಚಿಕೊಡುವಂತೆ ಮಹಿಳೆಯು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Woman’s jewellery stolen while travelling in KSRTC bus
Leave a comment