Home namma chikmagalur chikamagalur ಕಾಡಾನೆ ತುಳಿತಕ್ಕೆ ಮಹಿಳೆ ಬಲಿ-29 ಮಂದಿ ವಿರುದ್ಧ ಎಫ್.ಐ.ಆರ್ ದಾಖಲು
chikamagalurCrime NewsHomeLatest Newsnamma chikmagalur

ಕಾಡಾನೆ ತುಳಿತಕ್ಕೆ ಮಹಿಳೆ ಬಲಿ-29 ಮಂದಿ ವಿರುದ್ಧ ಎಫ್.ಐ.ಆರ್ ದಾಖಲು

Share
Share

ಚಿಕ್ಕಮಗಳೂರು: ಕಾಡಾನೆ ತುಳಿದು ಮಹಿಳೆಯೊಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಗೆ ಶವವನ್ನು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ಪೊಲೀಸರು ೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೊಚಂದ್ರಶೇಖರ ರೈ ಹೊನ್ನೆಕೊಪ್ಪ,ಅಭಿಷೇಕ್, ಹೊಸಳ್ಳಿ, ಮಂಜುಶೆಟ್ಟಿ, ಕಡಬಗೆರೆ,ಪ್ರವೀಣ್ ಖಾಂಡ್ಯ, ಆದರ್ಶ, ಕುಂಬರಗೋಡು,ಕಾರ್ತಿಕ್ ಹಳೆಹಳ್ಳಿ, ಪುರುಷೋತ್ತಮ ಕೂಸ್ಕಲ್,ಸಚಿನ್ ಮೂಡುಬಾಗಿಲು ಮತ್ತು ಧನಂಜಯ ವರ್ಕಟ್ಟೆ ಗ್ರಾಮ ಮೂಡುಬಾಗಿಲು ಅವರುಗಳ ಮೇಲೆ ಕೇಸು ದಾಖಲಾಗಿದೆ.

ಚಿಕ್ಕಮಗಳೂರು ತಾಲೂಕು ಹ್ಯಾರಂಬಿಪುರ, ನಾಗೇಶಗೌಡ ಅವರ ತೋಟದಲ್ಲಿ ಕಾಡಾನೆ ತುಳಿತದಿಂದ ಬೋರಮ್ಮ ಸಾವಪ್ಪಿದ್ದು, ಮೃತರ ಮಗ ಹಾಗೂ ಅರಣ್ಯ ಇಲಾಖೆಯವರು ಆ ಮಹಿಳೆಯ ಶವವನ್ನು ತರುತ್ತಿದ್ದಾಗ ಚಂದ್ರಶೇಖರ ರೈ, ಮಂಜಶೆಟ್ಟಿ, ಹಾಗೂ ಇತರೆ ಜನರು ಕಡಬಗೆರೆಯಲ್ಲಿ ಬಂದು ವಾಹನ ಅಡ್ಡಗಟ್ಟಿ ಬಲವಂತವಾಗಿ ತಡೆದು ಕರ್ತವ್ಯಕ್ಕೆ ಅಡ್ಡಿ ಮಾಡಿ ರಸ್ತೆ ತಡೆ ನಡೆಸಲಾಗಿದೆ.

ಮಹಿಳೆ ಶವವನ್ನು ರಸ್ತೆ ಮಧ್ಯದಲ್ಲಿ ಇಟ್ಟು ಪ್ರತಿಭಟನೆ ಮಾಡುತ್ತಾ ಪ್ರಚೋದನೆಯೊಂದಿಗೆ ಘೋಷಣೆ ಕೂಗುತ್ತಾ ರಸ್ತೆ ತಡೆ ಮಾಡಿ ಸಾರ್ವಜನಿಕ ವಾಹನ ಸುಗಮ ಸಂಚಾರಕ್ಕೆ ತಡೆ ಮಾಡಲಾಗಿದೆ ಎಂದು ಕಾನೂನು ಸುವ್ಯವಸ್ಥೆ ನೀಕ್ಷಕರ ಅಂಬರೀಶ್ ನೀಡಿರುವ ದೂರಿನಲಿ ತಿಳಿಸಲಾಗಿದೆ.

ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು,ಜಿಲ್ಲಾ ಅರಣ್ಯಾಧಿಕಾರಿಗಳು ಪರಿಹಾರದ ಚೆಕ್‌ನ್ನು ಮೃತರ ಕುಟುಂಬಕ್ಕೆ ನೀಡಲು ಹೋದಾಗ ಆ ಗುಂಪಿನ ಪೈಕಿ ೪೦-೫೦ ಜನರು ದಿಕ್ಕಾರ ಕೂಗುತ್ತಾ ನಿಮ್ಮ ೨೦ ಲಕ್ಷ ಹಣ ಬೇಡ, ೫೦ ಲಕ್ಷ ಹಣ ಬೇಕು ಎಂದು ಒತ್ತಾಯಿಸಿ ಪೋಲಿಸರನ್ನು ಹೊರದಬ್ಬಲು ಪ್ರಾರಂಭಿಸಿದರು ಮೃತರ ಸಂಬಂಧಿಕರುಗಳು ತಮ್ಮ ಮೃತದೇಹವನ್ನು ಊರಿಗೆ ತೆಗೆದುಕೊಂಡು ಸಂಸ್ಕಾರಕಾರ್ಯ ನೆಡೆಸಲು ಹೋಗಬೇಕು ಎಂದು ಅನುವು ಮಾಡಿಕೊಡಿ ಎಂದು ಗೋಗರಿದರೂ ಕೂಡ ನಾವು ಶವವನ್ನು ಬಿಡುವುದಿಲ್ಲವೆಂದು ತಡೆ ಮಾಡುತ್ತಾ ಧಿಕ್ಕಾರ ಕೂಗಿದರು.

ಕತ್ತಲೆಯಾಗುವುದನ್ನು ಮನಗಂಡು ಇದ್ದಕ್ಕಿದ್ದಂತೆಯೇ ಪೊಲೀಸರ ಮೇಲೆ ಕಲ್ಲುತೂರಾಟ ಮಾಡಲು ಪ್ರಾರಂಭಿಸಿದರು ಆ ಸಮಯದಲ್ಲಿ ಬಂದೋಬಸ್ತ್‌ನಲ್ಲಿದ್ದ ಅಧಿಕಾರಿಗಳಾದ ಮಹಿಳಾ ಪೊಲೀಸ್ ಸಿಬ್ಬಂದಿ ರೇಖಾ, ಪಿ.ಎಸ್.ಐ ಮಧು ಕೊಪ್ಪ, ಬಾಳೆಹೊನ್ನೂರು ಪೊಲೀಸ್ ಠಾಣಾ ಸಿಬ್ಬಂದಿಗಳಾದ ಜಯರಾಮೇಗೌಡ, ಮಂಜುನಾಥ, ಭೀಮಸೇನ ಕಣಬೂರು, ಹನುಮಂತ ಗುಡದಿನ್ನಿ, ರಘುನಾಯ್ಕ, ಶಿವಾನಂದ, ಕೊಪ್ಪ ಪೊಲೀಸ್ ಠಾಣೆ ಸಿಬ್ಬಂದಿ ಯುವರಾಜ ಅವರುಗಳಿಗೆ ರಕ್ತಗಾಯವಾಗಿರುತ್ತದೆ ದೂರಿನಲ್ಲಿ ಹೇಳಲಾಗಿದೆ.

ಆ ಗುಂಪು ಬಂದೋಬಸ್ತ್‌ಗೆ ಬಂದಿದ್ದ ಸಶಸ್ತ್ರ ಮೀಸಲು ಪಡೆಯ ವಾಹನವನ್ನು ಬಲವಾಗಿ ಎತ್ತಿ ಬೀಳಿಸಲು ಬಲಪ್ರಯೋಗ ಮಾಡಿದ್ದು ವಿಧಿಯಿಲ್ಲದೇ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಪ್ರಾಣಹಾನಿ ತಡೆಯುವ ಉದ್ದೇಶದಿಂದ ಸ್ಥಳದಲ್ಲಿದ್ದ ಸಿಬ್ಬಂದಿಗಳ ಸಹಾಯದಿಂದ ಆ ಗುಂಪನ್ನು ಚದುರಿಸಿ ಆನೆ ತುಳಿತಕ್ಕೆ ಒಳಗಾದ ಮಹಿಳೆ ಶವವನ್ನು ಚಿಕ್ಕಮಗಳೂರಿಗೆ ಶವಾಗಾರಕ್ಕೆ ಅವರ ಸಂಬಂದಿಕರೊಂದಿಗೆ ಕಳುಹಿಸಿಕೊಡಲಾಗಿದೆ.

ಪೊಲೀಸರು ನೀಡಿದ ಸೂಚನೆಗಳನ್ನು ದಿಕ್ಕರಿಸಿ ಕತ್ತಲೆಯಾಗುವುದನ್ನು ಮನಗಂಡು ಪೊಲೀಸರ ಮೇಲೆ ಕಲ್ಲು ತೂರಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಯನ್ನುಂಟುಮಾಡಿ ಸುಳ್ಳು ಮಾಹಿತಿ ಪ್ರಚಾರ ಮಾಡಿ ಪ್ರಚೋದಿಸಿತ್ತಾ ಗುಂಪು ಸೇರಿಸಿದ ಚಂದ್ರಶೇಖರ ರೈ. ಅಭಿಷೇಕ್, ಮಂಜುಶೆಟ್ಟಿ, ಪ್ರವೀಣ್ ಖಾಂಡ್ಯ, ಆದರ್ಶ, ಕಾರ್ತಿಕ್, ಪುರುಷೋತ್ತಮ, ಸಚಿನ್, ಧನಂಜಯ ಹಾಗೂ ಇತರೆ ಸುಮಾರು ೨೦ ಕ್ಕೂ ಹೆಚ್ಚು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಠಾಣೆಗೆ ಆಗಮಿಸಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ‌

FIR registered against 29 people

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...